ಕನ್ನಡ ಚಿತ್ರರಂಗ ದಕ್ಷಿಣ ಭಾರತದ ಕೆಟ್ಟ ಚಿತ್ರೋದ್ಯಮ ಎಂದವನಿಗೆ ನಟ ಚೇತನ್ ಬೆಂಬಲ ! ಖಡಕ್ ಉತ್ತರ ನೀಡಿದ ರಕ್ಷಿತ್ ಶೆಟ್ಟಿ..

Cinema

ಸ್ನೇಹಿತರೇ, ಅಣ್ಣಾವ್ರು ಅವರಿಂದ ಹಿಡಿದು ವಿಷ್ಣುವರ್ಧನ್, ಅಂಬರೀಷ್,ಶಂಕರ್ ನಾಗ್ ಅವರಂತಹ ಮಹಾನ್ ಮೇರು ನಟರು ಬೆಳೆಸಿದ ಚಿತ್ರರಂಗ ನಮ್ಮ ಸ್ಯಾಂಡಲ್ವುಡ್. ಇನ್ನು ಈಗಿನ ವಿಚಾರಕ್ಕೆ ಬಂದರೆ ಕೆಜಿಎಫ್ ಸಿನಿಮಾ ಬಂದ ಮೇಲಂತೂ ಇಡೀ ಭಾರತೀಯ ಸಿನಿಮಾ ರಂಗವೇ ಸ್ಯಾಂಡಲ್ವುಡ್ ಬಗ್ಗೆ ಮಾತನಾಡುತ್ತಿದೆ. ಅವನೇ ಶ್ರೀಮನ್ನಾರಾಯಣ ಚಿತ್ರ ಸೇರಿದಂತೆ ರಾಬರ್ಟ್, ಯುವರತ್ನ ಸಿನಿಮಾಗಳು ಸ್ಯಾಂಡಲ್ವುಡ್ ನ್ನ ಮತ್ತಷ್ಟು ಎತ್ತರಕ್ಕೆ ಎತ್ತುಕೊಂಡು ಹೋಗಿವೆ. ಇನ್ನು ಇಡೀ ಭಾರತೀಯ ಸಿನಿಮಾ ರಂಗ ಕೆಜಿಎಫ್ 2 ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವುದು ಎಲ್ಲರಿಗು ಗೊತ್ತಿರೋ ವಿಚಾರವೇ..ಆದರೆ ಈಗ ನಮ್ಮ ಸ್ಯಾಂಡಲ್ವುಡ್ ಬಗ್ಗೆ ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದು ಕನ್ನಡ ಚಿತ್ರರಂಗ ಕಳಪೆ ಎಂದಿದ್ದಾನೆ.

ಇದಷ್ಟೇ ಆಗಿದ್ದರೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ..ಆದರೆ ಈ ಕಾಮೆಂಟ್ ಗೆ ನಟ ಚೇತನ್ ಅವರು ಬೆಂಬಲ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಇನ್ನು ಇದಕ್ಕೆ ನಟ ರಕ್ಷಿತ್ ಶೆಟ್ಟಿ ಸರಿಯಾದ ಪ್ರತ್ತ್ಯುತ್ತರವನ್ನೇ ಕೊಟ್ಟಿದ್ದಾರೆ. ಆ ವ್ಯಕ್ತಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾನೆ.. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಒಂದಾದ ಕೆಟ್ಟ ಚಿತ್ರೋಧ್ಯಮ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಭರವಸೆ ಮೂಡಿಸುವತ್ತ ಸಾಗಿದೆ. ಮರುಭೂಮಿಯಂತಾಗಿರುವ ಕನ್ನಡ ಸಿನಿಮಾ ರಂಗದಲ್ಲಿ ನಟ ಚೇತನ್ ಅಹಿಂಸಾರವರು ಮಳೆಯಂತಿದ್ದಾರೆ ಎಂದು ಆ ವ್ಯಕ್ತಿ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾನೆ.

