ತನ್ನ ಮದುವೆಯ ದಿನ ವಧುವಿನಿಂದ ತಾಳಿ ಕಟ್ಟಿಸಿಕೊಂಡ ವರ ! ಸೀರೆ ಏಕೆ ಉಟ್ಟಿಲ್ಲ ಎಂದು ಸಿಕ್ಕಾಪಟ್ಟೆ ಟ್ರೋಲ್..

Kannada News

ಸ್ನೇಹಿತರೇ, ಹಿಂದೂ ಧರ್ಮದಲ್ಲಿ ಮದುವೆಗೆ ಅದರದ್ದೇ ಆದ ಸಂಪ್ರದಾಯ ಆಚಾರಗಳಿವೆ. ಮದುವೆಯಾಗುವ ಯಾವುದೇ ಜೋಡಿ ಪರಸ್ಪರ ಹಾರ ಬದಲಿಸಿಕೊಳ್ಳುವುದು ಗೊತ್ತಿರುವ ವಿಚಾರವೇ. ಆದರೆ ಮಂಗಳಸೂತ್ರ (ತಾಳಿ)ಯನ್ನ ಪರಸ್ಪರರಿಗೆ ಕಟ್ಟುವುದು ಸಂಪ್ರದಾಯವಲ್ಲ. ಆದರೆ ಮಂಗಲಸೂತ್ರವನ್ನ ಗಂಡು ಹೆಣ್ಣಿಗೆ ಕಟ್ಟುವುದು ಆಗಿನಿಂದಲೇ ನಡೆದುಕೊಂಡು ಬಂದಿರುವ ಸಂಪ್ರದಾಯ. ಒಂದು ವೇಳೆ ವಧು ವರನಿಗೆ ತಾಳಿ ಕಟ್ಟಿದರೆ! ಅದು ಸಾಧ್ಯವಿಲ್ಲ ಅಲ್ಲವೇ..ಆದರೆ ಇಲ್ಲೊಂದು ವಿಚಿತ್ರ ಮದುವೆ ನಡೆದಿದ್ದು, ಗಂಡು ಹೆಣ್ಣಿಗೆ ತಾಳಿ ಕಟ್ಟಿದರೆ, ಹೆಣ್ಣು ಗಂಡಿಗೆ ತಾಳಿ ಕಟ್ಟಿರುವ ವಿಚಿತ್ರ ಘಟನೆ ನಡೆದಿದೆ.

ಹೌದು. ಹೀಗೆ ವಿಚಿತ್ರ ಹಾಗೂ ವಿಭಿನ್ನ ರೀತಿಯಲ್ಲಿ ಮದುವೆಯಾಗಿರುವ ವರನ ಹೆಸರು ಶಾರ್ದೂಲ್ ಕದಮ್ ಎಂದು. ಗಂಡಿಗೆ ತಾಳಿ ಕಟ್ಟಿದ ವಧುವಿನ ಹೆಸರು ತನುಜಾ ಎಂದು. ಇನ್ನು ಇದರ ಬಗ್ಗೆ ವರ ಹೇಳುವುದು ಏನೆಂದರೆ, ಹೆಣ್ಣು ಹುಡುಗಿಯರು ಮಾತ್ರ ಏಕೆ ಗಂಡಿಗೆ ತಾಳಿ ಕಟ್ಟಬೇಕು ಎಂಬುದು ವರ ಶಾರ್ದೂಲ್ ಅವರ ವಾದ. ಇನ್ನು ಇವರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನೆಟ್ಟಿಗರಂತೂ ತಾಳಿಯನ್ನ ಮಾತ್ರ ಏಕೆ ಕಟ್ಟಿಸಿಕೊಂಡೆ, ಸೀರೆ ಉಟ್ಟುಕೊಳ್ಳಬೇಕಿತ್ತಲ್ಲ ಎಂದು ಟ್ರೋಲ್ ಮಾಡಿದ್ದಾರೆ. ಇನ್ನು ಶಾರ್ದುಲ್ ಮತ್ತು ತನುಜಾ ಅವರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದು, ಆಗಲೇ ಇವರ ಲವ್ ಸ್ಟೋರಿ ಶುರುವಾಗಿತ್ತು ಎಂದು ಹೇಳಲಾಗಿದೆ. ಇನ್ನು ಇದೇ ಸಮಯದಲ್ಲಿ ಶಾರ್ದುಲ್ ನಾನೊಬ್ಬ ಕಟ್ಟಾ ಸ್ತ್ರೀಸಮಾನತಾ ವಾದಿ ಎಂದು ತನುಜಾ ಅವರ ಜೊತೆ ಹೇಳಿಕೊಂಡಿದ್ದಾನೆ.

