ಕೊ’ಲೆಗಡುಕ ಕೋಳಿಯನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ! ಇದು ತಮಾಷೆಯಲ್ಲ?ಕಾರಣ ನೀವೇ ನೋಡಿ..

Kannada News

ಜೂ’ಜಿನ ಸಮಯದಲ್ಲಿ ಆಕಸ್ಮಿಕವಾಗಿ ಹುಂಜವೊಂದು ಒಬ್ಬ ವ್ಯಕ್ತಿಯನ್ನು ಕೊಂ’ದಿದೆ. ಈ ವಿಚಾರ ಪೊಲೀಸರು ಆ ಹುಂಜವನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದಲ್ಲಿ ಕೋಳಿ ಜೂ’ಜಿಗೆ ನಿಷೇಧವಿದೆ. ಆದರೂ ಕೆಲವರು ಅಕ್ರಮವಾಗಿ ಈ ಪಂದ್ಯವನ್ನು ಆಯೋಜಿಸಿದ್ದರು. ಇದು ಫೆಬ್ರುವರಿ 22 ರಂದು ನಡೆದ ಘಟನೆ. ಅಂದು ಜೂ’ಜು ಪಂದ್ಯ ಏರ್ಪಡಿಸಲಾಗಿತ್ತು.

ಆ ಸಂದರ್ಭ ಕೋಳಿ ಕಾಲಿಗೆ ಚಾ’ಕು ಕಟ್ಟಲಾಗಿತ್ತು. ಹುಂಜವನ್ನು ಪಂದ್ಯಕ್ಕೆ ಬಿಡುವ ವೇಳೆ ಅದು ತಪ್ಪಿಸಿಕೊಳ್ಳಲು ಒದ್ದಾಡ ತೊಡಗಿತು. ಈ ವೇಳೆ ಹುಂಜವನ್ನು ಹಿಡಿದುಕೊಂಡಿದ್ದ 45 ವರ್ಷದ ವ್ಯಕ್ತಿಯ ಕಿಬ್ಬೊಟ್ಟೆಗೆ ಚಾ’ಕು ತಗುಲಿ ತೀವ್ರ ರ’ಕ್ತ ಸ್ರಾ’ವ ಶುರುವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಲು ಮುಂದಾದರು ತೀವ್ರ ರ’ಕ್ತಸ್ರಾ’ವದಿಂದ ಆ ವ್ಯಕ್ತಿ ಅಸುನೀಗಿದ್ದಾನೆ.

ಈ ದು’ರ್ಘಟನೆ ನಡೆದಿರುವುದು ತೆಲಂಗಾಣದ ಜಗತಿಯಾಲ್ ಜಿಲ್ಲೆಯ ಯಲ್ಲಮ್ಮ ದೇವಾಲಯದಲ್ಲಿ.
ಈ ವಿಚಾರವಾಗಿ ಗೊಲ್ಲಪಲ್ಲಿ ಪೊಲೀಸರು ಪಂದ್ಯ ಆಯೋಜಿಸಿದವರು ಸೇರಿದಂತೆ ಹಲವರನ್ನು ಬಂ’ಧಿಸಿದ್ದಾರೆ. ಜೊತೆಗೆ ಆ ಹುಂಜವನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಠಾಣೆಯ ಆವರಣದಲ್ಲಿ ಕಟ್ಟಿ ಆಹಾರವನ್ನು ಹಾಕುತ್ತಿದ್ದಾರೆ. ಕಾರಣ ಕೇಳಿದರೆ ಅದು ಸಾಕ್ಷಿಯಾಗಿ ಬೇಕೆನ್ನುತ್ತಾರೆ.

ಸದ್ಯ ಈ ವಿಷಯ ಈಗ ಎಲ್ಲೆಡೆ ಸುದ್ದಿಯಾಗಿದೆ. ಪೊಲೀಸರು ಕೋಳಿಯನ್ನು ಬಂಧಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಆದರೆ ಇಲ್ಲಿ ಕೋಳಿಯ ಬಂ’ಧನಕ್ಕಿಂತ ನಾವು ನಮ್ಮ ಸುರಕ್ಷತೆಯ ಬಗ್ಗೆ ಗಮನ ಕೊಡಬೇಕು, ಮೂಕ ಪ್ರಾಣಿಗಳಿಗೆ ಹಿಂ’ಸಿಸಬಾರದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಬಾರದು ಎಂಬುದು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯ.