ಡಿ ಬಾಸ್ ದರ್ಶನ್ ಕಡೆಯಿಂದ ಶಿವರಾಜ್ ಕೆಆರ್ ಪೇಟೆ ಮಗನಿಗೆ ಸಿಕ್ತು ಸೂಪರ್ ಗಿಫ್ಟ್ !

Cinema

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಅಭಿಮಾನಿಗಳಿಗೆ ಎಷ್ಟು ಪ್ರೀತಿನೋ, ಅಭಿಮಾನಿಗಳನ್ನ ಕಂಡರೆ ದಾಸ ದರ್ಶನ್ ಅವರಿಗೂ ಕೂಡ ಅಷ್ಟೇ ಪ್ರೀತಿ. ಅದಕ್ಕಾಗಿಯೇ ಡಿಬಾಸ್ ದರ್ಶನ್ ತನ್ನ ಅಭಿಮಾನಿಗಳನ್ನ ಸೆಲೆಬ್ರೆಟಿಗಳೆಂದು ಕರೆದ್ರು. ಈಗ ತಮ್ಮ ಅಭಿಮಾನಿಯೊಬ್ಬರ ಹುಟ್ಟುಹಬ್ಬದಲ್ಲಿ ಬಾಗಿಯಾಗಿರುವ ದರ್ಶನ್ ಅವರು ತಾನು ಅಭಿಮಾನಿಗಳ ದಾಸ ಎಂಬುದನ್ನ ನಿರೂಪಿಸಿದ್ದಾರೆ.

ಹೌದು, ತಮ್ಮದೇ ಆದ ವಿಭಿನ್ನ ಹಾಸ್ಯ ನಟನೆಯ ಮೂಲಕ ಕನ್ನಡಿಗರನ್ನ ನಕ್ಕು ನಲಿಸಿದ ನಟ ಶಿವರಾಜ್ ಕೆಆರ್ ಪೇಟೆ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇನ್ನು ಇಂದು ಶಿವರಾಜ್ ಅವರ ಮಗ ವಂಶಿಕ್ ನ ಹುಟ್ಟುಹಬ್ಬ. ವಂಶಿಕ್ ತಾನು ಮೂರು ವರ್ಷ ಇದ್ದಾಗಿನಿಂದಲೇ ದರ್ಶನ್ ಅವರ ಅಪ್ಪಟ ಪುಟ್ಟ ಅಭಿಮಾನಿ. ದರ್ಶನ್ ಸಿನಿಮಾಗಳೆಂದರೆ ತುಂಬಾ ಇಷ್ಟಪಡುತ್ತಿದನಂತೆ ವಂಶಿಕ್. ಇದೆ ಕಾರಣದಿಂದಲೇ ಮೈಸೂರಿನಲ್ಲಿರುವ ದರ್ಶನ್ ಅವರ ಫಾರ್ಮ್ ಹೌಸ್ ಗೆ ಹೋಗಿದ್ದ ಶಿವರಾಜ್ ಕೆ ಅರ್ ಪೇಟೆ ಅವರ ಕುಟುಂಬ ದರ್ಶನ್ ಅವರ ಜೊತೆಯಲ್ಲೇ ತಮ್ಮ ಮಗನ ಹುಟ್ಟುಹಬ್ಬವನ್ನ ಆಚರಿಸಿ ಸಂಭ್ರಮ ಪಟ್ಟಿದ್ದಾರೆ.

ದರ್ಶನ್ ಅವರ ಜೊತೆಗೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿ ಸಂತಸ ವ್ಯಕ್ತಪಡಿಸಿರುವ ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ ಅವರ ಜೊತೆಗೆ ಕಾಲ ಕಳೆದ ಹಾಗೂ ಮಗನ ಹುಟ್ಟುಹಬ್ಬದ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ತನ್ನ ಪುಟ್ಟ ಅಭಿಮಾನಿಯಾಗಿರುವ ಶಿವರಾಜ್ ಅವರ ಮಗನಿಗೆ ವಿಶೇಷ ಉಡುಗೊರೆ ನೀಡಿರುವ ನಟ ದರ್ಶನ್ ತಾವೇ ತೆಗೆದಿರುವ ಹಕ್ಕಿಯ ಚಿತ್ರದ ಫೋಟೋವೊಂದನ್ನ ಕೊಟ್ಟಿದ್ದಾರೆ.