ಕವಿತಾ ಗೌಡ ಚಂದನ್ ಮದ್ವೆ ಕ್ಯಾನ್ಸಲ್ ಆಯ್ತಾ ! ಆಗಿದ್ದೇನು ಗೊತ್ತಾ ?

Advertisements

ಸ್ನೇಹಿತರೇ, ಕಳೆದ ಒಂದು ತಿಂಗಳ ಹಿಂದಷ್ಟೇ ನಟಿ ಕವಿತಾ ಗೌಡ ಮತ್ತು ಚಂದನ್ ಅವರಿಗೂ ನಿಚ್ಚಿತಾರ್ಥ ನೆರವೇರಿದ್ದು, ಇದೆ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ಇವರಿಬ್ಬರ ಮದುವೆ ನಡೆಯುವುದರಲ್ಲಿತ್ತು. ಒಂದೇ ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಚಂದನ್ ಮತ್ತು ಕವಿತಾ ಅವರು ಮೊದಲಿಗೆ ಸ್ನೇಹಿತರಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿ, ಮದುವೆಯಾಗಲು ಎರಡು ಕುಟುಂಬದ ಕಡೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಒಂದು ತಿಂಗಳ ಹಿಂದಷ್ಟೇ ನಿಚ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಇದೆ ಮೇ ತಿಂಗಳು ಇವರಿಬ್ಬರ ಮದುವೆ ಆಗಬೇಕಿತ್ತು. ಆದರೆ ಈಗ ಇವರಿಬ್ಬರು ಈಗ ಮದುವೆಯಾಗುವುದು ಡೌಟ್ ಎಂದು ಹೇಳಲಾಗುತ್ತಿದೆ.

[widget id=”custom_html-4″]

Advertisements

ಹೌದು, ನಿಮಗೆಲ್ಲಾ ತಿಳಿದಿರುವಂತೆ ರಾಜ್ಯದಲ್ಲಿ ಕೊರೊನೋ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿರುವ ಕಾರಣ ಈಗಾಗಲೇ ಹದಿನಾಲ್ಕು ದಿನಗಳ ಲಾಕ್ ಡೌನ್ ಕೂಡ ಘೋಷಣೆ ಮಾಡಲಾಗಿದೆ. ಇನ್ನು ಸೋಂಕಿನಿಂದಾಗಿ ಸೆಲೆಬ್ರೆಟಿಗಳು ಸೇರಿದಂತೆ ಸಾಮಾನ್ಯ ಜನರೂ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಮದುವೆ ಸೇರಿದಂತೆ ಸಭೆ ಸಮಾರಂಭಗಳಿಗೆ ಸರ್ಕಾರದಿಂದ ನಿಯಂತ್ರಣ ಹೇರಿದ್ದು, ಇಂತಿಷ್ಟೇ ಜನರು ಮಾತ್ರ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವಂತೆ ಸರ್ಕಾರ ಕಾನೂನು ಕ್ರಮಗಳನ್ನ ಜಾರಿಗೆ ತಂದಿದೆ. ಈಗ ಇದೆ ಚಂದನ್ ಕವಿತಾ ಅವರ ಮದುವೆಗೆ ತೊಡಕಾಗಿರುವುದು. ಹೌದು, ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಅನ್ನೋದು ಒಮ್ಮೆ ಮಾತ್ರ ಬರೋದು. ಸಂಬಧಿಕರು, ಸ್ನೇಹಿತರನ್ನ ಕರೆದು ಸಂಭ್ರಮ, ಅದ್ದೂರಿಯಿಂದ ಮದುವೆಯಾಗಬೇಕು ಅನ್ನೋ ಕನಸು ಪ್ರತಿಯೊಬ್ಬರಲ್ಲೂ ಇರುತ್ತೆ. ಇದೆ ನೆನಪು ಜೀವನಪರ್ಯಂತ ಇರುತ್ತದೆ.

[widget id=”custom_html-4″]

ಇನ್ನು ಇದೆ ಆಸೆ ಕೂಡ ಚಂದನ್ ಕವಿತಾ ಅವರದ್ದು. ಆದರೆ ೫೦ ಜನ ಮಾತ್ರ ಮದುವೆಯಲ್ಲಿ ಸೇರಬೇಕು ಎಂಬ ಸರ್ಕಾರದ ರೂಲ್ಸ್ ಇರೋದ್ರಿಂದ, ಇವರ ಮದುವೆ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಹೌದು, ಇದೆ ತಿಂಗಳ ಮೊದಲನೇ ವಾರದಲ್ಲಿ ಮದುವೆಯ ಶಾಸ್ತ್ರಗಳ ಶುರುವಾಗಬೇಕಿದ್ದು ಇದಕ್ಕೆಲ್ಲಾ ಈಗ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ಕೊರೋನಾ ಹಾಗು ಲಾಕ್ ಡೌನ್ ಇರುವ ಕಾರಣ ಅದ್ದೂರಿಯಾಗಿ ಮದುವೆಯಾಗಬೇಕೆಂದಿದ್ದ ಚಂದನ್ ಮತ್ತು ಕವಿತಾ ಅವರು ಬೇಸರಗೊಂಡಿದ್ದು ಮದುವೆ ಮುಂದಕ್ಕೆ ಹೋಗಿದೆ ಎಂದು ಹೇಳಲಾಗಿದ್ದು ಚಂದನ್ ಕವಿತಾ ಅವರಿಂದ ಯಾವುದೇ ಮಾಹಿತಿ ಇದುವರೆಗೂ ಬಂದಿಲ್ಲ. ಸರಳವಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ಅಥ್ವಾ ಅದ್ದೂರಿಯಾಗಿ ಮದುವೆಯಾಗಲು ಮುಂದಕ್ಕೆ ಹಾಕಿದ್ದಾರಾ ಎಂಬುದನ್ನ ಕಾಡು ನೋಡಬೇಕಾಗಿದೆ.