ನಿಮ್ಮ ಮುಖದ ಅಂದ ಕೆಡಿಸುವ ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಮನೆ ಮದ್ದು..ಒಂದೇ ವಾರದಲ್ಲಿ ಮಾಯ

Health

ಇಂದಿನ ಫಾಸ್ಟ್ ಜೀವನಶೈಲಿಯಲ್ಲಿ ಹೆಚ್ಚಾಗಿ ಮೊಬೈಲ್, ಟಿವಿ ವೀಕ್ಷಣೆ ಮಾಡುವುದು, ಕಂಪ್ಯೂಟರ್ ನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವುದು, ಜೊತೆಗೆ ಸರಿಯಾಗಿ ನಿದ್ರೆ ಇಲ್ಲದಿರುವುದು ಇದೆಲ್ಲದ ಕಾರಣದಿಂದ ಅನೇಕರಿಗೆ ಕಣ್ಣಿನ ಕೆಳಭಾಗದಲ್ಲಿ ಡಾರ್ಕ್ ಸರ್ಕಲ್ ಗಳು ಕಾಣಿಸಿಕೊಳ್ಳುತ್ತವೆ. ಇದು ನಿಮ್ಮ ಮುಖದ ಸೌಂದರ್ಯವನ್ನ ಹಾಳು ಮಾಡುವುದರಲ್ಲಿ ಸಂಶಯವೇ ಇಲ್ಲ.

ಇನ್ನು ಮಾರುಕಟ್ಟೆಯಲ್ಲಿ ಬಂದಿರುವ ಎಷ್ಟೇ ಕ್ರೀಮ್ ಗಳನ್ನ ಉಪಯೋಗ ಮಾಡಿದ್ರೂ ಕಣ್ಣಿನ ಕೆಳಭಾಗದ ಕಪ್ಪು ವರ್ತುಲಗಳು ಹೋಗುವುದಿಲ್ಲ. ಆದರೆ ಇದಕ್ಕೆ ಖಂಡಿತಾ ಮನೆ ಮದ್ದು ಇದೆ. ನಿಮ್ಮ ಮನೆಯಲ್ಲೇ ಸಿಗುವ ಕೆಲವೊಂದು ಪದಾರ್ಥಗಳಿಂದ ಮನೆ ಮದ್ದು ಮಾಡಿ ಡಾರ್ಕ್ ಸರ್ಕಲ್ ಗಳನ್ನ ಕಡಿಮೆ ಮಾಡಬಹುದಾಗಿದೆ.

ಮನೆಮದ್ದಿಗೆ ಬೇಕಾದ ಪದಾರ್ಥಗಳು : ಮೊದಲಿಗೆ ಎರಡು ಟೇಬಲ್ ಸ್ಪೂನ್ ನಷ್ಟು ಮೊಸರನ್ನ ತೆಗೆದಿಟ್ಟುಕೊಳ್ಳಿ, ಇದಕ್ಕೆ ಅರ್ಧ ಟೇಬಲ್ ಸ್ಪೂನ್ ಕಡಲೆ ಹಿಟ್ಟು ಜೊತೆಗೆ ಅರ್ಧ ಟೇಬಲ್ ಸ್ಪೂನ್ ನಷ್ಟು ಅರಿಶಿನ ಹಾಕಿ. ಬಳಿಕ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕಣ್ಣಿನ ಕೆಲ ಭಾಗದ ಕೆಳಗಡೆ ಹತ್ತಿಯಿಂದ ಕ್ಲೀನ್ ಮಾಡಿಕೊಳ್ಳಿ. ಆ ಜಗದಲ್ಲಿ ನೀವು ಮಿಕ್ಸ್ ಮಾಡಿರುವುದನ್ನ ಹಚ್ಚಿಕೊಳ್ಳಿ.

ಹತ್ತು ನಿಮಿಷಗಳ ಕಾಲ ಬಿಡಿ. ತದನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಚೆನ್ನಾಗಿ ಒರೆಸಿದ ಮೇಲೆ ಆಲೀವ್ ಆಯಿಲ್ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿ. ಇದನ್ನು ತಪ್ಪದೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡಿ. ಇದರಿಂದ ನಿಮ್ಮ ಕಣ್ಣಿನ ಕೆಳಭಾಗದಲ್ಲಿರುವ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತವೆ. ಇದರ ಜೊತೆಗೆ ಪ್ರತೀದಿನ 3ಲೀಟರ್ ನೀರನ್ನ ಕುಡಿಯಿರಿ, ಸಿ ವಿಟಮಿನ್ ಅಂಶವನ್ನ ಹೊಂದಿರುವ ಹಣ್ಣು ತರಕಾರಿಗಳನ್ನ ಚೆನ್ನಾಗಿ ತಿನ್ನಿ. ಮುಖ್ಯವಾಗಿ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ. ಇದರಿಂದ ಕಪ್ಪು ವರ್ತುಲಗಳ ಸಮಸ್ಯೆ ಕಡಿಮೆಯಾಗಿ ನಿಮ್ಮ ಮುಖ ಚೆಂದವಾಗಿ ಕಾಣಿಸುತ್ತದೆ.