ಅಂತೂ ಇಂತೂ ನಿಚ್ಚಿತಾರ್ಥ ಮಾಡಿಕೊಂಡ ಚಂದನ್ ಕವಿತಾ ಗೌಡ..ಸಂಭ್ರಮದ ಫೋಟೋಸ್ ನೋಡಿ..

Entertainment

ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಖ್ಯಾತರಾಗಿದ್ದ ಚಂದನ್ ಮತ್ತು ಕವಿತಾ ಗೌಡ ಜೋಡಿ ಅಂತೂ ಇಂತೂ ನಿಚ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಒಂದಾಗಿದ್ದಾರೆ. ಜೊತೆ ಜೊತೆಯಾಗಿ ಟ್ರಿಫ್, ಟ್ರೆಕಿಂಗ್ ಅಂತ ಓಡಾಡಿಕೊಂಡಿದ್ದ ಈ ಜೋಡಿ ತಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳಿಕೊಂಡು ಓಡಾಡುತ್ತಿದ್ದವರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಜೋಡಿಯ ಫೋಟೋಗಳನ್ನ ಹಾಕಿಕೊಳ್ಳುತ್ತಿದ್ದ ಈ ಜೋಡಿ ಅಭಿಮಾನಿಗಳಿಗೆ ತಮ್ಮ ನಡುವೆ ಅಂತದೇನು ಏನೂ ಇಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಇನ್ನು ಮೊನ್ನೆ ತಾನೇ ಸ್ವತಃ ಚಂದನ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕವಿತಾ ಅವರ ಜೊತೆಗಿನ ಫೋಟೋವೊಂದನ್ನ ಪೋಸ್ಟ್ ಮಾಡಿ ನಾವು ಏಪ್ರಿಲ್ ಒಂದಕ್ಕೆ ಮೂರ್ಖರಾಗಲಿದ್ದೇವೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು.

ಇನ್ನು ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಚಂದನ್ ಮತ್ತು ಕವಿತಾ ಗೌಡ ಮದುವೆಯಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿತ್ತು. ತಮ್ಮ ನಡುವೆ ಪ್ರೀತಿ ಏನೂ ಇಲ್ಲ ಎಂದು ಹೇಳುತ್ತಿದ್ದ ಇವರ ಪ್ರೀತಿ ಬಹಿರಂಗವಾಗಿತ್ತು. ಹೌದು, ಈಗ ಎರಡೂ ಕುಟುಂಬದವರಿಂದ ಇವರ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇಂದು ಬೆಂಗಳೂರಿನ ಹೋಟೆಲ್ ಒಂದರಲ್ಲಿ ನಿಚ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಅದ್ದೂರಿಯಾಗಿ ನೆರವೇರಿದ ನಿಚಿತಾರ್ಥದ ಕಾರ್ಯಕ್ರಮಕ್ಕೆ ಕುಟುಂಬದವರು, ಕಿಇರುತೆರೆ ನಟ ನಟಿಯರು, ಆಪ್ತ ಸ್ನೇಹಿತರು ಬಂದು ನವ ಜೋಡಿಗೆ ಶುಭಾಶಯಗಳನ್ನ ಹೇಳಿದ್ದಾರೆ.

ಇನ್ನು ಇಷ್ಟು ದಿವಸ ತಮ್ಮ ನಡುವೆ ಪ್ರೀತಿ ಇರುವುದರ ಬಗ್ಗೆ ಹೇಳಿಕೊಳ್ಳದ ಚಂದನ್ ಮತ್ತು ಕವಿತಾ ಗೌಡ ಈಗ ನಿಜ ಜೀವನದಲ್ಲಿ ಒದಗುತ್ತಿರುವುದನ್ನ ಅಭಿಮಾನಿಗಳು ತುಂಬಾ ಖುಷಿಯಾಗಿ ಕಾಮೆಂಟ್ ಗಳನ್ನ ಮಾಡಿ ಶುಭ ಕೋರಿದ್ದಾರೆ. ಇನ್ನು ನಟ ಚಂದನ್ ಅವರು ಈಗಾಗಲೇ ಬೆಂಗಳೂರಿನ ಸಹಕಾರ ನಗರದಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿರುವುದು ನಿಮಗೆಲ್ಲಾ ಗೊತ್ತಿರುವುದೇ..ಇನ್ನು ಇದರ ಬ್ರಾಂಚ್ ಗಳನ್ನ ಹೆಚ್ಚು ಮಾಡಿ ಉದ್ಯಮ ವಿಸ್ತರಿಸುವುದರ ಕಡೆ ಗಮನಹರಿಸುತ್ತಿದ್ದಾರೆ. ಇನ್ನು ಎಂಗೇಜ್ ಮೆಂಟ್ ಆಗಿರುವ ಕಿರುತೆರೆಯ ಕ್ಯೂಟ್ ಜೋಡಿ ಚಂದನ್ ಮತ್ತು ಕವಿತಾ ಮದ್ವೆ ಮಾಡಿಕೊಂಡು ಸುಖವಾಗಿ ದಾಂಪತ್ಯ ಜೀವನ ನಡೆಸಲಿ ಎಂದು ಹಾರೈಸೋಣ..