ಅಣ್ಣನ ಅಗಲಿಕೆಯ ನೋವಿನಿಂದ ಆಸ್ಪತ್ರೆಗೆ ದಾಖಲಾದ ಧ್ರುವ ಸರ್ಜಾ !

Cinema
Advertisements

ಚಿಕ್ಕವಯಸ್ಸಿಗೆ ಇಹಲೋಕ ತ್ಯಜಿಸಿದ ಸ್ಯಾಂಡಲ್ವುಡ್ ಯುವನಟ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನೋವು ಅವರ ಕುಟುಂಬದವರಿಗೆ ಅಷ್ಟು ಬೇಗ ಕಡಿಮೆಯಾಗುವಂತದ್ದಲ್ಲ. ಇನ್ನು ಚಿರು ಸರ್ಜಾ ಧ್ರುವ ಸರ್ಜಾ ಸಹೋದರರು ರಾಮ ಲಕ್ಷ್ಮಣರಂತಿದ್ದವರು. ತಾನು ಅತಿಯಾಗಿ ಪ್ರೀತಿಸುತ್ತಿದ್ದ ಅಣ್ಣನನ್ನ ಕಳೆದುಕೊಂಡ ನೋವು ಧ್ರುವ ಅವರಿಂದ ಮರೆಯಲು ಆಗುತ್ತಿಲ್ಲ.

Advertisements

ಹಾಗಾಗಿಯೇ ಅಣ್ಣನ ಅಗಲಿಕೆಯಿಂದ ಮಾನಸಿಕವಾಗಿ ಕುಗ್ಗುಹೋಗಿರುವ ಧ್ರುವ ಸರ್ಜಾ ಇತ್ತೀಚೆಗಷ್ಟೇ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು ಎರಡು ದಿನಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮಾಹಿತಿಗಳ ಪ್ರಕಾರ ಸ್ನೇಹಿತನಂತಿದ್ದ ಅಣ್ಣ ಚಿರು ಸರ್ಜಾ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿರುವ ಧ್ರುವಾ ಒಂಟಿಯಾಗಿರಲು ಬಯಸುತ್ತಿದ್ದಾರೆ ಎಂದು ಹೇಳಲಾಗಿದ್ದು ಊಟ ತಿಂಡಿ ಸರಿಯಾಗಿ ಮಾಡದ ಕಾರಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ಹೇಳಲಾಗಿದೆ.

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಧ್ರುವ ಸರ್ಜಾ ಕೆಲವೇ ದಿನಗಳಲ್ಲಿ ಅಭಿಮಾನಿಗಳ ಎದುರಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು ಯಾರೂ ಅವರ ಮನೆ ಬಳಿ ಬಂದು ಅವರಿಗೆ ತೊಂದರೆ ಕೊಡಾಬಾರದು ಎಂದು ಅವರ ಸ್ನೇಹಿತರೊಬ್ಬರು ಹೇಳಿದ್ದಾರೆ. ಇನ್ನು ಧ್ರುವ ಅವರು ಆಸ್ಪತ್ರೆಗೆ ಚಿಕಿತ್ಸೆ ಪಡೆದು ಮನೆಗೆ ಮರಳಿರುವ ವಿಷಯ ಮಾವ ಅರ್ಜುನ್ ಸರ್ಜಾ ಅವರಿಗೆ ತಿಳಿದಿದ್ದು ಚೆನ್ನೈನಿಂದ ಬೆಂಗಳೂರಿಗೆ ಬಂದಿರುವ ಅರ್ಜುನ್ ಸರ್ಜಾ ಧ್ರುವ ಅವರಿಗೆ ಧೈರ್ಯ ತುಂಬಿದ್ದಾರೆ ಎಂದು ಹೇಳಲಾಗಿದೆ.