ಇದಕ್ಕೆ ರಿಪ್ಲೈ ಮಾಡಿರುವ ನಟ ಚೇತನ್ ಅವರು ಅಹಿಂಸಾರವರು ಎಂಬ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ನಮ್ಮಲಿ ಕೂಡ KGF ರೀತಿಯಲ್ಲಿ ಉತ್ತಮವಾದ ಅನೇಕ ಸಿನಿಮಾಗಳನ್ನ ನಾವು ಮಾಡಿದ್ದೇವೆ. ನೀವು ಬರೆದುಕೊಂಡಿರುವುದು ಕಟುವಾಗಿದ್ದರೂ ಅದು ರಚನಾತ್ಮಕ ಪ್ರತಿಕ್ರಿಯೆ ಎಂದು ನಾನು ಪರಿಗಣಿಸುತ್ತೇನೆ ಎಂದು ನಟ ಚೇತನ್ ರೀ ಟ್ವೀಟ್ ಮಾಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಎರಡು ಟ್ವೀಟ್ ಗಳ ಬಗ್ಗೆ ಮಾತನಾಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ನಮ್ಮ ಕನ್ನಡ ಸಿನಿಮಾ ರಂಗ ನಾನು ಸೇರಿದಂತೆ ಅನೇಕ ಕಲಾವಿದರಿಗೆ ದೊಡ್ಡ ವೇದಿಕೆ ನೀಡಿದೆ. ಇನ್ನು ಈ ವೇದಿಕೆಯನ್ನ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ದಿಗ್ಗಜರು ಕಟ್ಟಿದ್ದಾರೆ. ಅವರ ಬಗ್ಗೆ ನಿಮಗೆ ತಿಳಿದಿಲ್ಲ ಎಂಬ ಅನಿಸಿಕೆ ನನ್ನದು.

ನನ್ನಲ್ಲ ಏನೂ ಇಲದಿದ್ದಾಗ ಕನ್ನಡ ಚಿತ್ರರಂಗ ನನಗೆ ಜೀವನ ನೀಡಿದೆ. ನನಂತೆ ಸಾವಿರಾರು ಜನರಿಗೆ ಕನ್ನಡ ಸಿನಿಮಾ ರಂಗ ಜೀವನ ನೀಡಿದೆ ಎಂದು ಖಡಕ್ ಆಗಿ ರಿಪ್ಲೇ ಮಾಡಿದ್ದಾರೆ ನಟ ರಕ್ಷಿತ್ ಶೆಟ್ಟಿ. ಇನ್ನು ಚೇತನ್ ಅವರ ಟ್ವೀಟ್ ಗೂ ರಿಪ್ಲೆ ಮಾಡಿರುವ ರಕ್ಷಿತ್ ಶೆಟ್ಟಿ ನಟ ಚೇತನ್ ಅವರೇ ನೀವು ಮಾಡುವ ಕೆಲಸಗಳಿಂದ ನಿಮ್ಮ ಮೇಲೆ ನನಗೆ ಗೌರವ ಇದೆ. ಆದರೂ ಕೂಡ ನೀವು ನಿಮ್ಮ ಯೋಚನೆಗಳನ್ನ ಸರಿಮಾಡಿಕೊಳ್ಳಬೇಕು. ಕೆಡುಕು ಬೆಳೆಯುವುದು ಕೆಟ್ಟದನ್ನ ಬಿತ್ತಿದ ಕಡೆಯೇ..ಎಂದು ಚೇತನ್ ಗೆ ರೀ ಟ್ವೀಟ್ ಮಾಡಿದ್ದಾರೆ ನಟ ರಕ್ಷಿತ್..ಒಟ್ಟಿನಲ್ಲಿ ನಮ್ಮ ಕನ್ನಡ ಚಿತ್ರರಂಗವನ್ನೇ ಯಾರೇ ಕೀಳಾಗಿ ಕಾಣಲಿ ಅವರಿಗೆ ತಕ್ಕ ಪಾಠ ಕಲಿಸಬೇಕಾದದ್ದು ಕನ್ನಡ ನಟರು ಹಾಗೂ ಕನ್ನಡಿಗರ ಜವಾಬ್ದಾರಿಯಾಗಿದೆ..