ಕೈಯಿಂದ ಜೀಪ್ ಎಳೆದ ರಿಯಲ್‌ ಬಾಹುಬಲಿ ಕಂಡು ಭಲೇ ಭಲೇ ಅಂದ್ರು ಜನ !

Kannada News
Advertisements

[widget id=”custom_html-4″]

ನೀವು ಬಾಹುಬಲಿ ಸಿನಿಮಾ ನೋಡಿದೀರಿ ಅಲ್ವಾ..? ಅದ್ರಲ್ಲೂ ನಟ ಪ್ರಭಾಸ್‌ ಶಿವಲಿಂಗವನ್ನೇ ಎತ್ತಿಕೊಂಡು ಹೋಗೋ ದೃಶ್ಯವಂತೂ ನೋಡದೇ ಇರೋರು ಯಾರೂ ಇಲ್ಲ. ಅದೆಲ್ಲಾ ಗ್ರಾಫಿಕ್ಸ್‌ ಅಷ್ಟೇ. ನಿಜ ಜೀವನದಲ್ಲಿ ಯಾರೂ ಅಷ್ಟು ದೊಡ್ಡ ಸಾಹಸ ಮಾಡೋಕೆ ಹೋಗಲ್ಲ. ಆದ್ರೆ, ಇಲ್ಲೊಬ್ರು ಪೊಲೀಸ್ ಅಧಿಕಾರಿ ಕೈಯಿಂದಲೇ ಪೊಲೀಸ್ ಜೀಪ್ ಎಳೆದು ರಿಯಲ್ ಬಾಹುಬಲಿಯಾಗಿದ್ದಾರೆ. ಹೌದು, ಪೊಲೀಸರು ಅಂದ್ರೆ ಯಾರು..? ಜನ್ರಿಗೆ ರಕ್ಷಣೆ ಕೊಡೋರು. ನ್ಯಾಯ ಒದಗಿಸೋರು. ಆದ್ರೆ, ಈ ಪೊಲೀಸ್‌ ಅಧಿಕಾರಿ ಅದಕ್ಕಿಂತಲೂ ಹೆಚ್ಚು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗರೆಡ್ಡಿ ಎಂಬುವವರು ಒಬ್ರೇ ಕೈಯಿಂದ ಜೀಪ್ ಎಳೆದು ಸಾಹಸ ಮಾಡಿರೋ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

[widget id=”custom_html-4″]

Advertisements

ಅಬ್ಬಬ್ಬಾ.. ಅದೇನ್‌ ಶಕ್ತಿ, ಅದೇನ್‌ ಶಕ್ತಿ. ಗಾಡಿನಾ ಹೇಗೋ ಕಷ್ಟಪಟ್ಟು ತಳ್ಳಬಹುದು. ಆದ್ರೆ, ಎರಡು ಕೈಯಿಂದ ಎಳೆಯೋದು ಇದ್ಯಲ್ಲಾ ಅದೇ ದೊಡ್ಡ ಸಾಹಸ ಕಣ್ರೀ. ಅಂದ್ಹಾಗೆ, ಯಾಕಿವರು ಒಬ್ರೇ, ಜೀಪ್ ಎಳೆದುಕೊಂಡ್ರು ಹೋದ್ರು ಅಂದ್ರೆ, ಕರ್ತವ್ಯದ ಮೇಲೆ ಇದ್ದಾಗ ಸಿಪಿಐ ನಾಗರೆಡ್ಡಿ ಅವ್ರ ಪೊಲೀಸ್‌ ಜೀಪ್‌ ಕೆ’ಟ್ಟು ನಿಂತಿದ್ದು. ಆಗ ಡ್ರೈವರ್‌ ಮೆಕಾನಿಕ್‌ನನ್ನು ಕರೆದುಕೊಂಡು ಬರೋಕೆ ಅಂತಾ ಹೋಗಿದ್ದ. ಆದ್ರೆ ರಸ್ತೆ ಮಧ್ಯೆ ಕೆ’ಟ್ಟು ನಿಂತಿದ್ದ ಜೀಪ್‌ನಿಂದ ಇತರರಿಗೆ ತೊಂ’ದರೆಯಾಗುತ್ತಿತ್ತು. ಅಲ್ಲದೆ ವಾಹನವನ್ನು ಪಕ್ಕಕ್ಕೆ ತಳ್ಳಲು ಅಕ್ಕ-ಪಕ್ಕ ಯಾರೂ ಇರಲಿಲ್ಲ. ಹೀಗಾಗಿ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಆಗಬಾರದು ಅಂತಾ ಸಿಪಿಐ ನಾಗರೆಡ್ಡಿ ಅವ್ರೇ ಜೀಪ್‌ನ್ನು ಕೈಯಿಂದ ಎಳೆದು ತಂದು ರಸ್ತೆ ಪಕ್ಕ ನಿಲ್ಲಿಸಿದ್ದಾರೆ.

[widget id=”custom_html-4″]

ಇದನ್ನು ಯಾರೋ ದಾರಿಯಲ್ಲಿ ಹೋಗುತ್ತಿರೋರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ವೈರಲ್‌ ಮಾಡಿದ್ದಾರೆ. ಸಿಪಿಐ ನಾಗರೆಡ್ಡಿ ಇವಾಗ ಮಾತ್ರ ಸುದ್ದಿಯಾದವರಲ್ಲ. ಕೊರೊನಾ ಲಾಕ್‌ಡೌನ್‌ ವೇಳೆ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿಯೂ ಹೆಸರಾಗಿದ್ರು. ಆ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಏನೇ ಇರ್ಲಿ.. ಸದ್ಯ ಸಿಪಿಐ ನಾಗರೆಡ್ಡಿ ಅವ್ರ ಈ ಜೀಪ್‌ ಎಳೆಯೋ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್‌ ಆಗ್ತಿದ್ದು, ಜನ ವ್ಹಾವ್‌ ಸಾರ್‌ ವ್ಹಾವ್‌. ಬಾಹುಬಲಿ ರೇಂಜ್‌ಗೆ ಸಾಹಸ ಮಾಡಿದ್ದಾರಲ್ಲಾ ಅಂತಾ ಉದ್ಘರಿಸಿದ್ದಾರೆ.

[widget id=”custom_html-4″]