ಬದುಕಿರೋತನಕ ಈ ತಪ್ಪು ಮಾಡಲ್ಲ ಎಂದು ಬಹಿರಂಗವಾಗಿ ಕ್ಷಮೆಕೇಳಿದ ತ್ರಿನಯನಿ ಸೀರಿಯಲ್ ನಟ ನಟಿ ! ಅಸಲಿಗೆ ಇವರು ಮಾಡಿದ್ದೇನು ನೋಡಿ..

Entertainment

ಸ್ನೇಹಿತರೇ, ಮೊನ್ನೆಯಷ್ಟೇ ಗೂಗಲ್ ಕಂಪನಿ ಕನ್ನಡದ ಬಗ್ಗೆ ಅವಮಾನ ಮಾಡಿದ್ದು ಬಳಿಕ ಕನ್ನಡದಲ್ಲೇ ಕ್ಷಮೆ ಕೇಳಿತ್ತು. ಬಳಿಕ ಅಮೆಜಾನ್ ಕೂಡ ನಮ್ಮ ಕರುನಾಡ ಬಾವುಟಕ್ಕೆ ಅವಮಾನ ಮಾಡಿದ್ದೂ ಬಳಿಕ ಆ ಕಂಪನಿ ಕೂಡ ಕ್ಷಮೆ ಕೇಳಿದೆ. ಇದೆಲ್ಲವೂ ಕನ್ನಡಿಗರ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ. ಆದರೆ ನಮ್ಮ ಕನ್ನಡ ನೆಲದಲ್ಲೇ ಹುಟ್ಟಿ, ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಬಳಿಕ ಕೆಲ ಕಲಾವಿದರು ಊಟ, ಹೆಸರು, ಖ್ಯಾತಿಯನ್ನ ಕೊಟ್ಟ ಕನ್ನಡವನ್ನೇ ಮರೆತು ಪರಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಈಗ ಅಂತಹವರ ಲಿಸ್ಟ್ ಗೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದು ಗೌಡ ಹಾಗೂ ನಟಿ ಆಶಿಕಾ ಪಡುಕೋಣೆ ಕೂಡ ಸೇರಿಕೊಂಡಿದ್ದಾರೆ.

ಈಗಾಗಲೇ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತ್ರಿನಯನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಚಂದು ಗೌಡ ಮತ್ತು ಆಶಿಕಾ ಗೌಡ ತೆಲುಗಿನ ತ್ರಿನಯನಿ ಸೀರಿಯಲ್ ನಲ್ಲಿಯೂ ಕೂಡ ಇವರೇ ನಟಿಸುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಈ ಸೀರಿಯಲ್ ಕುರಿತಂತೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಶೇ ೭೦ ರಿಂದ ೮೦ರಷ್ಟು ಮಂದಿ ತೆಲುಗಿನ ಜನರೇ ಬೆಂಗಳೂರಿನಲ್ಲಿದ್ದಾರೆ ಎಂದು ಹೇಳುವ ಮೂಲಕ ವಿವಾದ ಮಾಡಿಕೊಂಡಿದ್ದಾರೆ. ಇನ್ನು ಚಂದು ಗೌಡ ಆಶಿಕಾ ಪಡುಕೋಣೆ ಹೀಗೆ ಹೇಳಿದ್ದೆ ತಡ, ನಮ್ಮ ಕರುನಾಡಿನಲ್ಲೆ ಹುಟ್ಟಿ, ಇಲ್ಲಿನ ಅನ್ನ ತಿಂದು ಬೆಳೆದು, ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ನೀವು ತೆಲುಗಿನ ಸೀರಿಯಲ್ ನಲ್ಲಿ ನಟಿಸಿದ್ದೆ ತಡ ನೀವು ಮಾತನಾಡುವ ದಾಟಿಯೇ ಬದಲಾಗಿದೆ ಎಂದು ನೆಟ್ಟಿಗರು ಗರಂ ಆಗಿದ್ದು ಈ ವಿಷಯ ಗಂಭೀರಗೊಂಡಿದ್ದು, ಸುದ್ದಿ ಮಾಧ್ಯಮಗಳಲ್ಲಿ ಕೂಡ ಇವರ ಬಗ್ಗೆ ಜನರು ಹಾಗೂ ಕೆಲ ಸೆಲೆಬ್ರೆಟಿಗಳು ತರಾಟೆ ತೆಗೆದುಕೊಂಡಿದ್ದರು.

