ತನ್ನ ಕಾರ್ ಡ್ರೈವರ್ ಹುಟ್ಟಿದ ಹಬ್ಬಕ್ಕೆ ದುಬಾರಿ ಬೆಲೆಯ ಕಾರ್ ಗಿಫ್ಟ್ ಕೊಟ್ಟ ಸ್ಟಾರ್ ನಟಿ !

Cinema
Advertisements

ಸ್ನೇಹಿತರೇ, ಹುಟ್ಟುಹಬ್ಬ ಬಂತೆಂದರೆ ಸಾಕು ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ಉಡುಗೊರೆಗಳ ಕೊಡುವುದು ವಾಡಿಕೆ. ಇನ್ನು ಒಬ್ಬೊಬ್ಬರು ಒಂದೊಂದು ರೀತಿಯ, ಅವರ ಪ್ರೀತಿಗೆ ಅನುಗುಣವಾಗಿ ಉಡುಗೊರೆಗಳನ್ನ ನೀಡುತ್ತಾರೆ. ಇನ್ನು ಸೆಲೆಬ್ರೆಟಿಗಳು ಕೂಡ ತಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ, ತಮ್ಮ ಬಾಡಿ ಗಾರ್ಡ್ ಗಳಿಗೆ ಹಾಗೂ ಕಾರ್ ಡ್ರೈವರ್ ಗಳಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಉಡುಗೊರೆಗಳನ್ನ ಕೊಟ್ಟಿರುವ ಸುದ್ದಿಗಳ ಬಗ್ಗೆ ನಾವು ಓದಿದ್ದೇವೆ. ಈಗ ಇದೆ ರೀತಿ ದಕ್ಷಿಣ ಭಾರತದ ಈ ಖ್ಯಾತ ನಟಿ ತಮ್ಮ ಕಾರ್ ಡ್ರೈವರ್ ಅವರ ಹುಟ್ಟಿದ ಹಬ್ಬಕ್ಕೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಉಡುಗೊರೆಯನ್ನ ನೀಡಿ ತಮ್ಮ ಮನೆಯ ಕೆಲಸಗಾರರ ಮೇಲಿರುವ ಪ್ರೀತಿಯನ್ನ ತೋರಿಸಿಕೊಂಡಿದ್ದಾರೆ.

[widget id=”custom_html-4″]

Advertisements

ಹೌದು, ನಟ ನಟಿಯರನ್ನ ಸಮಯಕ್ಕೆ ಸರಿಯಾಗಿ ಶೂಟಿಂಗ್ ಸ್ಥಳ ಸೇರಿದಂತೆ ಅವರು ಹೋಗಬೇಕಾದಲ್ಲಿಗೆ ಸಮಯಕ್ಕೆ ಸರಿಯಾಗಿ ಸುರಕ್ಷತೆಯಿಂದ ಕರೆದುಕೊಂಡು ಹೋಗುವವರು ಅವರ ಕಾರ್ ಡ್ರೈವರ್ ಗಳು. ಯಾರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿರಲಿ ಅವರು ತಮ್ಮ ಕೆಲಸಗಾರರ ಮೇಲೆ ತೋರಿಸುವ ಪ್ರೀತಿಯೇ ಅವರ ಗುಣವನ್ನ ಎತ್ತಿ ತೋರಿಸುತ್ತದೆ. ಇದೆ ರೀತಿಯ ಕೆಲಸವನ್ನ ಬಾಹುಬಲಿ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಕೂಡ ಮಾಡಿದ್ದಾರೆ. ಹೌದು, ಅನುಷ್ಕಾ ಶೆಟ್ಟಿ BMW6 ಸಿರೀಸ್ ಕಾರ್ ಗಳು ಸೇರಿದಂತೆ ಟೊಯೋಟಾ ಕೊರೋಲಾ ದಂತಹ ದುಬಾರಿ ಕಾರ್ ಗಳ ಒಡತಿಯಾಗಿದ್ದಾಳೆ. ಲಕ್ಸುರಿಯಸ್ ಆಗಿರುವ 12 ಕೋಟಿ ಬೆಲೆಬಾಳುವ ಬಂಗಲೆಯ ಒಡತಿ ಕೂಡ ನಟಿ ಅನುಷ್ಕಾ ಶೆಟ್ಟಿ.

[widget id=”custom_html-4″]

ಇಷ್ಟೆಲ್ಲಾ ಆಸ್ತಿ ಹೊಂದಿರುವ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ತನ್ನ ಕಾರಿನ ಡ್ರೈವರ್ ಗೆ ದುಬಾರಿ ಬೆಲೆ ಬಾಳುವ ಗಿಫ್ಟ್ ನೀಡುವ ಮೂಲಕ ಟಾಲಿವುಡ್ ಚಿತ್ರರಂಗ ಅಚ್ಚರಿಗೊಳ್ಳುವನಂತೆ ಮಾಡಿದ್ದಾರೆ. ತಮ್ಮನ್ನ ಸಮಯಕ್ಕೆ ಸರಿಯಾಗಿ ಹೋಗಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವ ತನ್ನ ಕಾರ್ ಡ್ರೈವರ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಬರೋಬ್ಬರಿ ೧೨ ಲಕ್ಷ ಬೆಲೆಬಾಳುವ ಕಾರ್ ಗಿಫ್ಟ್ ನೀಡಿದ್ದಾರೆ. ಸ್ನೇಹಿತರೇ. ಈಗಿನ ದಿನಗಳಲ್ಲಿ ನಿಯತ್ತಿನಿಂದ ಮಾಡಿದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಸಂಬಳ ಕೊಡದೆ ಹಿಂದೇಟು ಹಾಕುವರೇ ಹೆಚ್ಚಿನ ಜನರಿರುವ ನಡುವೆ ನಟಿ ಅನುಷ್ಕಾ ಶೆಟ್ಟಿ ಮಾಡಿರುವ ಕೆಲಸ ಅವರ ಅಭಿಮಾನಿಗಳಲ್ಲಿ ಹಾಗೂ ಟಾಲಿವುದು ಚಿತ್ರರಂಗದಲ್ಲಿ ಅವರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿದೆ ಎಂದರೆ ತಪ್ಪಾಗೊದಿಲ್ಲ.