ಮತ್ತೆ ಚೀನಾದಲ್ಲಿ ಹೆಚ್ಚಾಯಿತು ಕೊರೋನಾ ವೈರಸ್..ಕಾರಣ ಕೇಳಿದ್ರೆ ಶಾಕ್?ಇದು ಜಗತ್ತಿಗೆ ಎಚ್ಚರಿಕೆ ಗಂಟೆ..

News

ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ಮಹಾಮಾರಿ ಕೊರೋನಾ ವೈರಸ್ ಇಡೀ ಜಗತ್ತಿನಾದ್ಯಂತ ರುದ್ರತಾಂಡವವಾಡುತ್ತಿದೆ. ಮುಂದುವರಿದ ದೇಶಗಳೇ ಈ ಸೋಂಕನ್ನ ನಿಯಂತ್ರಣ ಮಾಡಲಾಗದೆ ಅದುರಿ ಅಲ್ಲಾಡಿ ಹೋಗಿವೆ.

ಇನ್ನು ಚೀನಾ ಕೂಡ ಈ ಕೊರೋನಾ ವಿರುದ್ಧ ಹೋರಾಡಿದ ಕಾರಣ ನಿಯಂತ್ರಣ ಮಾಡಲು ಸಾಧ್ಯವಾಗಿತ್ತು. ಮೂರೂ ತಿಂಗಳುಗಳ ಕಾಲ ಹಲವಾರು ಸೇವೆಗಳನ್ನ ನಿರ್ಬಂಧ ಮಾಡಿ, ಲಾಕ್ ಡೌನ್ ಕೂಡ ಮಾಡಲಾಗಿತ್ತು. ಚೀನಾ ಜನರು ಕಚೇರಿಗಳತ್ತ ಮುಖಮಾಡಿದ್ದು, ಇನ್ನೇನು ಮೊದಲಿನ ಸ್ಥಿತಿಗೆ ಚೀನಾ ಬರುತ್ತಿದೆ ಅನ್ನುವಷ್ಟರಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.

ಇನ್ನು ಚೀನಾ ಆರೋಗ್ಯ ಇಲಾಖೆಯೆ ನೀಡಿರುವ ವರದಿಗಳ ಪ್ರಕಾರ ಶುಕ್ರವಾರ ೪೬ ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವುದು ಕನ್ಫರ್ಮ್ಆಗಿತ್ತು. ಇನ್ನು ಭಾನುವಾರ ಏಪ್ರಿಲ್ ೧೨ರಂದು ಕೂಡ ೧೦೮ ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಚೀನಾ ಹೇಳಿದೆ. ಇನ್ನು ಮತ್ತೆ ಸೋಂಕು ಕಾಣಿಸಿಕೊಂಡಿದ್ದು ಹೇಗೆ ಅಂತ ಅಲ್ಲಿನ ವೈದ್ಯರ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇನ್ನು ವರದಿಗಳ ಪ್ರಕಾರ ಲಾಕ್ ಡೌನ್ ತೆರವು ಮಾಡಿದ ಬೆನ್ನಲ್ಲೇ ವಿಮಾನ ಸೇವೆ ಕೂಡ ಆರಂಭಗೊಂಡಿದ್ದು, ಬೇರೆ ದೇಶಗಳಲ್ಲಿದ್ದ ಚೀನಾ ಪ್ರಜೆಗಳು ಸ್ವದೇಶಕ್ಕೆ ಹಿಂದಿರುಗಿದ್ದು ಇದರಿಂದ ಕೊರೋನಾ ಸೋಂಕು ಹೊಸ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.

ಇನ್ನು ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸತತವಾಗಿ ಮೂರು ತಿಂಗಳು ಲಾಕ್ ಡೌನ್ ಮಾಡಿದ್ದ ಚೀನಾ, ಈಗ ಏಕಾಏಕಿ ಲಾಕ್ ಡೌನ್ ತೆರವುಗಳಿಸಿದ್ದೆ ಸೋಂಕು ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇನ್ನು ನಮ್ಮ ದೇಶದಲ್ಲಿ ಕೂಡ ಲಾಕ್ ಡೌನ್ ಮಾಡಲಾಗಿದ್ದು, ಒಂದು ವೇಳೆ ಏಕಾಏಕಿ ಲಾಕ್ ಡೌನ್ ತೆರವುಗೊಳಿಸಿದ್ರೆ ಕೊರೋನಾ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇನ್ನು ಸದ್ಯಕ್ಕೆ ಚೀನಾದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆ ಜಗತ್ತಿಗೆ ಪಾಠವಾಗಬೇಕು ಎಂದು ಹೇಳಲಾಗಿದೆ.