ಸಿನಿಮಾಗಳಲ್ಲಿ ನಾಯಕ ನಟಿಯರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಹಾಸ್ಯ ಪಾತ್ರಗಳಿಗೂ ಇದೆ. ಯಾವುದೇ ಸಿನಿಮಾದಲ್ಲಿ ಕಾಮಿಡಿ ಪಾತ್ರ ಇಲ್ಲ ಅಂದರೆ ಆ ಚಿತ್ರ ನೋಡಿದ ಕಿಕ್ ಸಿಗೋದಿಲ್ಲ. ಸಿನಿಮಾಗಳು ಕೇವಲ ಹಾಡು, ಫೈಟ್ ಗಳು ಇದ್ದಕ್ಕೆ ಮಾತ್ರ ಹಿಟ್ ಆಗೋದಿಲ್ಲ, ಅದರಲ್ಲಿ ಕಾಮಿಡಿ ಪಂಚ್ ಗಳು ಇದ್ದರೇ ಮಾತ್ರ ಸಿನಿಮಾವೊಂದು ಕಂಪ್ಲೀಟ್ ಮನೋರಂಜನೆ ಕೊಟ್ಟ ಸಿನಿಮಾ ಆಗುತ್ತದೆ.

ಇನ್ನು ಹಾಸ್ಯ ನಂತರ ಸಂಭಾವನೆ ವಿಚಾರಕ್ಕೆ ಬರುವುದಾದರೆ ದಿನದಿಂದ ದಿನಕ್ಕೆ ಕಾಲ್ ಶೀಟ್ ನಂತೆ ಕೊಡಲಾಗುತ್ತೆ. ಇನ್ನು ನಮ್ಮ ಸ್ಯಾಂಡಲ್ವುಡ್ ಟಾಪ್ ಹಾಸ್ಯ ನಟರ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇರುತ್ತದೆ. ಕಿರುತೆರೆಯಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ರವರು ತಮ್ಮದೇ ವಿಭಿನ್ನ ಹಾಸ್ಯ ಶೈಲಿಯಿಂದ ಮನರಂಜಿಸುತ್ತಿರುವವರು. ಬಿಗ್ ಬಾಸ್ ಕಾರ್ಯಕ್ರಮದ ರನ್ನರ್ ಆಪ್ ಕೂಡ.ಇನ್ನು ಇವರ ದಿನವೊಂದಕ್ಕೆ 1.5ಲಕ್ಷದಿಂದ 3 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ.

ಇನ್ನು ಸ್ಟಾರ್ ನಾಯಕರ ಸಿನಿಮಾಗಳಲ್ಲಿ ಹಾಸ್ಯ ನಟ ಚಿಕ್ಕಣ್ಣ ಇರಲೇಬೇಕು.ಇನ್ನು ಚಿಕ್ಕಣ್ಣ ಇದ್ದರೆ ಸಾಕು ಆ ಸಿನಿಮಾ ಹಿಟ್ ಅದಂತಯೇ ಎಂಬ ಮಾತು ಗಾಂಧಿನಗರದಲ್ಲಿದೆ. ಇನ್ನು ಈಗ ಬರುತ್ತಿರುವ ಹೊಸಬರ ಚಿತ್ರಗಳಿಂದ ಹಿಡಿದು ಸ್ಟಾರ್ ನಂತರ ಚಿತ್ರಗಳವರೆಗೆ ಬಹುತೇಕ ಚಿತ್ರಗಳಲ್ಲಿ ಚಿಕ್ಕಣ್ಣ ಇದ್ದೆ ಇರುತ್ತಾರೆ. ಇನ್ನು ಚಿಕ್ಕಣ್ಣ ಒಂದು ದಿನದ ಸಂಭಾವನೆಯಾಗಿ 5 ಲಕ್ಷಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ.

ಇನ್ನು ಇವರು ಕೇವಲ ಹಾಸ್ಯ ಪಾತ್ರಗಳು ಮಾತ್ರವಲ್ಲದೆ, ಖಳನಾಯಕನ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅವರೇ ರಂಗಾಯಣ ರಘು. ಇನ್ನು ಇವರು ತಮ್ಮ ಕಾಲ್ ಶೀಟ್ ಗಾಗಿ ೫ ರಿಂದ ೧೦ ಲಕ್ಷದವರೆಗೆ ಸಂಭಾವನೆ ಪಾಡೆಯುತ್ತಾರೆ ಎಂದು ಹೇಳಲಾಗಿದೆ.

ಇನ್ನು ಇವರನ್ನ ನೋಡಿದ್ರೇನೇ ನಗು ಬರುತ್ತೆ. ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಈ ಸಕಾಲವಲ್ಲಭ ನಮ್ಮ ಸಾಧು ಮಹಾರಾಜ್ ರವರು. ಇನ್ನು ಇವರು ಹಾಸ್ಯ ಪಾತ್ರಗಳು ಮಾತ್ರವಲ್ಲದೆ ಸೊಗಸಾಗಿ ಹಾಡುತ್ತಾರೆ, ಸಂಗೀತ ನಿರ್ದೇಶಕರು ಕೂಡಾ ಆಗಿದ್ದಾರೆ. ಇನ್ನು ಸಿನಿಮಾಗಳಲ್ಲಿ ಯಾವ ನಾಯಕ ನಟನ ಎಂಟ್ರಿಗೂ ಕಡಿಮೆ ಇಲ್ಲ ಅನ್ನುವಂತೆ ಸಾಧು ಕೋಕಿಲ ಅವರ ಎಂಟ್ರಿಗೆ ಚಪ್ಪಾಳೆ, ಸಿಳ್ಳುಗಳ ಸುರಿಮಳೆಯ ಆಗುತ್ತದೆ. ಇನ್ನು ಸಾಧು ಮಹಾರಾಜ್ ರವರು ದಿನಕ್ಕೆ ೧೦ ಲಕ್ಷಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ.ಇನ್ನು ನಿಮ್ಮ ನಚ್ಚಿನ ಹಾಸ್ಯ ನಟರು ಯಾರೆಂದು ಕಾಮೆಂಟ್ ಮಾಡಿ ತಿಳಿಸಿ.