ಆ ಜವಾಬ್ದಾರಿಯನ್ನ ನನಗೆ ಬಿಡಿ ಎಂದು ಬುಲೆಟ್ ಪ್ರಕಾಶ್ ಕುಟುಂಬಕ್ಕೆ ಅಭಯ ನೀಡಿದ್ದ ದಾಸ..

Cinema

ಕಿಡ್ನಿ ಹಾಗೂ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಹಾಸ್ಯ ದಿಗ್ಗಜ ಬುಲೆಟ್ ಪ್ರಕಾಶ್ ತಮ್ಮ ಹಾಸ್ಯದ ನೆನಪುಗಳನ್ನ ಬಿಟ್ಟು ಅಗಲಿದ್ದಾರೆ. ಇನ್ನು ಖ್ಯಾತ ಹಾಸ್ಯ ನಟನ ನಿಧಾನಕ್ಕೆ ಸ್ಯಾಂಡಲ್ವುಡ್ ಕಂಬನಿ ಮಿಡಿದಿದೆ.

ಇನ್ನು ಒಂದು ಕಾಲದ ಗೆಳೆಯನೂ ಆಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೆಳೆಯನ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. ಇಷ್ಟೇ ಅಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅವರ ಕುಟುಂಬದ ಬಹು ದೊಡ್ಡ ಜವಾಬ್ದಾರಿ ಹೊತ್ತುಕೊಳ್ಳುವ ಮೂಲಕ ಬುಲೆಟ್ ಪ್ರಕಾಶ್ ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದಾರೆ.

ಇನ್ನು ದರ್ಶನ್ ಮತ್ತು ಬುಲೆಟ್ ಪ್ರಕಾಶ್ ರವರು ಹಲವಾರು ಚಿತ್ರಗಳಲ್ಲಿ ಜೊತೆಯಾಗಿಯೇ ನಟಿಸಿದವರು. ಇನ್ನು ೪೪ ವರ್ಷ ವಯಸ್ಸಾಗಿದ್ದ ಬುಲೆಟ್ ಪ್ರಕಾಶ್ ರವರು ಪತ್ನಿ, ಒಬ್ಬ ಮಗ, ಮಗಳನ್ನ ಬಿಟ್ಟು ಅಗಲಿದ್ದಾರೆ. ಇನ್ನು ಇದೇ ಸಮಯದಲ್ಲಿ ಬುಲೆಟ್ ಪ್ರಕಾಶ್ ರವರ ಕುಟುಂಬದವರಿಗೆ ಕಾಲ್ ಮಾಡಿ ಸಾಂತ್ವಾನ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಮಗಳ ಮದುವೆ ಮಾಡುವ ಜವಾಬ್ದಾರಿ ನನಗೆ ಬಿಡಿ ಎಂದು ಹೇಳಿದ್ದು ನಿಮ್ಮ ಕಷ್ಟಕ್ಕೆ ನಾನಿದ್ದೇನೆ ಎಂಬ ಭರವಸೆ ಕೂಡ ನೀಡಿದ್ದಾರೆ.

ಇನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಬರೆದುಕೊಂಡಿದ್ದು, ಬುಲೆಟ್ ಪ್ರಕಾಶ್ ಜೊತೆಗಿರುವ ಫೋಟೋವನ್ನ ಕೂಡ ದರ್ಶನ್ ಪೋಸ್ಟ್ ಮಾಡಿಕೊಂಡಿದ್ದಾರೆ.