ತಂದೆಯೇ ತನ್ನ ಬಳಿ ಬೇರೆ ರೀತಿ ನಡೆದುಕೊಂಡ್ರು ಎಂದು ಕಹಿ ಸತ್ಯವನ್ನ ಬಿಚ್ಚಿಟ್ಟು ಕಣ್ಣೀರಿಟ್ಟ ನಟಿ ಚಂದ್ರಕಲಾ !

Entertainment

ಕನ್ನಡದ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ, ಸ್ಪರ್ಧಿಗಳು ಕೇವಲ ಟಾಸ್ಕ್ ಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೇ, ತಮ್ಮ ಜೀವನದಲ್ಲಿ ನಡೆದಿರುವ, ಇದುವರಿಗೂ ಯಾರಿಗೂ ಹೇಳಿಕೊಳ್ಳದ ತಮ್ಮ ಭಾವನೆಗಳನ್ನ ವ್ಯಕ್ತಪಡಿಸಲು ಕೂಡ ಅವಕಾಶ ನೀಡಲಾಗುತ್ತದೆ. ಅದೇ ರೀತಿ ಈ ಸೀಸನ್ ನಲ್ಲೂ ಕೂಡ ಸ್ಪರ್ಧಿಗಳು ತಮ್ಮ ಬಗ್ಗೆ ಹೇಳಿಕೊಳ್ಳುವ ಸಲುವಾಗಿ ಬಿಗ್ ಬಾಸ್ ಟಾಸ್ಕ್ ನೀಡಿ ವೇದಿಕೆ ಕಲ್ಪಿಸಿತ್ತು. ಇನ್ನು ಸ್ಪರ್ಧಿಗಳು ಕೂಡ ತಮ್ಮ ಜೀವನದಲ್ಲಿ ನಡೆದಿರುವ ಸಿಹಿ ಮತ್ತು ಕಹಿ ಘಟನೆಗಳ ಬಗ್ಗೆ ಹಂಚಿಕೊಂಡರು.

ಅದೇ ರೀತಿ ಕಿರುತೆರೆಯ ಖ್ಯಾತ ಪೋಷಕ ನಟಿ ಚಂದ್ರಕಲಾ ಅವರೂ ಕೂಡ ತಮ್ಮ ಜೀವನದ್ಲಲಿ ತಮ್ಮ ಜೀವನದಲ್ಲಿ ನಡೆದಿರುವ ಕ’ಹಿ ಘ’ಟನೆಯೊಂದನ್ನ ಹಂಚಿಕೊಂಡಿದ್ದು ಕಣ್ಣೀರು ಹಾಕಿದ್ದಾರೆ. ಚಂದ್ರಕಲಾ ಅವರು ತನ್ನ ತಂದೆಯ ಬಗ್ಗೆ ಹೇಳಿಕೊಂಡಿರುವ ಆ ಘ’ಟನೆಯ ಬಗ್ಗೆ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ ಸ್ನೇಹಿತರೇ..ಇದುವರೆಗೂ ಯಾರಲ್ಲಿಯೂ ಹೇಳಿಕೊಳ್ಳದೆ ತನ್ನ ಮನಸಿನಲ್ಲೇ ಇದ್ದ ವಿಚಾರವೊಂದನ್ನ ಹೇಳಿಕೊಂಡಿದ್ದಾರೆ ಹಿರಿಯ ನಟಿ. ನನಗೆ ಈ ವಿಷಯವನ್ನ ಬಹಿರಂಗ ಮಾಡಲು ಕಷ್ಟವಾಗುತ್ತಿದೆ. ಆದರೂ ಕೂಡ ಈ ವೇದಿಕೆಯಲ್ಲಿ ಆ ಕ’ಹಿ ಘ’ಟನೆಯನ್ನ ನಾನು ಹೇಳಿಕೊಳ್ಳದೆ ಇದ್ದರೆ ನನ್ನನ್ನೇ ನಾನು ಮೋಸ ಮಾಡಿಕೊಂಡಂತೆ ಆಗುತ್ತದೆ.

