ದರ್ಶನ್ ಜೊತೆ ಬುಲೆಟ್ ಪ್ರಕಾಶ್ ಕಂಡಿದ್ದ ಕನಸು ಕೊನೆಗೂ ನನಸಾಗಲೇ ಇಲ್ಲ.?

Advertisements

ಸ್ಯಾಂಡಲ್ವುಡ್ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರು ಬುಲೆಟ್ ಪ್ರಕಾಶ್. ೩೨೫ ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ತಮ್ಮ ವಿಭಿನ್ನ ತಮ್ಮ ವಿಭಿನ್ನ ಹಾಸ್ಯ ಅಭಿನಯದಿನಲೇ ಜನರನ್ನ ನಗೆಗಡಲಿನಲ್ಲಿ ತೇಲಿಸಿದ್ದರು.

ಆದರೆ ಗಾಸಿಟ್ರಿಕ್ ಸಮಸ್ಯೆಯೆಂದು ಆಸ್ಪತ್ರೆ ಸೇರಿದ್ದ ಬುಲೆಟ್ ಪ್ರಕಾಶ್ ರವರಿಗೆ ಲಿವರ್, ಕಿಡ್ನಿ ವೈಫಲ್ಯ ಆಗಿದ್ದು ವೈದ್ಯರಿಗೆ ಕಂಡುಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರುಳೆದಿದ್ದಾರೆ. ಆದರೆ ಇದಕ್ಕೆ ಮೂಲ ಕಾರಣ ಕಳೆದ ವರ್ಷ ಬುಲೆಟ್ ಪ್ರಕಾಶ್ ರವರು ತೂಕ ಕಡಿಮೆ ಮಾಡಿಕೊಳ್ಳಲೆಂದು ಆಸ್ಪತ್ರೆ ಸೇರಿದ್ದೇ ಅದರ ಪ್ರಭಾವವೇ ಬಹು ಅಂಗಗ ವೈಫಲ್ಯಕ್ಕೆ ಒಳಗಾಗಿದ್ದರು.

ಇನ್ನು ಶಾಂತಿ ಕ್ರಾಂತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಬುಲೆಟ್ ಪ್ರಕಾಶ್ ರವರು ಅಣ್ಣಾವ್ರು ಸೇರಿದಂತೆ ದರ್ಶನ್, ಶಿವರಾಜ್ ಕುಮಾರ ಹೀಗೆ ಎಲ್ಲಾ ಸ್ಟಾರ್ ನಂತರ ಜೊತೆ ನಟಿಸಿದ್ದಾರೆ. ಇನ್ನು ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ರವರ ಮಧ್ಯೆ ವಿಶೇಷವಾದ ಸ್ನೇಹವಿತ್ತು. ಇನ್ನು ದರ್ಶನ್ ಚಿತ್ರ ಎಂದರೆ ಬುಲೆಟ್ ಪ್ರಕಾಶ್ ರವರಿಗೆ ಅಲ್ಲೊಂದು ಪಾತ್ರ ಇದ್ದೇ ಇರುತಿತ್ತು, ಅಷ್ಟೊಂದು ಸ್ನೇಹವಿತ್ತು ಅವರಿಬ್ಬರ ಮಧ್ಯೆ.