ಹುಡುಗ ಹುಡುಗಿ ತಮ್ಮ ಲಿಂಗ ಬದಲಾಯಿಸಿಕೊಂಡು ಮದ್ವೆಯಾದ್ರು ! ಆದ್ರೆ ಆಮೇಲೆ ಆಗಿದ್ದೆ ಬೇರೆ ?

Kannada Mahiti
Advertisements

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಆಸೆಯೂ ಇರುತ್ತದೆ. ಆದರೆ ಕೆಲವರಿಗಿರುವ ವಿಚಿತ್ರ ಆಸೆಗಳನ್ನ ಕೇಳಿದ್ರೆ ಗಾಬರುಯಾಗುತ್ತೆ. ಅದೂ ಪ್ರಕೃತಿಗೆ ವಿರುದ್ಧವಾದದ್ದು. ಹೌದು, ಗಂಡು ಹೆಣ್ಣಿನ ಜೀವನದಲ್ಲಿ ಮದುವೆ ಅನ್ನೋದು ಬಹಳ ಪ್ರಮುಖವಾದ ಘಟ್ಟ. ಇನ್ನು ನಮಗೆಲ್ಲಾ ಗೊತ್ತಿರುವ ಹಾಗೆ ಗಂಡು ಹೆಣ್ಣನ್ನ, ಹೆಣ್ಣು ಗಂಡನ್ನ ಮದ್ವೆ ಆಗೋದು ಸಾಮಾನ್ಯವಾದ ಸಂಗತಿ. ಆದ್ರೆ ಇಲ್ಲಿ ನಡೆದಿರುವ ಮದ್ವೆ ಬಗ್ಗೆ ನೀವು ಕೇಳಿದ್ರೆ ಅಚ್ಚರಿ ಆಗೋ ಜೊತೆಗೆ ಶಾಕ್ ಆಗ್ದೇ ಇರೋದಿಲ್ಲ. ಇಡೀ ದೇಶದಲ್ಲಿ ಎಲ್ಲಿ ನಡೆಯದಂತಹ ವಿಚಿತ್ರ ಮದ್ವೆಯಾಗಿದೆ. ಸಮಾಜದ ನಿಯಮಗಳನ್ನೇ ದಿಕ್ಕರಿಸಿ ಮದ್ವೆಯಾದ ಪ್ರೀತಿಸಿ ಮದ್ವೆಯಾದ ಜೋಡಿಯ ಲವ್ ಸ್ಟೋರಿ ಇದು..

[widget id=”custom_html-4″]

Advertisements

ಹೌದು, ಪ್ರಕೃತಿ ಸಹಜವಾಗಿ ಬಂದಿರುವ ತಮ್ಮ ಲಿಂಗವನ್ನೇ ಬದಲಾಯಿಸಿಕೊಂಡು ಮದ್ವೆಯಾದ ಜೋಡಿಯ ಅಚ್ಚರಿಯ ಸ್ಟೋರಿ ಇದು. ೧೯೮೮ರಲ್ಲಿ ತಮಿಳುನಾಡಿನಲ್ಲಿ ಪ್ರೀತಿಶ್ ಎನ್ನುವ ಹುಡುಗ ಜನಿಸುತ್ತಾನೆ. ಆದರೆ ವರ್ಷಗಳು ಕಳೆಯುತ್ತಿದ್ದಂತೆ ತನ್ನಲ್ಲಿ ಹೆಣ್ಣಿನ ರೀತಿಯ ಬದಲಾವಣೆಗಳು ಆಗುತ್ತಿರುವುದು ಪ್ರೀತಿಶ್ ಗಮನಕ್ಕೆ ಬರುತ್ತದೆ. ಇದೆ ಕಾರಣದಿಂದಾಗಿ ತನ್ನ ಲಿಂಗವನ್ನೇ ಬದಲಾಯಿಸಿಕೊಂಡ ಪ್ರೀತಿಶ್ ಸಂಪೂರ್ಣ ಬದಲಾಗಿ ಪ್ರೀತಿಶ ಎಂದು ತನ್ನ ಹೆಸರನ್ನ ಬದಲಾವಣೆ ಮಾಡಿಕೊಳ್ಳುತ್ತಾನೆ. ಇನ್ನು ಪ್ರೀತಿಶಾ ತನ್ನ ಶಾಲಾ ದಿನಗಳಲ್ಲೇ ಡ್ರಾಮಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ಆಸಕ್ತಿ ಇರುತ್ತದೆ. ಇಷ್ಟೆಲ್ಲಾ ಪ್ರತಿಭಾವಂತೆಯಾಗಿದ್ದ ಪ್ರೀತಿಶ ದೊಡ್ಡ ಕಲಾವಿದೆಯಾಗುತ್ತಾಳೆ.

[widget id=”custom_html-4″]

ಇನ್ನು ಪ್ರೀತಿಷಾ ಒಮ್ಮೆ ತಮ್ಮ ರಿಲೇಟಿವ್ಸ್ ಮನೆಗೆ ಹೋಗಿದ್ದಾಗ ಅಲ್ಲಿ ಸುಧಾ ಎಂಬ ಯುವತಿಯ ಭೇಟಿ ಆಗುತ್ತದೆ. ಪರಿಚಯದ ಭೇಟಿ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಯಾಗುತ್ತದೆ. ಪ್ರೀತಿಶಾ ಮೇಲಿನ ಪ್ರೀತಿಗೆ ಮಾರುಹೋದ ಯುವತಿ ಸುಧಾ, ಪ್ರೀತಿಷಾಳನ್ನ ಮದ್ವೆಯಾಗುವ ಕಾರಣದಿಂದ ತನ್ನ ಲಿಂಗವನ್ನೇ ಬದಲಾವಣೆ ಮಾಡಿಕೊಂಡು ಸಂಪೂರ್ಣವಾಗಿ ಹುಡುಗನಾಗಿ ಸುಧಾಕರ್ ಎಂಬ ಹೆಸರಿಟ್ಟುಕೊಳ್ಳತ್ತಾಳೆ. ಇನ್ನು ಇವರಿಬ್ಬರು ಮದ್ವೆಯಾಗಲು ಮುಂದಾದಾಗ ಹಲವಾರು ಇವರ ಪ್ರೀತಿ ಮತ್ತು ಮದ್ವೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಇದೆ ವೇಳೆ ಲಿಂಗ ಬದಲಾಯಿಸಿಕೊಂಡ ಪ್ರೀತಿಶಾ ಮತ್ತು ಸುಧಾಕರ್ ಕೆಲ ಸಂಘಟನೆಗಳ ಬೆಂಬಲ ಪಡೆದು ಮದ್ವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಲವ್ ಈಸ್ ಬ್ಲೈಂಡ್ ಅನ್ನೋ ಮಾತಿನಂತೆ ಲಿಂಗ ಬದಲಾಯಿಸಿಕೊಂಡು ಮದ್ವೆಯಾಗುವ ಮೂಲಕ ವಿನೂತನ ಜೋಡಿ ಆಗಿದ್ದಾರೆ ಪ್ರತೀಶಾ ಮತ್ತು ಸುಧಾಕರ್..