ನಮಸ್ತೆ ಸ್ನೇಹಿತರೆ, ಈಗಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾವುದೇ ಒಂದು ಸಣ್ಣ ವಿಷಯವನ್ನು ಕೂಡ ಕ್ಷಣ ಮಾತ್ರದಲ್ಲೇ ದೊಡ್ಡ ಸುದ್ದಿ ಮಾಡುವಂತಹ ಮೀಡಿಯಾ ಎಂದರೆ ಅದು ಸೋಶಿಯಲ್ ಮೀಡಿಯಾ ಅಂತಾನೇ ಹೇಳಬಹುದು. ಅದರಲ್ಲೂ ಯಾವುದಾದರೂ ಸುದ್ದಿಯನ್ನು ವೀಡಿಯೋಗಳನ್ನ ಟಿವಿಗೂ ಮುನ್ನ ಸೋಶಿಯಲ್ ಮೀಡಿಯಾ ಮೂಲಕ, ಅಂದರೆ ಪೋನ್ ಗಳಲ್ಲಿ ನೋಡಬಹುದು. ಯಾಕೆಂದರೆ ಸಾಮಾಜಿಕ ಜಾಲತಾಣಗಳು ಕ್ಷಣ ಮಾತ್ರದಲ್ಲೇ ಮಾಹಿತಿಯನ್ನು ಎಲ್ಲೆಡೆ ಹರಡುವಂತೆ ಮಾಡುತ್ತದೆ. ಇದರಿಂದ ಎಷ್ಟೋ ಜನರ ಜೀವನ ಶೈಲಿ ಕೂಡ ಬದಲಾವಣೆಯಾಗಿದ. ಅದರಲ್ಲಿ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಈ ಹುಡುಗ ಕೂಡ ಒಬ್ಬನು. ಹೌದು ಈ ಘ’ಟನೆ ನಡೆದಿರೋದು ಛತ್ತೀಸ್ ಘಡದಲ್ಲಿ. ಇಲ್ಲಿನ ಐಎಎಸ್ ಅಧಿಕಾರಿ ಅವಿನಿತ್ ಶರಣ್ ಅವರು.
[widget id=”custom_html-4″]

ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಒಬ್ಬ ಹುಡುಗನ ಪೋಟೋವನ್ನು ಶೇರ್ ಮಾಡಿದ್ದು, ಈ ಹುಡುಗನ ಹೆಸರು ಪುರುಷೋತ್ತಮ ಅಂತ. ಈ ಹುಡುಗ ಪ್ರತಿನಿತ್ಯ ರಸ್ತೆಯಲ್ಲಿ ಪಕ್ಕದಲ್ಲಿ ತರಕಾರಿ ವ್ಯಾಪಾರವನ್ನ ಮಾಡುತ್ತಿದ್ದ. ಇನ್ನು ತನ್ನ ವ್ಯಾಪಾದ ಜೊತೆ ಜೊತೆಯಲ್ಲೇ ಓದುತ್ತಿದ್ದ ಕೂಡ. ಇನ್ನು ಐಎಎಸ್ ಅಧಿಕಾರಿ ರಸ್ತೆಯಲ್ಲಿ ತರಕಾರಿ ಮಾರುತ್ತಾ ಓದುತ್ತಿರುವ ಈ ಹುಡುಗನ ಪೋಟೋವನ್ನು ತೆಗೆದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ರೀತಿ ಬರೆದು ಪೋಸ್ಟ್ ಮಾಡಿದ್ದರು. ‘ಬೆಂಕಿ ಎಲ್ಲಿಯಾದರೂ ಇರಲಿ ಅದು ಉರಿಯುತ್ತಾ ಇರಬೇಕು’ ಎಂಬ ಅರ್ಥ ಪೂರ್ಣವಾದ ಮಾತನ್ನೂ ಬರೆದು ಪೋಸ್ಟ್ ಮಾಡಿದ್ದರು. ಯಾಕೆಂದರೆ ಈ ಹುಡುಗ ತರಕಾರಿ ಮಾರಾಟ ಮಾಡುತ್ತಿರುವ ಜಾಗದಲ್ಲೇ ಓದುತ್ತಿದ್ದನ್ನು ಕಂಡು ತಮ್ಮ ಬಾಲ್ಯದ ಕಷ್ಟವನ್ನು ನೆನಪಿಸಿಕೊಂಡರು. ಇನ್ನು ಈ ಐಎಎಸ್ ಅಧಿಕಾರಿ ಅವಿನಿತ್ ಶರಣ್ ಅವರು 2009ರ ಬ್ಯಾಚ್ ಗೆ ಸೇರಿದವರಾಗಿದ್ದರು..
[widget id=”custom_html-4″]

ಇಂದು ಐಎಎಸ್ ಅಧಿಕಾರಿಯಾಗಿರೋ ಇವರು ಹತ್ತನೇ ತರಗತಿಯಲ್ಲಿ ತೆಗೆದುಕೊಂಡಿರೋದು ಕಡಿಮೆ ಅಂಕಗಳು. ಬಳಿಕ ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಜೀವನದಲ್ಲಿ ಕಷ್ಟಪಟ್ಟು ಛಲದಿಂದ ಓದಿ, ಇಂದು ಐಎಎಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದರು. ಅದೇರೀತಿ ಈ ಹುಡುಗ ಪುರುಷೋತ್ತಮ್ ಕೂಡ ಛಲದಿಂದ ಒಂದಲ್ಲ ಒಂದು ದಿನ ಮುಂದೆ ಬರುತ್ತಾನೆ ಎಂದು ತಿಳಿದ, ಐಎಎಸ್ ಅಧಿಕಾರಿ ಈ ಹುಡುಗನ ವಿದ್ಯಾಭ್ಯಾಸ ಮಾಡುತ್ತಿರುವ ಶೈಲಿ ನೋಡಿ, ತಾವು ವಿದ್ಯಾಭ್ಯಾಸ ಮಾಡುವಾಗ ಪಟ್ಟ ಕಷ್ಟದ ಸಮಯ ನೆನಪು ಮಾಡಿಕೊಂಡು ಈ ಹುಡುಗನ ಪೋಟೋವನ್ನು ಶೇರ್ ಮಾಡಿದ್ದಾರೆ.. ಸ್ನೇಹಿತರೆ ಈ ಐಎಎಸ್ ಅಧಿಕಾರಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..