ದರ್ಶನ್ ಕ್ರಾಂತಿ ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟ ನಟಿಯರ ಎಂಟ್ರಿ.!ಯಾರೆಲ್ಲಾ ಸ್ಟಾರ್ ಗಳು ಇದ್ದಾರೆ ಗೊತ್ತಾ?

Cinema

ಕನ್ನಡ ಸಿನಿಮಾರಂಗದ ಖ್ಯಾತ ನಟ ಡಿ ಬಾಸ್ ಎಂದೇ ಕರೆಯಲ್ಪಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವಾಗಲೂ ತುಂಬಾನೇ ಹೈಲೈಟ್ ಆಗಿ ಇರುತ್ತಾರೆ. ನಟ ದರ್ಶನ್ ನಿನ್ನೆಯಷ್ಟೇ ಅವರ 55ನೇ ಚಿತ್ರ ಕ್ರಾಂತಿ ಸಿನಿಮಾ ಮುಹೂರ್ತದಲ್ಲಿ ಕಾಣಿಸಿಕೊಂಡರು. ನಿನ್ನೆ ಈ ಕ್ರಾಂತಿ ಚಿತ್ರದ ಮಹೂರ್ತ ಪೂಜೆ ನಡೆಯಿತು. ಕ್ರಾಂತಿ ಸಿನಿಮಾದ ಮುಹೂರ್ತ ಬೆಂಗಳೂರಿನ ದೇವಾಲಯದಲ್ಲಿ ಪೂಜೆ ನೆರವೇರಿತು. ಹೌದು ನಟ ದರ್ಶನ್ ಅವರ ಅಭಿಮಾನಿಗಳು ಇದೀಗ ತುಂಬಾನೇ ಕಾತುರದಿಂದ ಕ್ರಾಂತಿ ಸಿನಿಮಾ ಹೇಗೆ ಮೂಡಿಬರಬಹುದು ಎಂದು ಕಾಯುತ್ತಿದ್ದಾರೆ.

ಕ್ರಾಂತಿ ಸಿನಿಮಾ ಬಗ್ಗೆ ಈಗಾಗಲೇ ಕೆಲವು ವಿಷಯಗಳು ಹೊರಬಂದಿದ್ದು, ಇದು ಕಂಪ್ಲೀಟ್ ಆಗಿ ಯಜಮಾನ ಚಿತ್ರ ತಂಡದ ಜೊತೆ ಬರಲಿದೆ ಎಂದು ಕೇಳಿ ಬಂದಿದೆ. ಬ್ಲಾಕ್ಬಸ್ಟರ್ ಹಿಟ್ ಯಜಮಾನ ಚಿತ್ರದ ನಿರ್ಮಾಪಕರೆ ಈ ಸಿನಿಮಾಕ್ಕೂ ನಿರ್ಮಾಣ ಮಾಡಲಿದ್ದಾರೆ. ವಿ. ಹರಿಕೃಷ್ಣ ಅವರು ಈ ಕ್ರಾಂತಿ ಎಂಬ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಹೊರಹೊಮ್ಮಲಿದ್ದಾರಂತೆ. ಹೌದು ಕ್ರಾಂತಿ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯ ಮಾಡಲಿದ್ದಾರೆ, ಯಾವ ಯಾವ ದೊಡ್ಡ ದೊಡ್ಡ ಸ್ಟಾರ್ಗಳ ತಾರಾಬಳಗವಿದೆ ಗೊತ್ತಾ ಮುಂದೆ ಓದಿ.

ನಟ ದರ್ಶನ್ ಗೆ ನಾಯಕಿಯಾಗಿ ಮತ್ತೆ ರಚಿತಾ ರಾಮ್ ಅವರೆ ಅಭಿನಯಿಸುತ್ತಿದ್ದು, ಬುಲ್ಬುಲ್ ಜೋಡಿ ಈಗ ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಳ್ಳಲಿದೆ. ಹಾಗೇ ನಟಿ ಸುಮಲತಾ ಅಂಬರೀಶ್ ಅವರು ಕೂಡ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆ ರವಿಚಂದ್ರನ್ ಕೂಡ ಕ್ರಾಂತಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ದರ್ಶನ್ ಮತ್ತು ರವಿಚಂದ್ರನ್ ಅವರ ಕಾಂಬಿನೇಶನ್ ಅಭಿಮಾನಿಗಳಲ್ಲಿ ತುಂಬಾನೇ ಎಕ್ಸ್ಪೆಕ್ಟೇಶನ್ ಹೆಚ್ಚಾಗುವಂತೆ ಮಾಡಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು…