ಅಪಘಾತಕ್ಕಿಡಾಗಿ ICUನಲ್ಲಿದ್ದ ಮಗ..ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯ ನಿಷ್ಠೆ ಮೆರೆದ ಆಶಾ ಕಾರ್ಯಕರ್ತೆ..

News

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆಗಿದೆ. ದಿನಸಿ ವಸ್ತುಗಳು ಹಾಗೂ ತುರ್ತು ಪರಿಸ್ಥಿತಿ ಬಿಟ್ಟರೆ, ಬೇಕಾಬಿಟ್ಟಿ ಜನರು ಮನೆಯಿಂದ ಹೊರಬರುವಂತಿಲ್ಲ. ಆದರೆ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಮಾತ್ರ ನಮ್ಮ ಜೀವನ ಕಾಪಾಡುವುದುಕೋಸ್ಕರ ಹಗಲಿರುಳು ತಮ್ಮ ಕುಟುಂಬದವರನ್ನು ಬಿಟ್ಟು ದುಡಿಯುತ್ತಿದ್ದಾರೆ.

ಈಗ ಇದರಸಾಲಿಗೆ ಆಶಾ ಕಾರ್ಯಕರ್ತಯಾಗಿರುವ ದಾನಮ್ಮ ಎಂಬುವವರು ಸೇರಿದ್ದು ಸಂಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ತಮ್ಮ ಪ್ರೀತಿಯ ಮಗನಿಗೆ ಅಪಘಾತವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಮಯದಲ್ಲೂ ತಮ್ಮ ಕೆಲಸದ ಜೊತೆಗೆ ಮಗನನ್ನೂ ಆರೈಕೆ ಮಾಡುತ್ತಿದ್ದು ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

ಯಾದಗಿರಿಯ ಶಹಾಪುರ ತಾಲ್ಲೂಕಿಗೆ ಸೇರಿದ ಕಾಟಮನಹಳ್ಳಿ ಗ್ರಾಮದವರಾದ ಇವರು ಆಶಾಕಾರ್ಯಕರ್ತೆಯಾಗಿದ್ದು ಮಗನಿಗೆ ಅಪಘಾತವಾಗಿದ್ದು, ಕುಟುಂಬದವರು ದುಃಖದಲ್ಲಿದ್ದರೂ, ಲಾಕ್ ಡೌನ್ ಆಗಿರುವ ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಕರ್ತವ್ಯವನ್ನ ಮಾತ್ರ ಮರೆಯದೆ ಕೆಲ್ಸದಲ್ಲಿ ನಿರತರಾಗಿದ್ದಾರೆ. ಆಶಾ ಕಾರ್ಯಕರ್ತೆಯಾಗಿರುವ ದಾನಮ್ಮನವರು ವಿದೇಶದಿಂದ ಮರಳಿದವರ ಹಾಗೂ ಕೊರೋನಾ ಶಂಕಿತ ಸ್ಥಳಗಳಲ್ಲಿ ತಪಾಸಣೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸುವುದರ ಜೊತೆಗೆ ಕೊರೋನಾ ಬಗ್ಗೆ ಜಾಗೃತಿ ಕೂಡ ಮೂಡಿಸುವ ಕೆಲಸಮಾಡುತ್ತಿದ್ದಾರೆ.

ದಾನಮ್ಮನವರ ಮಗ ರಾಹುಲ್ ಎಂಬುವವರು ವಿಜಾಪುರದಿಂದ ಯಾದಗಿರಿಗೆ ಬೈಕ್ ನಲ್ಲಿ ಬರುತ್ತಿರುವ ವೇಳೆ ಅಪಘಾತವಾಗಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದ ರಾಹುಲ್ ಈಗ ಡಿಸ್ಚಾರ್ಜ್ ಆಗಿ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಮಗನ ಆರೈಕೆಯ ಜೊತೆಗೆ ಜನರ ಸೇವೆ ಮಾಡಿ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ದಾನಮ್ಮರವರಿಗೆ ಹ್ಯಾಟ್ಸಾಪ್ ಹೇಳಲೇಬೇಕು.