ಕ್ರಿಕೆಟ್ ಆಡೋ ವೇಳೆ ಜ’ಗಳ ಮಾಡಿಕೊಂಡ್ರಾ ನಟ ದರ್ಶನ್ ಅಭಿಷೇಕ್ ! ಆಗಿದ್ದೇನು ನೋಡಿ..

Cinema

ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗ ಅಭಿಷೇಕ್ ಅಂಬರೀಷ್ ಅವರಿಗೆ ಡಿಬಾಸ್ ದರ್ಶನ್ ಅವರು ಅಣ್ಣನ ಸ್ಥಾನ ನೀಡಿದ್ದಾರೆ. ಇವರಿಬ್ಬರ ನಡುವಿನ ಸಹೋದರ ಭಾಂದವ್ಯ ಸ್ವಂತ ಅಣ್ಣ ತಮ್ಮಂದಿರಿಗಿಂತಲು ಹೆಚ್ಚಿಗೇನೇ ಇದೆ ಎಂದರೆ ತಪ್ಪಾಗೊದಿಲ್ಲ. ಇನ್ನು ಅಭಿಷೇಕ್ ಕೂಡ ತಮ್ಮ ಸಿನಿಮಾ ಬಿಡುವಿನ ವೇಳೆ ದರ್ಶನ್ ಅವರ ಜೊತೆಗೇನೆ ಹೆಚ್ಚಾಗಿ ಕಾಲಕಳೆಯುವುದನ್ನ ನಾವೆಲ್ಲಾ ನೋಡಿದ್ದೇವೆ. ಇನ್ನು ರಾಬರ್ಟ್ ಸಿನಿಮಾದ ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ದರ್ಶನ್ ಅವರು ತಮ್ಮ ಎಲ್ಲಾ ಕೆಲಸಗಳ ನಡುವೆ ಬಿಡುವು ಮಾಡಿಕೊಂಡಿದ್ದು ಅಭಿಷೇಕ್ ಜೊತೆ ಸೇರಿ ಕ್ರಿಕೆಟ್ ಆಡಿದ್ದಾರೆ.

ಇನ್ನು ಇಬ್ಬರು ಕ್ರಿಕೆಟ್ ಆಡೋ ಸಂದರ್ಭದಲ್ಲಿ ದರ್ಶನ್ ಮತ್ತು ಅಭಿಷೇಕ್ ಒಬ್ಬರ ಮೇಲೆ ಒಬ್ಬರು ಕಾಲೆಳೆದು ಕೊಂಡಿದ್ದು, ಜ’ಗಳವಾಡಿದ್ದಾರೆ. ಆದರೆ ನೀವೆಂದುಕೊಂಡಂತೆ ಏನೂ ಇಲ್ಲ. ಹೌದು, ನಟ ಅಭಿಷೇಕ್ ತನ್ನ ಸ್ನೇಹಿತನೊಬ್ಬನ ಮೇಲೆ ಕೈ ಹಾಕಿಕೊಂಡು ಮೋಸ ಮಾಡೋರು ಮೋಸ ಮಾಡ್ತಾನೆ ಇರ್ತಾರೆ..ಇಟ್ಸ್ ಓಕೆ..ಎಂದುಕೊಂಡು ದರ್ಶನ್ ಅವರ ಮುಂದೆ ನಡೆದುಕೊಂಡು ಹೋಗುತ್ತಾರೆ. ಆಗ ಅಭಿಷೇಕ್ ಹಿಂದೆಯೇ ಬಂದ ನಟ ದರ್ಶನ್ ಅವರು ಅಭಿಷೇಕ್ ಅವರಿಗೆ ಒದೆಯೋಕೆ ಹೋಗ್ತಾರೆ. ಆಗ ನಗುತ್ತಲೇ ನಟ ಅಭಿಷೇಕ್ ದರ್ಶನ್ ಅವರ ಒದೆಯಿಂದ ಎಸ್ಕೇಪ್ ಆಗುತ್ತಾರೆ.

ಆದರೆ ಇದೆಲ್ಲಾ ನಡೆದದ್ದು ತಮಾಷೆಗಾಗಿ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಬೇರೆ ಬೇರೆ ರೀತಿಯಲ್ಲಿ ಅಭಿಮಾನಿಗಳು ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಅಣ್ಣ ತಮ್ಮಂದಿರ ನಡುವೆ ಇದೆಲ್ಲಾ ಕಾಮನ್ ಆಗಿ ಆಗುತ್ತಲೇ ಇರುತ್ತದೆ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದರೆ. ಮತ್ತೆ ಕೆಲವರು ದರ್ಶನ್ ಅವರು ಅಲ್ಲಿನ ಹುಲ್ಲಿನ ಮೇಲೆ ಬಿದ್ದು ನಗಾಡುತ್ತಿರುವುದನ್ನ ನೋಡಿ ಈ ರೀತಿ ದರ್ಶನ್ ಅವರನ್ನ ನೋಡಿದ್ರೆ ಪುಟ್ಟ ಪಾಪು ತರ ಕಾಣುತ್ತಿದ್ದಾರೆ ಎಂದು ತಮ್ಮ ನೆಚ್ಚಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.