ಪದೇ ಪದೇ ಮನೆ ಮುಂದೆ ಕಾಗೆ ಕೂಗುತ್ತಿದ್ದರೆ ಏನಾಗುತ್ತೆ ಗೊತ್ತಾ ?

Astrology

ಹಿಂದೂ ಸನಾತನ ಧರ್ಮದಲ್ಲಿ ಕಾಗೆಗೆ ವಿಶೇಷವಿವಾದ ಸ್ಥಾನ ನೀಡಲಾಗಿದೆ. ಹೌದು, ಪೌರಾಣಿಕವಾಗಿ ಹೇಳಬೇಕಾದರೆ ಹಿಂದೂ ದೇವತೆಯ ವಾಹನವಾಗಿದೆ ಕಾಗೆ. ವಿಶಿಷ್ಟ ಧ್ವನಿ ಹೊಂದಿರುವ ಕಾಗೆಗೂ ಮನುಷ್ಯನಿಗೂ ವಿಶೇಷ ಸಂಬಂಧ ಇದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇನ್ನು ಕಾಗೆ ಸಾಮಾನ್ಯವಾಗಿ ಮರ, ಮನೆ ಹಾಗೂ ಕಟ್ಟಡಗಳ ಮೇಲೆ ಕುಳಿತಾಗ ಕೂಗುವುದನ್ನ ನೋಡಿದ್ದೇವೆ. ಇನ್ನು ಕಾಗೆಯು ಮನೆ ಮುಂದೆ ಬಂದು ಪದೇ ಪದೇ ಕೂಗುತ್ತಿದ್ದಾರೆ ಅದು ಮುಂಬರುವ ಸಿಹಿ ಕಹಿ ಘಟನೆಗಳ ಬಗ್ಗೆ ಸೂಚನೆ ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಹೌದು, ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಕಾಗೆಯೊಂದು ಮನೆ ಮುಂದೆ ಬಂದು ಪದೇ ಪದೇ ಕೂಗುತ್ತಿದ್ದರೆ, ಅಂದು ಯಾರಾದರೂ ಅತಿಥಿಗಳು ಮನೆಗೆ ಬರುತ್ತಾರೆ ಎಂದು ಹೇಳಲಾಗಿದೆ. ಇನ್ನು ಕಾಗೆ ಕೂಗಿದ್ರೆ ಶಕುನ ಮತ್ತು ಅಪಶಕುನ ಎರಡೂ ಆಗುತ್ತೆ ಎಂಬ ನಂಬಿಕೆಗಳು ನಮ್ಮಲ್ಲಿವೆ. ಕಾಗೆ ಕೂಗುತ್ತಿರುವುದನ್ನ ಮನೆಯಿಂದಲೇ ನೋಡಿದ್ರೆ ಹಣವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಇನ್ನು ಮನೆಯಿಂದ ಹೊರಹೋಗುವಾಗ ಕಾಗೆ ಕೂಗಿದ್ರೆ, ಅದರಿಂದ ಹೋಗುವ ಕೆಲಸದಲ್ಲಿ ಯಶಸ್ಸು ಖಂಡಿತಾ ಸಿಗುತ್ತೆ ಎನ್ನುವ ನಂಬಿಕೆ ಇದೆ.

ಇನ್ನು ನೀವು ಮನೆಯಿಂದ ಹೊರಗಡೆ ಹೋಗಬೇಕಾದ ಸಂದರ್ಭದಲ್ಲಿ ಕಾಗೆ ಕೂಗುತ್ತಾ ನಿಮ್ಮ ಎದುರಿಗೆ ಬಂದಲ್ಲಿ ಅದನ್ನ ಅಪಶಕುನ ಎಂದು ಹೇಳಲಾಗುತ್ತದೆ. ಕಾಗೆ ತನ್ನ ಬಾಯಿಯಲ್ಲಿ ಏನಾದರು ಕಚ್ಚಿಕೊಂಡು ಬಂದು ನಿಮ್ಮ ಮೇಲೆ ಹಾಕಿದಲ್ಲಿ ಅದರಿಂದ ನಿಮಗೆ ಅಶುಭದ ಜೊತೆಗೆ ಅನಾರೋಗ್ಯ ಆಗುವ ಸಂಭವ ಇದೆ ಎಂದು ಹೇಳಲಾಗಿದೆ. ಇನ್ನು ಕಾಗೆ ಯಾರಾದ್ರೂ ವ್ಯಕ್ತಿಯ ಸುತ್ತ ಜೋರಾಗಿ ರೆಕ್ಕೆ ಬಡಿಯುತ್ತ ಸುತ್ತಾಡಿದ್ರೆ ಅದರಿಂದ ಆ ವ್ಯಕ್ತಿಗೆ ಅಪಾಯ ಆಗುವ ಸೂಚನೆ ಎನ್ನೋ ನಂಬಿಕೆ ಇದೆ. ಕಾಗೆ ಹೆಂಗಳೆಯರ ತಲೆಯನ್ನ ಟಚ್ ಮಾಡಿದಲ್ಲಿ ಅದರಿಂದ ಗಂಡನ ವಿಯೋಗವಾಗುವ ಸಂಭವ ಇದೆ ಎಂದು ಹೇಳಲಾಗಿದೆ. ತಾನು ಕುಳಿತಿರುವ ಜಾಗದಿಂದಲೇ ಕಾಗೆ ಒಂದೇ ಸಮನೆ ಕಿರುಚುತ್ತಿದ್ದರೆ, ಅದರ ಹತ್ತಿರದ ಮನೆಯ ಹಿರಿಯ ವ್ಯಕ್ತಿಗೆ ತೊಂದರೆ ಸಂಭವಿಸಬಹುದು ಅಥ್ವಾ ಅಕ್ಕ ಪಕ್ಕದ ಮನೆಯವರಿಗೂ ತೊಂದರೆ ಆಗಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.