ಕೊರೋನಾ ಹಿನ್ನಲೆ ಯಾವುದಕ್ಕೂ ಬಗ್ಗದ ಜನರಿಗೆ ಈ ಪೊಲೀಸರು ಮಾಡಿದ್ದೇನು ಗೊತ್ತಾ.?

News

ದಿನದಿಂದ ದಿನಕ್ಕೆ ದೇಶದಾದ್ಯಂತಾ ಕೊರೋನಾ ಮಹಾಮಾರಿ ವೇಗವಾಗಿ ಹರಡುತ್ತಿದ್ದು, ಲಾಕ್ ಡೌನ್ ಘೋಷಣೆ ಮಾಡಿದ್ದರೂ ಸಾರ್ವಜನಿಕರೂ ಮಾತ್ರ ಇದಕ್ಕೆಲ್ಲಾ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಸರ್ಕಾರದ ನಿಯಮಗಳನ್ನ ಸರಿಯಾಗಿ ಪಾಲಿಸದೆ ಅನಾವಶ್ಯಕವಾಗಿ ಮನೆಯಿಂದ ಆಚೆ ಬರುತ್ತಿದ್ದಾರೆ.

ಇನ್ನು ಜನರನ್ನು ಮನೆಯಿಂದ ಬರದಂತೆ ಪೊಲೀಸರು ಕೂಡ ಜಾಗೃತಿ ಮೂಡಿಸುತ್ತಿದ್ದಾರೆ. ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಕೈ ಮುಗಿದು ವಿನಯದಿಂದ ಕೇಳಿಕೊಳ್ಳುತ್ತಿದ್ದಾರೆ. ಆದರೆ ಜನರಿಗೆ ಮಾತ್ರ ಇದ್ಯಾವುದು ತಲೆಗೆ ಹೋದಂಗಿಲ್ಲ. ಈಗಾಗಿ ಪೊಲೀಸರು ಕೂಡ ಜನರನ್ನ ತಡೆಯುವ ಸಲುವಾಗಿ ವಿನೂತನ ಪ್ರಯೋಗಗಳನ್ನ ಅನುಸರಿಸುತ್ತಿದ್ದಾರೆ.

ಹೌದು, ವಿಭಿನ್ನವಾದ ಹೆಲ್ಮೆಟ್ ಒಂದರ ಮೂಲಕ ಚೆನ್ನೈ ಪೊಲೀಸರು ಮನೆಯಿಂದ ಆಚೆ ಬರದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೊರೋನಾ ವೈರಸ್ ಆಕೃತಿಯಂತಿರುವ ಹೆಲ್ಮೆಟ್ ನ್ನ ಕಲಾವಿದರೊಬ್ಬರ ಮೂಲಕ ತಯಾರಿಸಿದ್ದು, ಪೊಲೀಸರೇ ಅದನ್ನ ತಮ್ಮ ತಲೆಗೆ ಹಾಕಿಕೊಂಡು ಜನರಲ್ಲಿ ಜಾಗೃತಿಯನ್ನ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಇನ್ನು ಗೌತಮ್ ಎಂಬುವವರು ಹಾಳಾದ ಹೆಲ್ಮೆಟ್ ಮತ್ತು ಪೇಪರ್ ಗಳನ್ನ ಉಪಯೋಗಿಸಿಕೊಂಡು ಕೊರೋನಾ ವೈರಸ್ ಆಕೃತಿಯ ಹೆಲ್ಮೆಟ್ ಡಿಸೈನ್ ಮಾಡಿದ್ದಾರೆ. ಇನ್ನು ಈ ವಿಚಿತ್ರ ಆಕಾರದ ಹೆಲ್ಮೆಟ್ ನೋಡಿದ ಮೇಲೆ ಜನರೂ ಕೂಡ ಭಯಪಡುತ್ತಿದ್ದಾರೆ. ಇನ್ನು ಇದನ್ನ ಕಂಡ ಮಕ್ಕಳಂತೂ ಭಯ ಪಟ್ಟುಕೊಂಡು ಮನೆ ಕಡೆ ಓಡಿಹೋಗುತ್ತಿದ್ದಾರೆ ಎಂದು ಹೆಲ್ಮೆಟ್ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಇನ್ಸಪೆಕ್ಟರ್ ಒಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ ನಮ್ಮ ಆರೋಗ್ಯವನ್ನ ಕಾಪಾಡುವ ಸಲುವಾಗಿ, ತಮ್ಮ ಜೀವದ ಬಗ್ಗೆ ಯೋಚನೆ ಮಾಡದೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ವಿಭಿನ್ನ ದಾರಿಗಳನ್ನ ಹುಡುಕುತ್ತಿದ್ದಾರೆ. ಆದರೆ ಜನರಿಗೆ ಈಗಿನ ಗಂಭೀರ ಪರಿಸ್ಥಿತಿ ಮಾತ್ರ ಅರ್ಥವಾಗುತ್ತಿಲ್ಲ. ಇನ್ನು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ.