ಯೋಧ ಸಚಿನ್ ಸಾವಂತ್ ಅವರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

News
Advertisements

ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದ CRPF ಕಮಾಂಡೋ ಯೋಧನ ಬಂಧನದ ಪ್ರಕರಣದ ಕುರಿತಂತೆ ಮಹತ್ವದ ಬೆಳವಣಿಗೆಯಾಗಿದೆ. ದೇಶ ಕಾಯುವ ಯೋಧನ ಕೈಗಳಿಗೆ ಬೇಡಿ ತೊಡಿಸಿದ್ದು ಚರ್ಚೆಗ ಕಾರಣವಾಗಿದ್ದಲ್ಲದೆ ಬೇಲ್ ಕೂಡ ಸಿಕ್ಕಿರಲಿಲ್ಲ.

Advertisements

ಹೌದು, ಏಪ್ರಿಲ್ ೨೩ ರಂದು ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಸಿ.ಆರ್.ಪಿ.ಎಫ್ ನ ಕೋಬ್ರಾ ಕಮಾಂಡ್ ನ ಯೋಧ ಸಚಿನ ಸಾವಂತ್ ಅವರಿಗೆ ಮಾಸ್ಕ್ ಧರಿಸಲು ಹೇಳಿದ್ದು, ಇದರ ಹಿನ್ನಲೆಯಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಜಗಳ ನಡೆದಿದ್ದು, ಯೋಧನ ಮೇಲೆ ಪ್ರಕರಣ ದಾಖಲಿಸಿ ಬೇಡಿ ತೊಡಿಸಿ ಕೂರಿಸಲಾಗಿತ್ತು. ಕಾನೂನು ಎಲ್ಲರಿಗು ಒಂದೇ. ಆದರೆ ದೇಶ ಕಾಯುವ ಒಬ್ಬ ಯೋಧನಿಗೆ ಬೇಡಿ ತೊಡಿಸಿ ಕೂಡಿಸಿದ್ದು ಅಸಮಾಧಾನಕ್ಕೆ ಕಾರಣವಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಆಕೃಷ ವ್ಯಕ್ತವಾಗಿತ್ತು.

ಇನ್ನು ಪೊಲೀಸರು ಯೋಧನ ಜೊತೆ ನಡೆದುಕೊಂಡ ರೀತಿಗೆ CRPF ಕೋಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಆಗಿರುವ ಶ್ಯಾಮ್ ಸುಂದರ್ ಅವರು ನಮ್ಮ ರಾಜ್ಯದ DGPಗೆ ಪತ್ರದ ಮೂಲಕ ಅಸಮಾಧಾನಹೊರಹಾಕಿದ್ದರು. ಪ್ರಕರಣ ದಾಖಲು ಮಾಡುವ ಮುನ್ನ ನಮ್ಮ ಗಮನಕ್ಕೆ ತರಬೇಕಿತ್ತು ಎಂದು ಪತ್ರ ಬರೆದಿದ್ದ ಅವರು ಯೋಧ ಎಂದು ಗೊತ್ತಾದ ಮೇಲೂ ಕೈಗೆ ಬೇಡಿ ಹಾಕಿ ಕುಡಿಸಿದ್ದು ಸರಿಯಲ್ಲ ಎಂದು ಪತ್ರದಲ್ಲಿ ಹೇಳಿದ್ದರು.

ಈಗ ಯೋಧ ಸಚಿನ್ ಸಾವಂತ್ ಅವರಿಗೆ ನ್ಯಾಯಾಲದಿಂದ ಜಾಮೀನು (ಬೇಲ್) ದೊರೆತಿದ್ದು, CRPF ಅಧಿಕಾರಿಗಳು ಆದೇಶದ ಜೊತೆಗೆ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದು, ಜೈಲು ಅಧಿಕಾರಿಗಳು ಪರಿಶೀಲನೆ ಮಾಡಿದ ಮೇಲೆ ಯೋಧ ಸಚಿನ್ ಸಾವಂತ್ ಅವರನ್ನ ಬಿಡುಗಡೆ ಮಾಡಿದ್ದಾರೆ. ಒಟ್ಟಿನಲ್ಲಿ ಕಾನೂನು ಏನೇ ಇದ್ದರೂ ದೇಶ ಕಾಯುವ ಯೋಧನ ಜೊತೆಗೆ ಈ ರೀತಿ ನಡೆದುಕೊಂಡಿರುವುದು ಬೇಸರದ ಸಂಗತಿ.