ನಂಗಿನ್ನೂ ಚೆನ್ನಾಗಿ ನೆನಪಿರುವನಂತೆ ನನಗಾಗ ಕೇವಲ ಹತ್ತು ವರ್ಷ. ಇನ್ನು ಅಪ್ಪ ಎನಿಸಿಕೊಂಡವನು ತುಂಬಾ ಕು’ಡಿಯುತ್ತಿದ್ದನು. ಮಕ್ಕಳ ಮುಂದೆಯೇ ತನ್ನ ತಾಯಿಯ ಜೊತೆ ಕೆ’ಟ್ಟದಾಗಿ ನಡೆದುಕೊಳ್ಳುತ್ತಿದ್ದರು. ನಾನು ನನ್ನ ಅಕ್ಕ ಸೇರಿದಂತೆ ಇಬ್ಬರು ತಮ್ಮಂದಿರು ಸೇರಿ ನಾವು ನಾಲ್ಕು ಜನ ಮಕ್ಕಳು. ಇನ್ನು ಆಗ ನಾನು ಮತ್ತೆ ನನ್ನ ಅಕ್ಕ ಇಬ್ಬರು ಸ್ಕರ್ಟ್ ಹಾಕಿಕೊಂಡು ಮಲಗುತ್ತಿದ್ದೆವು. ಆದರೆ ಅದೊಂದು ದಿನ ನಮ್ಮ ಜೊತೆ ಬೇರೆಯೇ ರೀತಿ ನಡೆದುಕೊಂಡ್ರು ನಮ್ಮ ತಂದೆ ಎಂದು ನಟಿ ಚಂದ್ರಕಲಾ ಅವರು ಹೇಳುತ್ತಾ ಕಣ್ಣೀರು ಹಾಕಿದ್ರು. ಅಮ್ಮ ಹೇಳಿದ್ರು ನೀವು ಪ್ಯಾಂಟ್ ಹಾಕಿ ಮಲಗಿಕೊಳ್ಳಿ ಅಂತ. ಆದರೆ ನಾವು ಹೇಳಿದ್ವಿ ಪ್ಯಾಂಟ್ ಹಾಕೊಂಡ್ರೆ ನಿದ್ದೆ ಬರೋದಿಲ್ಲ ಅಂತ. ಆಗ ಅಮ್ಮ ಹೇಳ್ತಾರೆ ನಿಮ್ಮ ತಂದೆ ಸರಿಯಿಲ್ಲ..

ನೀವು ಸ್ಕರ್ಟ್ ಹಾಕಿ ಮಲಗಿಕೊಂಡಾಗ ಬಟ್ಟೆ ಮೇಲೆ ಹೋಗುತ್ತದೆ..ಅದಕ್ಕೆ ಹೇಳಿದ್ದು ಪ್ಯಾಂಟ್ ಹಾಕ್ಕೊಳ್ಳಿ ಅಂತ ಅಮ್ಮ ಹೇಳಿದ್ರು..ಇನ್ನು ತಾಯಿಯೇ ಹೀಗೆ ಹೇಳುವಾಗ ಹೆತ್ತ ಅಪ್ಪ ನಮ್ಮ ಜೊತೆ ಯಾವ ರೀತಿ ನಡೆದುಕೊಂಡಿರಬಹುದು ಎಂದು ಹೇಳುತ್ತಾ ಚಂದ್ರಕಲಾ ಅವರು ಕಣ್ಣೀರು ಸುರಿಸಿದ್ದಾರೆ. ಇನ್ನು ಹೀಗೆ ನಮ್ಮ ಅಮ್ಮ ಅಪ್ಪನ ನಡುವೆ ಜ’ಗಳ ನಡೆಯುತ್ತಲೇ ಇತ್ತು. ಕೊನೆಗೆ ನಾವು ಮಕ್ಕಳೆಲ್ಲಾ ಸೇರಿ ನಮಗೆ ತಂದೆ ಬೇಡ ಎಂಬ ನಿರ್ಧಾರಕ್ಕೆ ಬಂದೆವು ಎಂದು ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಳ್ಳುತ್ತಾ ನಮ್ಮ ತಂದೆಯರಂತಹವರು ಜಗತ್ತಿನ ಯಾವ ಮಕ್ಕಳಿಗೂ ಬೇಡ ಎಂದು ನಟಿ ಚಂದ್ರಕಲಾ ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ. ಇನ್ನು ನಟಿ ಚಂದ್ರಕಲಾ ಅವರ ಜೀವನದಲ್ಲಿ ನಡೆದ ಕ’ಹಿ ಘ’ಟನೆಯ ಬಗ್ಗೆ ಕೇಳಿ ಸ್ಪರ್ಧಿಗಳೆಲ್ಲಾ ಕಣ್ಣಿರು ಹಾಕಿದ್ದಾರೆ.