ರಾಬರ್ಟ್ ಚಿತ್ರದಲ್ಲಿ ನಟಿಸಿರುವ ಈ ಪುಟ್ಟ ಪೋರ ಅಸಲಿಗೆ ಯಾರು ಗೊತ್ತಾ ? ಈ ಬಾಲನಟನ ಹವಾ ಬೇರೆಯೇ ಇದೆ !

Cinema

ನಮಸ್ತೇ ಸ್ನೇಹಿತರೇ, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ೫೦ ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಲೆಕ್ಕಾಚಾರ ಇದೆ. ಇನ್ನು ರಾಬರ್ಟ್ ಚಿತ್ರದ ಬಹುತೇಕ ಹಾಡುಗಳೆಲ್ಲಾ ಸೂಪರ್ ಹಿಟ್ ಆಗಿವೆ. ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬಂದ ರಾಬರ್ಟ್ ಫ್ಯಾಮಿಲಿ ಆಡಿಯನ್ಸ್ ನ್ನು ಕೂಡ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ, ತೆಲಂಗಾಣದಲ್ಲೂ ಬಿಡುಗಡೆಯಾಗಿದ್ದು ಮೊದಲ ದಿನವೇ ೩ ಕೋಟಿಗಿಂತ ಹೆಚ್ಚು ಹಣವನ್ನ ನೆರೆರಾಜ್ಯಗಳಲಿ ಬಾಚಿಕೊಂಡಿತ್ತು ರಾಬರ್ಟ್ ಚಿತ್ರ. ಇನ್ನು ದರ್ಶನ್ ಅವರು ಹಾಡೊಂದರಲ್ಲಿ ಹನುಮಂತನ ವೇಷದಲ್ಲಿ ಕಾಣಿಸಿಕೊಂಡಿದ್ದರೆ, ಈ ಪುಟಾಣಿ ಬಾಲಕ ಬಾಲ ರಾಮನಾಗಿ ಕಾಣಿಸಿಕೊಂಡಿದ್ದು, ಯಾರಿದು ಪುಟ್ಟ ಪೋರ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಹೌದು, ದರ್ಶನ್ ಜೊತೆ ಮಗನಾಗಿ ನಟಿಸಿರುವ ಈ ಪುಟ್ಟ ಪೋರನ ನಡುವೆ ಸುತ್ತುತ್ತದೆ ಸಂಪೂರ್ಣ ಸಿನಿಮಾದ ಚಿತ್ರಕತೆ. ಹಾಗಾದ್ರೆ ಈ ಬಾಲ ನಟ ಯಾರೆಂದು ತಿಳಿಯೋಣ ಬನ್ನಿ..

ಬಾಲಿವುಡ್ ಸಿನಿಮಾ ರಂಗದಲ್ಲಿ ತುಂಬಾನೇ ಬೇಡಿಕೆಯಲ್ಲಿರುವ ಈ ಬಾಲ ನಟನ ಹೆಸರು ಜೇಸನ್ ಡಿಸೋಜಾ ಎಂದು. ಈ ಪುಟ್ಟ ಪೋರನಿಗೆ ಸಿನಿಮಾಗಳೇನು ಹೊಸದಲ್ಲ. ಬಾಲಿವುಡ್ ನ ಸ್ಟಾರ್ ನಟ ನಟಿಯರ ಜೊತೆ ನಟಿಸಿ ಮಿಂಚಿದ್ದಾನೆ ಈ ಬಾಲನಟ. ಅಚ್ಚರಿಯೆಂದರೆ ಮುಂಬೈನಲ್ಲಿ ವಾಸ ಮಾಡುವ ಈ ಪುಟ್ಟ ಪೋರ ತನ್ನ ೯ವರ್ಷ ವಯಸ್ಸಿಗೇನೇ ಇದುವರೆಗೂ ನೂರಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಬಿ ಟೌನ್ ನಟ ನಟಿಯರ ನೆಚ್ಚಿನ ಬಾಲ ನಟನೆದು ಗುರುತಿಸಿಕೊಂಡಿದ್ದಾನೆ. ಇನ್ನು ಬಾಳನಟನ ಕೈನಲ್ಲಿ ನೂರಾರವು ಚಿತ್ರಗಳ ಆಫರ್ ಗಳಿವೆ ಎಂದು ಹೇಳಲಾಗಿದೆ.