ಕನ್ನಡ ಸಿನಿಮಾರಂಗದ ಯುವ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಬಿಟ್ಟು ಆಗಲಿ ಎರಡು ವರ್ಷ ಕಳೆದೆ ಹೋಯ್ತು. ನೆನ್ನೆ ಜೂನ್ 7ರಂದು ಚಿರಂಜೀವಿ ಸರ್ಜಾ ಅವರ ಕುಟುಂಬ ಹಾಗೂ ಆಪ್ತ ಬಳಗ ಹಾಗೂ ಅವರ ಅಭಿಮಾನಿಗಳು ಕನಕಪುರ ರಸ್ತೆಯ ನೆಲಗೂಳಿಯಲ್ಲಿರೋ ಧ್ರುವ ಫಾರ್ಮ್ ಹೌಸ್ ನಲ್ಲಿ ಚಿರು ಸಮಾಧಿಗೆ ಪೂಜೆ ಸಲ್ಲಿಸಿ, ಎರಡನೇ ವರ್ಷದ ಕಾರ್ಯವನ್ನ ಶಾಸ್ತ್ರೋಕ್ತವಾಗಿ ಮುಗಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ಸಮಾಧಿ ಇರುವ ಫಾರ್ಮ್ ಹೌಸ್ ಗೆ ನಟ ಅರ್ಜುನ್ ಸರ್ಜಾ ಸೇರಿದಂತೆ, ಧ್ರುವ ಸರ್ಜಾ ಹಾಗೂ ಚಿರು ಪತ್ನಿ ಮೇಘನಾ ರಾಜ್, ಪುತ್ರ ರಾಯನ್ ಸರ್ಜಾ ಹಾಗೂ ಸುಂದರ್ ರಾಜ್ ಅವರು ಸೇರಿದಂತೆ ಕುಟುಂಬದವರು ಹಾಗೂ ಆಪ್ತ ಬಳಗ ಪಾಲ್ಗೊಂಡು ಪೂಜೆ ಕಾರ್ಯಗಳನ್ನ ನೆರವೇರಿಸಿದ್ದಾರೆ.

ಇನ್ನು ಚಿರು ಸರ್ಜಾ ಅವರ ಎರಡನೇ ವರ್ಷದ ಕಾರ್ಯಗಳನ್ನ ಮುಗಿಸಿ ಮಾತನಾಡಿರುವ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಮಾತನಾಡುತ್ತಾ ಇದೆ ಕೈನಲ್ಲಿ ಚಿರುವನ್ನ ಎತ್ತಿ ಆಡಿಸಿದ್ದೆ, ಶಾಲೆಗೆ ಕಳುಹಿಸಿದ್ದೆ, ನಟನಾ ತರಬೇತಿಗೂ ಕಳುಹಿಸಿದ ನೆನಪು ನನಗೆ ಇದೆ. ಅವನು ಇಲ್ಲ ಅನ್ನುವ ಬಗ್ಗೆ ಏನೂ ಹೇಳುವುದೋ ಗೊತ್ತಾಗುತ್ತಿಲ್ಲ. ಅವನು ಇಲ್ಲದೆ ಇರೋ ಈ ಎರಡು ವರ್ಷ ಹೇಗೆ ಕಳೆದುಹೋಯ್ತೋ ಗೊತ್ತಾಗುತ್ತಿಲ್ಲ, ಎಂದು ತುಂಬಾ ಭಾವುಕರಾಗಿ ಅರ್ಜುನ್ ಸರ್ಜಾ ಅವರೊದಿಗೆ ಕಳೆದಿದ್ದ ನೆನಪುಗಳನ್ನ ಸ್ಮರಿಸಿದ್ದಾರೆ ಅರ್ಜುನ್ ಸರ್ಜಾ..
ಇನ್ನು ಚಿರಂಜೀವಿ ಸರ್ಜಾ ಇಲ್ಲದ ಈ ವೇಳೆ ಚಿರು ಮಗನಿಂದ ನಮಗೆ ನೆಮ್ಮದಿ ಸಿಗುತ್ತಿದೆ. ರಯಾನ್ ಸರ್ಜಾನಿಂದ ಚಿರು ಇಲ್ಲ ಅನ್ನೋ ಕೊರಗನ್ನ ಸ್ವಲ್ಪವಾದರೂ ಮರೆಯಲು ಸಾಧ್ಯವಾಗುತ್ತಿದೆ. ಇನ್ನು ರಯಾನ್ ಸರ್ಜಾ ಕೂಡ ಸಿನಿಮಾ ರಂಗ ಪ್ರವೇಶ ಮಾಡಲಿದ್ದಾನೆ. ಸಿನಿಮಾ ರಂಗಕ್ಕೆ ಚಿರಂಜೀವಿ ಸರ್ಜಾನನ್ನ ನಾನೆ ಲಾಂಚ್ ಮಾಡಿದ್ದು. ಈಗಲೂ ಕೂಡ ಚಿರು ಮಗ ರಯಾನ್ ನನ್ನ ಸಿನಿಮಾರಂಗಕ್ಕೆ ನಾನೆ ಲಾಂಚ್ ಮಾಡುತ್ತೇನೆ ಎಂದು ಅರ್ಜುನ್ ಸರ್ಜಾ ಅವರು ಚಿರುವನ್ನ ನೆನೆಯುತ್ತಾ ಭಾವುಕರಾಗಿ ಮಾತನಾಡಿದ್ದಾರೆ. ಆದರೆ ರಾಯನ್ ಸರ್ಜಾನನ್ನ ಯಾವಾಗ ಸಿನಿಮಾ ರಂಗಕ್ಕೆ ಲಾಂಚ್ ಮಡಲಿದ್ದಾರೆ ಎಂಬ ಮಾಹಿತಿಯನ್ನ ಸರ್ಜಾ ಕುಟುಂಬ ಬಿಟ್ಟುಕೊಟ್ಟಿಲ್ಲ..ಬಾಲನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ..