ಜಾದೂ ಮಾಡಿದ ಕೊರೋನಾ ಲಸಿಕೆ..ಎರಡು ಕಣ್ಣು ಕಳೆದುಕೊಂಡಿದ್ದ ಮಹಿಳೆಗೆ ಮತ್ತೆ ಮರಳಿದ ದೃಷ್ಟಿ !

Kannada News

ಸ್ನೇಹಿತರೇ, ಕೊರೋನಾ ಎರಡನೆಯ ಅಲೆಯಲ್ಲಿ ಸಾವಿರಾರು ಜನರು ನಿ’ಧನರಾಗಿದ್ದಾರೆ. ಎಷ್ಟೋ ಮಕ್ಕಳು ತಮ್ಮ ತಂದೆ ತಾಯಿಗಳನ್ನ ಕಳೆದುಕೊಂಡು ಅನಾಥರಾಗಿದ್ದಾರೆ. ಇದೆಲ್ಲಾ ಗೊತ್ತಿರುವ ವಿಷಯವೇ. ಇನ್ನು ಕೊರೋನಾ ಸೋಂಕಿನಿಂದ ನಾವು ತಪ್ಪಿಸಿಕೊಳ್ಳಲು ಕೋವಿಡ್ ಲಸಿಕೆ ಪಡೆಯಲೇಬೇಕಾದ ಅವಶ್ಯಕತೆ ಇದೆ. ಇನ್ನು ಶುರುವಿನಲ್ಲಿ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡರೆ ತೊಂದರೆಯಾಗುತ್ತೆ ಅಂತೆಲ್ಲಾ ಉಹಾ ಪೋಹಗಳನ್ನ ಹಬ್ಬಿಸಿದ್ದು, ಜನರು ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಕೊರೋನಾ ಜಾಸ್ತಿಯಾಗುತ್ತಿದ್ದಂತೆ ಲಸಿಕೆ ತೆಗೆದುಕೊಳ್ಳಲು ಆಸ್ಪತ್ರೆಗಳ ಮುಂದೆ ಬಂದು ಸಾಲು ಸಾಲಾಗಿ ಜನ ನಿಂತರು. ಇನ್ನು ಈಗಲೂ ಕೂಡ ಎಷ್ಟೋ ಜನ ಕೊರೋನಾ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ, ಇದರ ನಡುವೆಯೇ ಕೊರೋನಾ ಲಸಿಕೆ ಜಾದು ಮಾಡಿದ್ದು ವಯಸ್ಸಾದ ಅಜ್ಜಿಯೊಬ್ಬರಿಗೆ ಕಣ್ಣಿನ ದೃಷ್ಟಿ ಮರಳಿ ಬಂದಿರುವ ಅಚ್ಚರಿ ಘಟನೆ ನಡೆದಿದೆ.

ಹೌದು, ಇಂತಹ ಅಚ್ಚರಿ ಘಟನೆ ನಡೆದಿರುವುದು ಮಹಾರಾಷ್ಟ್ರದ ಮುಂಬೈನಲ್ಲಿ. ೭೦ ವರ್ಷ ವಯಸ್ಸಿನ ವಯಸ್ಸಾದ ಮಥುರಾಭಾಯಿ ಬಿಡ್ವೆ ಎಂಬುವವರು ಇಲ್ಲಿನ ವಾಷಿಂ ಜಿಲ್ಲೆಯ ನಿವಾಸಿಯಾಗಿದ್ದು ಕಳೆದ ಒಂಬತ್ತು ವರ್ಷಗಳಿಂದ ಅವರ ಎರಡು ಕಣ್ಣುಗಳು ಕಾಣಿಸುತ್ತಿರಲಿಲ್ಲ. ಇನ್ನು ಈಗ ಎಲ್ಲರು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವ ಕಾರಣ ಕಳೆದ ೨೬ತಾರೀಖಿನಂದು ಕೋವಿಶೀಲ್ಡ್ ವ್ಯಾಕ್ಸಿನ್ ನ ಮೊದಲ ಡೋಸ್ ಪಡೆದುಕೊಂಡಿದ್ದರು. ಇನ್ನು ಲಸಿಕೆ ಜಾದು ಮಾಡಿದೆ ಎಂಬಂತೆ ಮಾರನೇ ದಿನವೇ ಮಥುರಾಭಾಯಿ ಬಿಡ್ವೆ ಅವರ ಒಂದು ಕಣ್ಣು ಕಾಣಿಸತೊಡಗಿದ್ದು, ಶೇ 30 ರಿಂದ 40ರಷ್ಟು ದೃಷ್ಟಿ ಕಾಣಿಸುತ್ತಿದೆ ಎಂದು ಆ ವೃದ್ಧೆ ಹೇಳಿದ್ದಾರೆ.

ಇನ್ನು ಲಸಿಕೆಯ ಈ ಜಾದು ವೈದ್ಯಕೀಯ ಲೋಕಕ್ಕೆ ಅಚ್ಚರಿಯಾಗುವಂತೆ ಮಾಡಿದೆ. ಇನ್ನು ಕೆಲವು ವರದಿಗಳ ಪ್ರಕಾರ ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಜನರ ಕೆಲ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿದೆ ಎಂದು ಹೇಳಲಾಗಿದೆ. ಅದೇನೇ ಇರಲಿ ಕೊರೊನದಿಂದ ತಮ್ಮನ್ನ ಹಾಗೂ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಕೊರೋನಾ ಲಸಿಕೆ ಪಡೆಯುವುದು ಅವಶ್ಯಕವಾಗಿದೆ. ಕೊರೋನಾ ಇಲ್ಲ ಅಂತ ಮಾಸ್ಕ್ ಹಾಕುವುದನ್ನ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನ ಮರೆಯಬೇಡಿ..ನಿಮ್ಮ ಸುರಕ್ಷತೆ ನಿಮ್ಮ ಕೈನಲ್ಲೇ ಇದೆ..