ಕೊರೋನಾ ವಿರುದ್ಧ ಹೋರಾಡಲು ಸಿಎಂ ಪರಿಹಾರ ನಿಧಿಗೆ 1ಲಕ್ಷ ಕೊಟ್ಟ ಅನ್ನದಾತ ರೈತ..

News
Advertisements

ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯಸರ್ಕಾರಗಳು ಕೂಡ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ. ಇನ್ನು ಕೊರೋನಾ ವಿರುದ್ಧ ಹೋರಾಡಲು ಸೆಲೆಬ್ರೆಟಿಗಳು, ರಾಜಕಾರಣಿಗಳು ಸೇರಿದಂತೆ ಸಾಮಾನ್ಯ ಜನರು ಕೂಡ ತಮ್ಮ ಕೈಲಾದಷ್ಟು ಹಣವನ್ನ ದೇಣಿಗೆಯಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದಾರೆ.

Advertisements

ಇನ್ನು ಎಲ್ಲರಿಗೂ ಅನ್ನ ಕೊಡುವ ರೈತ ಕೂಡ ಈ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಹೌದು, ಕಷ್ಟಪಟ್ಟು ನಾಡಿಗೆಲ್ಲಾ ಅನ್ನ ಹಾಕುವ ರೈತ ತನಗೆ ಇರುವುದರಲ್ಲೇ, ಮತ್ತೊಬ್ಬರ ಸಂಕಷ್ಟಕ್ಕೆ ಮುಂದಾಗುವ ಮನೋಭಾವನೆ ಹೊಂದಿರುತ್ತಾರೆ. ಅದರಂತೆ ಈಗ ಧಾರವಾಡದ ರೈತರೊಬ್ಬರು ಕೊರೋನಾ ವಿರುದ್ಧ ಹೊರಡುವ ಸಲುವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರುಗಳನ್ನ ದೇಣಿಗೆಯಾಗಿ ನೀಡಿದ್ದಾರೆ.

ಧಾರವಾಡದ ಗುಲಗಂಜಿಕೊಪ್ಪ ಎಂಬಲ್ಲಿ ವಾಸವಾಗಿರುವ ಸದಾನಂದ ಶಿವಳ್ಳಿ ಎಂಬ ರೈತರೇ , ಕೊರೋನಾ ಸೋಂಕಿನ ವಿರುದ್ದ ಹೋರಾಡಲು ಸಿಎಂ ಪರಿಹಾರ ನಿಧಿಗೆ 1ಲಕ್ಷ ದೇಣಿಗೆ ಕೊಟ್ಟವರು. ಕೊರೋನಾ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಇಡೀ ರಾಜ್ಯದಾದ್ಯಂತ ಲಾಕ್ ಡೌನ್ ಆಗಿದ್ದು, ದಿನಗೂಲಿ ಕೆಲಸಗಾರರು, ಕಾರ್ಮಿಕರು, ನಿರಾಶ್ರಿತರು, ಹೀಗೆ ಲಕ್ಷಾಂತರ ಮಂದಿ ಊಟ ಸಿಗದೇ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದಾರೆ.

ಇನ್ನು ಇಂತಹವರಿಗೆ ಉಪಯೋಗವಾಗಲೆಂದೇ ರೈತ ಸದಾನಂದ ಶಿವಳ್ಳಿಯವರು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಪರಿಹಾರ ನಿಧಿಗೆ ಬರೋಬ್ಬರಿ ಒಂದು ಲಕ್ಷ ರುಗಳನ್ನ ನೀಡಿ ಮೆರೆದಿದ್ದಾರೆ. ಇನ್ನು ಈ ರೈತನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..ಮರೆಯದೆ ಶೇರ್ ಮಾಡಿ ಈ ರೈತನ ಬಗ್ಗೆ ತಿಳಿಸಿ.