ಸದ್ದಿಲ್ಲದೇ ನಟ ಚಂದನ್ ಜೊತೆ ಸಪ್ತಪದಿ ತುಳಿದ ಕವಿತಾ ಗೌಡ..ಮದುವೆಯ ಈ ಫೋಟೋಸ್ ನೋಡಿ..

Entertainment

ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಕಿರುತೆರೆ ಹಾಗು ಬೆಳ್ಳಿತೆರೆಯ ಹಲವಾರು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಈಗ ಕೂಡ ಲಾಕ್ ಡೌನ್ ಮಾಡಲಾಗಿದ್ದು ಇದೆ ವೇಳೆ ಕಿರುತೆರೆಯ ಮತ್ತೊಂದು ಫೇಮಸ್ ಜೋಡಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹೊಸ ಜೀವನ ಪ್ರಾರಂಭ ಮಾಡಲಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲೂ ಕೂಡ ಒಂದಾಗಿದ್ದಾರೆ. ಅವರ ನಟ ಚಂದನ್ ಹಾಗೂ ನಟಿ ಕವಿತಾ ಗೌಡ. ಕೊರೋನಾ ಎರಡನೇ ಅಲೆ ಹೆಚ್ಚಾಗಿರುವ ಕಾರಣ ಸರಳವಾಗಿಯೇ ಸಪ್ತಪದಿ ತುಳಿದಿದ್ದಾರೆ.

ಇನ್ನು ನವ ವಧು ವರರಿಬ್ಬರು ಮಾಸ್ಕ್ ಧರಿಸಿದ್ದು ಚಂದನ್ ಕವಿತಾ ಅವರಿಗೆ ತಾಳಿ ಕಟ್ಟಿದ್ದಾರೆ. ಕಳೆದ ಕೆಲ ವಾರಗಳ ಹಿಂದಷ್ಟೇ ನಿಚ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಲಾಕ್ ಡೌನ್ ಇರೋ ಈ ಸಮಯದಲ್ಲಿ ಕುಟುಂಬದ ಸದಸ್ಯರ ಜೊತೆಗೆ ತುಂಬಾ ಸರಳವಾಗಿಯೇ ಮದುವೆ ಮಾಡಿಕೊಂಡಿದ್ದಾರೆ. ಇನ್ನು ಲಾಕ್ ಡೌನ್ ಮುಗಿದು ಸೋಂಕು ಕಡಿಮೆಯಾದಲ್ಲಿ ಸ್ನೇಹಿತರು, ಸಿನಿಮಾ ಹಾಗೂ ಕಿರುತೆರೆಯ ಮಂದಿಗಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನ್ ಕವಿತಾ ಗೌಡ ಜೋಡಿಗೆ ಸೋಷಿಯಲ್ ಮೀಡಿಯಾ ಮೂಲಕ ಅವರ ಸ್ನೇಹಿತರು, ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು ಶುಭಾಶಯಗಳನ್ನ ತಿಳಿಸಿದ್ದಾರೆ.

ಇನ್ನು ಇವರ ಅಭಿಮಾನಿಗಳು ಕೂಡ ಸೀರಿಯಲ್ ನಲ್ಲಿ ಜೋಡಿಯಾಗಿರೋ ನೀವು ನಿಜಜೀವನದಲ್ಲೂ ಕೂಡ ಜೋಡಿಯಾಗಿ ಎಂದು ಮನವಿ ಮಾಡಿದ್ದರು. ಇನ್ನು ಚಂದನ್ ಮತ್ತು ಕವಿತಾ ಜೊತೆಯಲ್ಲೇ ಸುತ್ತಾಡುತ್ತಿದ್ದು ತಮ್ಮ ಪ್ರೀತಿಯ ವಿಚಾರವನ್ನ ಮಾತ್ರ ಬಹಿರಂಗ ಮಾಡಿರಲಿಲ್ಲ. ಚಂದನ್ ಕವಿತಾ ನಡುವೆ ಏನೋ ಇದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದರೂ ಇವರು ಅದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿರಲಿಲ್ಲ. ಇನ್ನು ಏಪ್ರಿಲ್ ಒಂದರಂದು ತಮ್ಮ ನಿಚ್ಚಿತಾರ್ಥದ ಫೋಟೋಗಳನ್ನ ಪೋಸ್ಟ್ ಮಾಡಿಕೊಂಡಿದ್ದು ತಾವು ಮದುವೆಯಾಗುತ್ತಿರುವ ವಿಚಾರವನ್ನೇ ಬಹಿರಂಗ ಮಾಡಿದ್ದರು.