ಕರ್ನಾಟಕದ ಕೊರೋನಾ ಡೇಂಜರ್ ಜೋನ್ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..ನಿಮ್ಮ ಜಿಲ್ಲೆಯೂ ಇದೆಯಾ ನೋಡಿ..

News

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಬಾರದ ಕಾರಣ ಪ್ರಧಾನಿ ಮೋದಿಯವರು ಏಪ್ರಿಲ್ ೧೪ಕ್ಕೆ ತೆರವು ಮಾಡಬೇಕಿದ್ದ ಲಾಕ್ ಡೌನ್ ನ್ನ ಮೇ ೩ರವರೆಗೆ ವಿಸ್ತರಿಸಿ ಆದೇಶ ಹೊಡೆಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರವು ಲಾಕ್ ಡೌನ್ ಕುರಿತು ಎಲ್ಲಾ ರಾಜ್ಯಗಳಿಗೆ ಮಾರ್ಗ ಸೂಚಿಗಳನ್ನ ಕಳಿಸಿದೆ.

ಅದರಂತೆ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯ ಆಧಾರದ ಮೇಲೆ ರಾಜ್ಯದ ಜಿಲ್ಲೆಗಳನ್ನ ಮೂರು ವಲಯಗಳಾಗಿ ವಿಂಗಡಿಸಿದೆ. ಅದರಂತೆ ರಾಜ್ಯದ 8ಜಿಲ್ಲೆಗಳು ರೆಡ್ ಜೋನ್ ನಲ್ಲಿದ್ದರೆ, 11 ಜಿಲ್ಲೆಗಳನ್ನ ಗ್ರೀನ್ ಜೋನ್ ಆಗಿ ವಿಂಗಡಿಸಲಾಗಿದೆ. ಹಾಗಾದ್ರೆ ಯಾವ್ಯಾವ ಜಿಲ್ಲೆಗಳು ಯಾವ ವಲಯದಲ್ಲಿ ಬರುತ್ತವೆ ನೋಡೋಣ ಬನ್ನಿ..

ಹಾಟ್ ಸ್ಪಾಟ್ ಜಿಲ್ಲೆಗಳು : ಕೊರೋನಾ ಸೋಂಕಿತರು ಹೆಚ್ಚಾಗಿದ್ದು ಈ ಮೂರು ಜಿಲ್ಲೆಗಳನ್ನ ಕೊರೋನಾ ಹಾಟ್ ಸ್ಪಾಟ್ ಗಳಾಗಿ ವಿಂಗಡಿಸಲಾಗಿದೆ. ಇನ್ನು ಇದರಲ್ಲಿ ಬೆಂಗಳೂರು ನಗರ, ಮೈಸೂರು, ಬೆಳಗಾವಿ ಸೇರಿದಂತೆ ಮೂರು ಜಿಲ್ಲೆಗಳಿವೆ. ಇನ್ನು ಈ ಪ್ರದೇಶಗಳಲ್ಲಿ ಕೊರೋನಾ ಹೆಚ್ಚಾಗಿರುವ ಕಾರಣ ಜನರು ಮನೆಯಿಂದ ಹೊರಗಡೆ ಬರುವಂತಿಲ್ಲ.

ಹಾಟ್‍ಸ್ಪಾಟ್ ವಿಥ್ ಕ್ಲಸ್ಟರ್ (ಡೆಂಜರ್‌ ಸ್ಪಾಟ್‌ ವಲಯ) : ಯಾವುದೇ ಸಮಯದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುವ ಪ್ರದೇಶಗಳೆಂದು ಈ 5 ಜಿಲ್ಲೆಗಳನ್ನ ವಿಂಗಡಿಸಲಾಗಿದೆ. ಅವು ಯಾವುವೆಂದರೆ ಕಲ್ಬುರ್ಗಿ, ಧಾರವಾಡ, ಬಾಗಲಕೋಟೆ, ಬೀದರ್, ದಕ್ಷಿಣ ಕನ್ನಡ.

ಆರೆಂಜ್ ಜೋನ್ (ನಾನ್ ಹಾಟ್ ಸ್ಪಾಟ್) ಕಿತ್ತಳೆ ವಲಯಗಳು : ಇನ್ನು ಈ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಕೊಡಗು, ಉಡುಪಿ, ಉತ್ತರ ಕನ್ನಡ, ವಿಜಯಪುರ, ಗದಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳು ಸೇರಿವೆ.

ಗ್ರೀನ್ ಜೋನ್ (ಹಸಿರು ವಲಯ) : ಇನ್ನು ಹಸಿರು ವಲಯ ಎಂದು ವಿಂಗಡಿಸಿರುವ ಈ ಜಿಲ್ಲೆಗಳಲ್ಲಿ ಯಾವುದೇ ಕೊರೋನಾ ಸೋಂಕಿನ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಇದರಲ್ಲಿ ೧೧ ಜಿಲ್ಲೆಗಳು ಸೇರಿವೆ.ಕೋಲಾರ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ರಾಯಚೂರು, ರಾಮನಗರ, ಹಾಸನ, ಹಾವೇರಿ, ಶಿವಮೊಗ್ಗ, ಯಾದಗಿರಿ.

ಸದ್ಯದ ಮಾಹಿತಿ ಅನ್ವಯ ಕೇಂದ್ರ ಸರ್ಕಾರ ಈ ಪಟ್ಟಿ ಬಿಡುಗಡೆ ಮಾಡಿದ್ದು, ಕೊರೋನಾ ಸೋಂಕಿತರ ಆಧಾರದ ಮೇಲೆ ಪಟ್ಟಿ ಬದಲಾವಣೆ ಆಗುವ ಸಾಧ್ಯತೆಗಳಿವೆ. ಜೊತೆಗೆ ಯಾವುದೇ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಆ ಜಿಲ್ಲೆಗಳನ್ನ ಹಾಟ್ ಸ್ಪಾಟ್ ಜೋನ್ ಗೆ ಸೇರಿಸಲಾಗುವುದು ಎಂದು ಹೇಳಲಾಗಿದೆ.