ಚಿಕನ್ ಪೆಪ್ಪರ್ ಫ್ರೈ 100% ನಾಲಿಗೆ ಬಯಸುವ ರುಚಿಯಲ್ಲಿ ಮಾಡುವ ವಿಧಾನ

Kannada News
Advertisements

ನಮಸ್ಕಾರ ಸ್ನೇಹಿತರೆ, ಚಳಿಯಾದಾಗ ಮಳೆಯಾದಾಗ ಏನಾದರು ಬಿಸಿ ಬಿಸಿಯಾಗಿ ತಿನ್ನಬೇಕು ಅಂತ ಆಸೆಯಾಗುತ್ತೆ. ಇನ್ನು ನಾವು ಬೇಸಿಗೆ ಕಾಲದಲ್ಲಿ ದೇಹಕ್ಕೆ ತಂಪು ಉಂಟುಮಾಡುವ ಆಹಾರ ಹಾಗೂ ಚಳಿಗಾಲ ಮತ್ತು ಮಳೆಗಾಲದಲ್ಲಿ ದೇಹಕ್ಕೆ ಉಷ್ಣಾಂಶವನ್ನ ಕೊಡುವ ಆಹಾರ ಪದಾರ್ಥಗಳನ್ನ ಸೇವಿಸಿದಲ್ಲಿ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತೆ. ಇನ್ನು ಚಿಕನ್ ನಲ್ಲಿ ಹಲವಾರು ವಿವಿಧ ಬಗೆಯ ಅಡುಗೆಗಳನ್ನ ಮಾಡಬಹುದು. ಇನ್ನು ಈ ವಿಡಿಯೋದಲ್ಲಿ ಗರಂ ಗರಂ ಪೆಪ್ಪರ್ ಚಿಕನ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ..ಇನ್ನು ಚಿಕನ್ ಪ್ರಯಾರಿಗಂತೂ ಈ ಪೆಪ್ಪರ್ ಚಿಕನ್ ರೆಸೆಪಿ ತುಂಬಾನೇ ಇಷ್ಟ ಆಗುತ್ತೆ. ಹಾಗಾದ್ರೆ ಗರಂ ಗರಂ ಪೆಪ್ಪರ್ ಚಿಕನ್ ಮಾಡಲು ಬೇಕಾಗುವ ಪದಾರ್ಥಗಳೇನು..ಮಾಡುವ ವಿಧಾನ ಹೇಗೆ ಎಂದು ನೋಡೋಣ..

ಚಿಕನ್ ಪೆಪ್ಪರ್ ಫ್ರೈ ಮಾಡಲು ಬೇಕಾದ ಪದಾರ್ಥಗಳು : ಕೋಳಿಮಾಂಸ ಅರ್ಧ ಕೆಜಿ ಎಷ್ಟು, ಸಣ್ಣಗೆ ಕತ್ತರಿಸಿದ ಈರುಳ್ಳಿ 2, ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ 1ಗಡ್ಡೆ,  ತುರಿದ ಶುಂಠಿ ಒಂದು ಇಂಚಿನಷ್ಟು, ಸೋಂಪಿನ ಕಾಳು 1 ಟೀ ಸ್ಪೂನ್ ನಷ್ಟು,ಅರಿಶಿನದ ಪುಡಿ ಸ್ವಲ್ಪ ಹಸಿಮೆಣಸಿನಕಾಯಿ 4, ಒಣಮೆಣಸು ಒಂದುವರೆ ಟೇಬಲ್ ಸ್ಪೂನ್, ಜೀರಿಗೆ 1 ಟೀ ಸ್ಪೂನ್ ನಷ್ಟು, ಕರಿಬೇವಿನ ಸೊಪ್ಪು ಸ್ವಲ್ಪ, ಚಕ್ಕೆ 1 ಇಂಚಿನಷ್ಟು, ಲವಂಗ 2, ರುಚಿಗೆ ತಕ್ಕಷ್ಟು ಉಪ್ಪು