ಹೀಗೆ ಒಂದು ವರ್ಷಗಳ ಕಾಲ ಇವರಿಬ್ಬರ ಲವ್ ಸ್ಟೋರಿ ಮುಂದುವರಿದಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಇಬ್ಬರು ತೀರ್ಮಾನ ಮಾಡುತ್ತಾರೆ. ಶಾರ್ದೂಲ್ ಮತ್ತು ತನುಜಾ ಅವರ ನಡುವೆ ನಡೆದ ಮದುವೆ ಮಾತುಕತೆ ವೇಳೆ, ಹೆಣ್ಣು ಮಾತ್ರ ಏಕೆ ತಾಳಿಯನ್ನ ಕಟ್ಟಿಸಿಕೊಳ್ಳಬೇಕು, ಆದರೆ ನಮ್ಮ ಮದುವೆಯಲ್ಲಿ ಈ ರೀತಿ ಆಗುವುದು ಬೇಡ. ನನಗೆ ನೀನು ತಾಳಿ ಕಟ್ಟಿಕೊಳ್ಳಬೇಕು, ನಿನಗೆ ನಾನು ತಾಳಿ ಕಟ್ಟಿಕೊಳ್ಳಬೇಕು ಎಂದು ಮಾತುಕತೆ ನಡೆಯುತ್ತದೆ. ಇವರ ಈ ನಿರ್ಧಾರ ಕುಟುಂಬದವರಲ್ಲಿ ಅಚ್ಚರಿಗೆ ಕಾರಣವಾಗುತ್ತದೆ. ಪಕ್ಕಾ ಮಹಿಳಾ ಸಮಾನತಾ ವಾದಿಯಾಗಿರುವ ನಾನು ಮಂಗಲಸೂತ್ರವನ್ನ ಕಟ್ಟಿಸ್ಕೊಳ್ಳುತ್ತೇನೆ ಎಂದು ಹಠ ಹಿಡಿಯುತ್ತಾನೆ. ಆದರೆ ಮನೆಯವರೆಲ್ಲಾ ಏನೇ ಹೇಳಿದ್ರು ಕೇಳೋದಿಲ್ಲ. ಕೇವಲ ತಾಳಿ ಕಟ್ಟಿಸಿಕೊಳ್ಳೋದು ಮಾತ್ರವಲ್ಲ ವಧುವಿನ ಮನೆಗೆ ಹೋಗಿ ಮದುವೆಯ ಬೀಳುವ ಎಲ್ಲಾ ಖರ್ಚುಗಳನ್ನ ಇಬ್ಬರು ಡಿವೈಡ್ ಮಾಡಿಕೊಳ್ಳೋಣ ಎಂದು ಹೇಳುತ್ತಾರೆ.

ಇನ್ನು ಮದುವೆಗೆ ಮುನ್ನಾ ದಿನ ಕೂಡ ವಧು ತನುಜಾ ವಾರ ಶಾರ್ದೂಲ್ ಅವರನ್ನ ಕೇಳುತ್ತಾಳೆ ನೀವು ತಾಳಿ ಕಟ್ಟಿಸಿಕೊಳ್ಳುತ್ತೀರಾ ಎಂದು..ನನ್ನ ನಿರ್ಧಾರ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ ಎಂದು ಶಾರ್ದೂಲ್ ಹೇಳುತ್ತಾರೆ. ಕೊನೆಗೆ ಮದುವೆ ವೇಳೆ ವರ ವಧು ಇಬ್ಬರು ಪರಸ್ಪರ ತಾಳಿ ಕಟ್ಟಿಕೊಳ್ಳುತ್ತಾರೆ. ಇನ್ನು ಇವರ ಮದುವೆಯ ಬಳಿಕ ಸೀರೆ ಉಟ್ಟಿ ಏಕೆ ಕುಳಿತುಕೊಂಡಿಲ್ಲ ಎಂದೆಲ್ಲಾ ಸಾಮಾಜಿಕ ಜಾಲತಾಣಗಲ್ಲಿ ಟ್ರೋಲ್ ಆಗುತ್ತಿದ್ದು, ಇದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಹೆಣ್ಣು ಮಕ್ಕಳ ಬಗ್ಗೆ ಇರುವ ಗೌರವದಿಂದ ನಾನು ಈ ಕೆಲಸ ಮಾಡಿದ್ದೇನೆ ಎಡನು ಶಾರ್ದುಲ್ ಅವರು ಹೇಳಿದ್ದಾರೆ. ಇನ್ನು ಈಗಾಗಲೇ ಇವರ ಮದ್ವೆಯಾಗಿ ನಾಲ್ಕು ತಿಂಗಳಾಗಿದ್ದು ಇದುವರೆಗೂ ಶಾರ್ದುಲ್ ವಧುವಿನಿಂದ ಕಟ್ಟಿಸಿಕೊಂಡ ಮಾಂಗಲ್ಯ ಸೂತ್ರವನ್ನ ತೆಗೆದಿಟ್ಟಿಲ್ಲ..ಸ್ನೇಹಿತರೇ, ಈ ವಿಚಿತ್ರ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾ’ಮೆಂಟ್ ಮಾಡಿ ತಿಳಿಸಿ..