ಇದ್ದಕಿದ್ದಂತೆ ಸಿಹಿ ಸುದ್ದಿ ಕೊಟ್ಟ ಚಂದನ್ ಕವಿತಾ ಗೌಡ..

Advertisements

ಕಿರುತೆರೆಯ ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ಫೇಮಸ್ ಆದವರು ನಟ ಚಂದನ್ ಮತ್ತು ನಟಿ ಕವಿತಾ ಗೌಡ. ಇನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಮದುವೆಯ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದವರು. ಇನ್ನು ಇಬ್ಬರೂ ಜೊತೆಯಾಗಿ ಹೋಗುತ್ತಿದ್ದ ಟ್ರಿಪ್ ಹಾಗೂ ಟ್ರೆಕಿಂಗ್ ಫೋಟೋಗಳು ಇವರಿಬ್ಬರ ನಡುವೆ ಏನೋ ಇದೆ ಎಂಬುದರ ಬಗ್ಗೆ ಚರ್ಚೆಯಾಗುತಿತ್ತು. ಆದರೆ ಇವರು ಮಾತ್ರ ನಮ್ಮ ನಡುವೆ ಏನೂ ಇಲ್ಲ, ನಾವು ಆಪ್ತ ಸ್ನೇಹಿತರಷ್ಟೇ ಎಂದು ಚಂದನ್ ಮತ್ತು ಕವಿತಾ ಗೌಡ ಹೇಳಿಕೊಂಡು ಬರುತ್ತಿದ್ದರು.

[widget id=”custom_html-4″]

Advertisements

ಆದರೆ ಈಗ ಇವರು ಇದ್ದಕಿದ್ದಂತೆ ಮದುವೆಯಾಗುವುದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಹೌದು, ಸ್ವತಃ ಚಂದನ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕವಿತಾ ಅವರ ಜೊತೆಗಿನ ಫೋಟೋವೊಂದನ್ನ ಹಂಚಿಕೊಂಡಿದ್ದು ಇದೆ ಏಪ್ರಿಲ್ ಒಂದಕ್ಕೆ ನಾವು ಮೂರ್ಖರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಇದೆ ವಿಚಾರ ಚಂದನ್ ಕವಿತಾ ಏಪ್ರಿಲ್ ಒಂದಕ್ಕೆ ನಿಚ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಕುತೂಹಲವನ್ನ ಹುಟ್ಟುಹಾಕಿದೆ.

[widget id=”custom_html-4″]

ಇನ್ನು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದ ಈ ಜೋಡಿ ಎಲ್ಲಿ ಹೋದರೂ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಚಂದನ್ ಅವರು ಕವಿತಾ ಅವರ ಹುಟ್ಟುಹಬ್ಬದ ದಿನದಂದು ಮಧ್ಯರಾತ್ರಿ ಸಮಯದಲ್ಲಿ ಕವಿತಾ ಅವರ ಮನೆಗೆ ಹೋಗಿ ಹುಟ್ಟುಹಬ್ಬದ ಸರ್ಪ್ರೈಸ್ ನೀಡಿದ್ದರು. ಇದೆಲ್ಲವೂ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಈಗ ಏಪ್ರಿಲ್ ಒಂದಕ್ಕೆ ನಾವು ಒಂದಾಗುತ್ತಿದ್ದೇವೆ ಎಂದು ಚಂದನ್ ಹಂಚಿಕೊಂಡಿರುವ ಫೋಟೋ ನೋಡಿ ಅವರ ಆಪ್ತ ಸ್ನೇಹಿತರ ಬಳಗ, ನಟ ನಟಿಯರು ನಿಮ್ಮ ನವ ಜೀವನಕ್ಕೆ ಒಳ್ಳೆಯದಾಗಲಿ ಎಂದು ಶುಭಾಶಯಗಳನ್ನ ತಿಳಿಸಿದ್ದಾರೆ.