ಮಣ್ಣಲ್ಲಿ ಮಣ್ಣಾದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್..ಮಗನಿಂದ ಅಂತಿಮ ಸಂಸ್ಕಾರ

Cinema

ಬಹುಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ರವರು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದರು. ಇನ್ನು ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.

ಇನ್ನು ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು ಅಂತಿಮಕ್ರಿಯೆಯ ಸಂಧರ್ಭದಲ್ಲಿ ಹೆಚ್ಚಿನ ಜನರು ಸೇರಬಾರದು ಎಂದು ಪೊಲೀಸರು ಕುಟುಂಬಸ್ಥರಿಗೆ ಮಾತ್ರ ಬುಲೆಟ್ ಪ್ರಕಾಶ್ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿದ್ದರು.

ಇನ್ನು ತೆರೆದ ವಾಹನದಲ್ಲಿಯೇ ಬುಲೆಟ್ ಪ್ರಕಾಶ್ ರವರ ಪಾರ್ಥಿವ ಶರೀರವನಂ ಹೆಬ್ಬಾಳದ ರುದ್ರಭೂಮಿಯವರಿಗೆ ತರಲಾಗಿತ್ತು. ಇನ್ನು ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳನ್ನ ಪೊಲೀಸರು ತಡೆದಿದ್ದಾರೆ.

ಇನ್ನು ಬುಲೆಟ್ ಪ್ರಕಾಶ್ ರವರ ಮಗ ರಕ್ಷಕ್ ಮಡಿವಾಳ ಸಂಪ್ರದಾಯದಂತೆ ತಂದೆಯ ಸಂಸ್ಕಾರದ ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಿದ್ದಾರೆ.