ಇನ್ನು ಈ ವಿಷಯ ದೊಡ್ಡದಾಗುತ್ತಿದ್ದಂತೆ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟ ಚಂದು ಗೌಡ ಹಾಗೂ ನಟಿ ಆಶಿಕಾ ಪಡುಕೋಣೆ ತಾವು ಗೊತ್ತಿಲ್ಲದೇ ಮಾಡಿದ ತಪ್ಪನ್ನ ಕ್ಷಮಿಸಬೇಕೆಂದು ಕನ್ನಡಿಗರಲ್ಲಿ ಕ್ಷಮಾಪಣೆ ಕೇಳಿದ್ದಾರೆ. ಇನ್ನು ಆ ವಿಡಿಯೋದಲ್ಲಿ ನಾವು ಹುಟ್ಟಿ ಬೆಳೆದಿದ್ದು ಇದೆ ಬೆಂಗಳೂರಿನಲ್ಲೇ. ಕನ್ನಡವೇ ನಮ್ಮ ಮಾತೃಭಾಷೆ. ಬೆಂಗಳೂರಿನ ಶೇ ೭೦ ರಿಂದ ೮೦ರಷ್ಟು ಜನರು ತೆಲುಗು ಸೀರಿಯಲ್ ನೋಡುತ್ತಾರೆ ಎಂದು ಹೇಳುವುದು ನಮ್ಮ ಉದ್ದೇಶ ಆಗಿತ್ತು. ಆದರೆ ಅದನ್ನ ನಾನು ತೆಲುಗಿನಲ್ಲಿ ಹೇಳಿದರಿಂದ ಅದು ತಪ್ಪಾಗಿದೆ. ಏಕೆಂದ್ರೆ ನಾನಿನ್ನು ತೆಲುಗು ಕಲಿಯುತ್ತಿದ್ದೇನೆ. ಮಾತನಾಡುವಾಗ ತಪ್ಪುಗಳು ಹಾಗೋದು ಸಾಮಾನ್ಯವೇ ಸರಿ. ಕನ್ನಡಿಗರೆಲ್ಲರೂ ದಯಮಾಡಿ ನಮ್ಮನ್ನ ಕ್ಷಮಿಸಬೇಕು ಎಂದು ನಟಿ ಆಶಿಕಾ ಪಡುಕೋಣೆ ಹೇಳಿದ್ದಾರೆ.

ನಾವು ಕನ್ನಡ ಭಾಷೆಯನ್ನ ಮಾರಿಕೊಳ್ಳುತ್ತಿದ್ದೇವೆ ಎಂಬ ಅಪವಾದ ನಮ್ಮ ಮೇಲೆ ಕೇಳಿಬರುತ್ತಿದೆ. ಆದ್ರೆ ನಾವು ಅಷ್ಟೊಂದು ಕೆಳ ಮಟ್ಟಕ್ಕೆ ಇಳಿಯುವವರಲ್ಲ. ಕಿರುತೆರೆಯ ನಮ್ಮಂತಹ ಪುಟ್ಟ ಕಲಾವಿದರನ್ನ ಏಕೆ ಟಾರ್ಗೆಟ್ ಮಾಡುತ್ತಿದ್ದೀರಾ..ಒಂದು ವೇಳೆ ನಮ್ಮ ಮಾತುಗಳನ್ನು ನಿಮಗ್ಯಾರಿಗಾದರು ನೋವಾಗಿದ್ದರೆ ನಮ್ಮನ್ನ ದಯವಿಟ್ಟು ಕ್ಷಮಿಸಿಬಿಡಿ ಎಂದು ನಟ ಚಂದು ಗೌಡ ಮತ್ತು ನಟಿ ಆಶಿಕಾ ಪಡುಕೋಣೆ ವಿಡಿಯೋ ಮೂಲಕ ಕನ್ನಡಿಗರಲ್ಲಿ ಕ್ಷಮಾಪಣೆ ಕೇಳಿದ್ದಾರೆ. ಸ್ನೇಹಿತರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..