ಕೊನೆಗೂ ಬುದ್ದಿ ಬಂತಾ ಚೀನಾಗೆ ! ಮೋದಿ ಗಡಿಗೆ ಭೇಟಿ ಕೊಟ್ಟು ಬಂದ 3 ದಿನದಲ್ಲೇ ಆಗಿರುವುದೇನು ಗೊತ್ತಾ ?

News

ಸ್ನೇಹಿತರೆ, ಭಾರತದ ಗಡಿಯಲ್ಲಿ ಸಂಘರ್ಶಕ್ಕೆ ಕಾರಣವಾಗಿದ್ದ ಕುತಂತ್ರಿ ಚೀನಾಗೆ ಕೊನೆಗೂ ಬುದ್ದಿ ಬಂದಂತೆ ತೋರುತ್ತಿದೆ. ಲಡಾಕ್ ನ ಗಾಲ್ವಾನ್​ ಕಣಿವೆಯಲ್ಲಿ ನಮ್ಮ ವೀರ ಯೋಧರೊಂದಿಗೆ ಚೆನೈ ಸೈನಿಕರು ಸಂಘರ್ಷ ನಡೆಸಿದ್ದ ಬಳಿಕ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ಎದುರಾಗಿದ್ದ ಎರಡು ದೇಶಗಳ ಸೇನಾ ತಂಡಗಳು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡವು. ಇನ್ನು ಭಾರತದಲ್ಲಂತೂ ಚೀನಾ ದೇಶದ ಕುತಂತ್ರವನ್ನ ವಿರೋಧಿಸಿ ಅನೇಕ ಪ್ರತಿಭಟನೆಗಳು ನಡೆದವು.

ಇದೇ ವೇಳೆ ಚೀನಾ ನಿರ್ಮಿತ ವಸ್ತುಗಳು ಹಾಗೂ appಗಳನ್ನ ನಿಷೇಧಿಸಬೇಕೆಂಬ ಕೂಗು ಹೆಚ್ಚಾಯಿತು. ಇನ್ನು ಚೀನಾಗೆ ಬುದ್ದಿ ಕಲಿಸಲೇಬೇಕೆಂದು ನಿರ್ಧಾರ ಮಾಡಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಚೀನಾದ 59app ಗಳನ್ನ ಭಾರತದಲ್ಲಿ ನಿಷೇಧ ಮಾಡಿತು. ಜೊತೆಗೆ ರಸ್ತೆ, ರೈಲ್ವೆ, ವಿದ್ಯುತ್ ಸೇರಿದಂತೆ 5G ಸೇರಿದಂತೆ ಹಲವಾರು ವಲಯಗಳಲ್ಲಿ ಚೀನಾಗೆ ನೀಡಿದ್ದ ಟೆಂಡರ್ ಗಳನ್ನ ಕ್ಯಾನ್ಸಲ್ ಮಾಡಿತು. ಜೊತೆಗೆ ಮೂರು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿಯವರೇ ಲಡಾಖ್ ಗೆ ಬೆಹಟಿ ಕೊಟ್ಟಿದ್ದು ನಮ್ಮ ಸೈನಿಕಿರೊಂದಿಗೆ ಮಾತಾಡಿ ಬಂದಿದ್ದರು.

ಇನ್ನು ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ವಿವಾದಿತ ಪ್ರದೇಶ ಗಾಲ್ವಾನ್​ ಕಣಿವೆ ಹಾಗೂ ಮತ್ತೆರಡು ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದ ಚೀನೀ ಸೈನಿಕ ಸೇನಾ ಪಡೆಗಳು ಹಿಂದೆ ಸರಿದಿವೆ ಭಾರತೀಯ ಸೇನೆಯಿಂದ ತಿಳಿದು ಬಂದಿದೆ. ಚಿಲಿನಿ ಸೈನಿಕರು ಗಾಲ್ವಾನ್​ ಕಣಿವೆಯಲ್ಲಿ ಹಾಕಿದ್ದ ಅವರ ಟೆಂಟ್ ಗಳನ್ನ ಕೂಡ ಶಿಫ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಕುತಂತ್ರ ಮಾಡುತ್ತಲೇ ಬಂದಿರುವ ಚೀನಾವನ್ನ ನಂಬಲಿಕ್ಕೆ ಆಗುವುದಿಲ್ಲ. ಆದರೆ ಬೇರೆ ಏನಾದರು ದುರುದ್ದೇಶದಿಂದ ಅಲ್ಲಿಂದ ಚೀನೀ ಸೇನೆ ಸ್ಥಳಾಂತರವಾಗಿದೆಯಾ ಎಂಬುದನ್ನ ಕಾದು ನೋಡಬೇಕಾಗಿದೆ ಅಷ್ಟೇ..ಒಟ್ಟಿನಲ್ಲಿ ಚೀನಾದ ಈ ನಡೆಯಿಂದ ಕೊಂಚ ಮಟ್ಟಿಗಾದರೂ ಭಾರತ ಚೀನಾ ಮಧ್ಯೆ ಬಿಕ್ಕಟ್ಟು ಕಡಿಮೆಯಾದಂತಾಗಿದೆ ಎಂದು ಹೇಳಲಾಗಿದೆ.