ತನ್ನ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡ್ಯಾನಿಶ್ ಸೇಠ್ ! ಈ ಫೋಟೋಸ್ ನೋಡಿ..

Cinema

ಸ್ನೇಹಿತರೇ, ಕೊರೋನಾದಿಂದಾಗಿ ಲಾಕ್ ಡೌನ್ ಇದ್ದರೂ ಕಿರುತೆರೆ, ಬೆಳ್ಳಿತೆರೆಯ ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ಸಾಲಿಗೆ ನಟ ಹಾಗೂ ಕಾಮಿಡಿಯನ್ ಕೂಡ ಆಗಿರುವ ಡ್ಯಾನಿಶ್ ಸೇಠ್ ಸರಳವಾಗಿ ಮದುವೆ ಮಾಡಿಕೊಳ್ಳುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹೊಸ ಜೀವನ ಶುರು ಮಾಡಿದ್ದಾರೆ. ಐಪಿಎಲ್ ಪಂದ್ಯಗಳ ವೇಳೆ ನಮ್ಮ RCB ತಂಡದ ಜೊತೆಗಿದ್ದು ಕ್ರಿಕೆಟಿಗರನ್ನ ಕಾಲೆಳೆಯುತ್ತಾ ಕನ್ನಡಿಗರನ್ನ ಮನರಂಜಿಸುತ್ತಿದ್ದ ಡ್ಯಾನಿಶ್ ಸೇಠ್ ಅವರು ತಾವು ಬಹುಕಾಲದಿಂದ ಪ್ರೀತಿ ಮಾಡುತ್ತಿದ್ದ ಗೆಳತಿಯ ಜೊತೆ ಸಪ್ತಪದಿ ತುಳಿದಿದ್ದಾರೆ.

ಹೌದು, ಡ್ಯಾನಿಶ್ ಸೇಠ್ ಅವರು ತಮ್ಮ ಬಹುಕಾಲದ ಗೆಳೆತಿಯಾದ ಅನ್ಯಾ ರಂಗಸ್ವಾಮಿ ಅವರ ಜೊತೆ ತುಂಬಾ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಡ್ಯಾನಿಶ್ ಸೇಠ್ ಅವರು ತಮ್ಮ ಮದುವೆಯ ಫೋಟೋಗಳನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅವರು ತುಂಬಾ ಸರಳವಾಗಿ ರಿಜಿಸ್ಟ್ರೇಷನ್ ಮದ್ವೆಯಾಗಿರುವುದನ್ನ ನೋಡಬಹುದಾಗಿದೆ. ಇನ್ನು ಡ್ಯಾನಿಶ್ ಅನ್ಯಾ ಅವರ ಮದ್ವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೆಲೆಬ್ರೆಟಿಗಳು, ಅವರ ಆತ್ಮೀಯರು ಹಾಗೂ ಅವರ ಅಭಮಾನಿಗಳು ನವದಂಪತಿಗೆ ಶುಭಾಶಯಗಳನ್ನ ಕೋರಿದ್ದಾರೆ.

ಇನ್ನು ತಮ್ಮ ಮದ್ವೆಯ ಫೋಟೋದ ಜೊತೆಗೆ ನೆನ್ನೆಯಷ್ಟೇ, ನಾನು ಮತ್ತು ಅನ್ಯಾ ರಂಗಸ್ವಾಮಿ ಹಾಗೂ ನಮ್ಮ ಕುಟುಂಬದವರು ಆಪ್ತರು ಸೇರಿದಂತೆ ೧೫ ಜನರ ನಡುವೆ ನಾವು ಬದಲಾಯಿಸಿಕೊಂಡಿದ್ದೇವೆ. ಇನ್ನು ಮೊನ್ನೆ ಒಂಬತ್ತೋನೆ ತಾರೀಖಿನಂದೇ ಮದುವೆಯ ನೋಂದಣಿ ಮಾಡಿಸಿಕೊಂಡಿದ್ದು ನೂತನ ಜೀವನವನ್ನ ಪ್ರಾರಂಭ ಮಾಡಿದ್ದೇವೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಫೋಟೋ ಮೇಲೆ ಕ್ಯಾಪ್ಷನ್ ಬರೆದು ಪೋಸ್ಟ್ ಮಾಡಿದ್ದಾರೆ. ಇನ್ನು ನಟ ಡ್ಯಾನಿಶ್ ಸೇಠ್ ಅವರು ಹಂಬಲ್ ಪೊಲಿಟಿಷಿಯನ್ ನಾಗರಾಜ್, ಫ್ರೆಂಚ್ ಬಿರಿಯಾನಿ ಸೇರಿದಂತೆ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದು ತಮ್ಮ ವಿಭಿನ್ನ ಅಭಿನಯ ಮತ್ತು ತಮ್ಮ ಕಾಮಿಡಿ ಮೂಲಕ ಕನ್ನಡಿಗರನ್ನ ಮನರಂಜಿಸಿದ್ದಾರೆ.