ದಿಢೀರನೇ ಬಾರಿ ಇಳಿಕೆ ಕಂಡ ಚಿಕನ್..ಅಸಲಿ ಕಾರಣ ಏನ್ ಗೊತ್ತಾ.?

News

ತರಹೇವಾರಿ ವಿಭಿನ್ನ ಪದಾರ್ಥಗಳನ್ನ ಮಾಡಬಹುದಾದ ಚಿಕನ್ ಎಂದರೆ ನಾನ್ ವೆಜ್ ಪ್ರಿಯರಿಗೆ ಎಲ್ಲಿಲ್ಲದ ಪ್ರೀತಿ. ಭಾನುವಾರ ಬಂತೆಂದರೆ ಸಾಕು ಚಿಕನ್ ನಲ್ಲಿ ಕಬಾಬ್, ಬಿರಿಯಾನಿ, ಚಿಕನ್ ಫ್ರೈ ಹೀಗೆ ವಿಭಿನ್ನವಾದ ಪದಾರ್ಥಗಳನ್ನ ಮಾಡಿಕೊಂಡು ಸವಿಯುತ್ತಾರೆ.

ಆದರೆ ಈಗ ಚೀನಾದ ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಚಿಕನ್ ಶಾಪ್ ಗಳು ಗ್ರಾಹಕರಿಲ್ಲದೆ ಬಣಗುಡುತ್ತಿರುವ ಪರಿಸ್ಥಿತಿ ಎದುರಾಗಿದೆ. ಇನ್ನು ಇದರಿಂದ ವ್ಯಾಪಾರ ನಿಂತುಹೋಗಿದ್ದು, ಇದರಿಂದ ಕೋಳಿ ಮಾಂಸದ ಬೆಲೆ ಕೂಡ ಕಡಿಮೆಯಾಗುತ್ತಿದೆ.

ಇದಕ್ಕೆಲ್ಲಾ ಮೂಲಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಚಿಕನ್ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳು. ಹೌದು, ಕೋಳಿ ಮಾಂಸ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂಬ ಫೇಕ್ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಆದರೆ ಇದರ ಪರಿಣಾಮ ಕೋಳಿ ಮಾಂಸದ ವ್ಯಾಪಾರಿಗಳ ಮೇಲೆತಟ್ಟಿದ್ದು, ಚಿಕನ್ ಮಾರಾಟ ಕಡಿಮೆಯಾಗಿದೆ.

ಇದೆಲ್ಲದರ ಪರಿಣಾಮ ಕೋಳಿ ಮಾಂಸದ ಬೆಲೆ ಅರವತ್ತರಿಂದ ಎಪ್ಪತ್ತು ರುಪಾಯಿಗೆ ಇಳಿದಿದ್ದು, ಚಿಕನ್ ಶಾಪ್ ಮಾಲೀಕರು ತಲೆ ಮೇಲೆ ಕೈಹೊತ್ತು ಕೂತುಕೊಳ್ಳುವಂತಾಗಿದೆ. ಇನ್ನು ಚೀನಾದ ಮಹಾಮಾರಿ ಕೊರೊನಾ ವೈರಸ್ ಬೆಂಗಳೂರಿಗೆ ಬಂದಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಬೆಂಗಳೂರಿಗರು ಕೊರೊನಾ ವೈರಸ್ ಭಯದಿಂದ ಚಿಕನ್ ಕೊಂಡುಕೊಂಡು ಹೋಗಲು ಹಿಂಜರಿಯುತ್ತಿದ್ದಾರೆ ಎಂದು ಚಿಕನ್ ವ್ಯಾಪಾರಿಗರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.