ತನ್ನ ಹೆತ್ತ ತಾಯಿಗೆ ಶಿಕ್ಷೆ ಕೊಡಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ! ಕಾರಣ ಗೊತ್ತಾದ್ರೆ ಅಚ್ಚರಿ ಪಡ್ತೀರಾ..

Inspire
Advertisements

ಒಮ್ಮೆ ವೈಎಸ್ಆರ್ ಕಾಂಗ್ರೆಸ್ ನ ಶಾಸಕಿ ರೋಜಾ ಅವರನ್ನು ಪೊಲೀಸರು ಬಂಧಿಸಿದ್ದರು. ಕಾರಣ ಅವರು ಕರ್ಫ್ಯೂ ನಿಯಮ ಉಲ್ಲಂಘಿಸಿ ತಮ್ಮ ಬೆಂಬಲಿಗರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ನಂತರ ಪೊಲೀಸರು ಅವರನ್ನು ಬಂಧಿಸಿ ಕೆಲ ಘಂಟೆಗಳ ನಂತರ ಬಿಡುಗಡೆಗೊಳಿಸಿದರು. ಆದರೆ ರೋಜಾ ಜೊತೆಗಿದ್ದ ಮೊತ್ತೊಬ್ಬ ಮಹಿಳೆಯನ್ನು ಮಾತ್ರ ಬಿಡುಗಡೆ ಮಾಡಲಿಲ್ಲ. ಆ ಮಹಿಳೆ ಯಾರೆಂದರೆ, ತನ್ನ ಸ್ವಂತ ಖರ್ಚಿನಲ್ಲೇ ಪ್ರಚಾರ ಮಾಡುತ್ತಾ ಪಕ್ಷಕ್ಕಾಗಿ ದುಡಿಯುವ ವೈಎಸ್ಆರ್ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತೆ. ನಂತರ ಅವರು ತಮ್ಮನ್ನೂ ಬಿಡುಗಡೆ ಮಾಡುವಂತೆ ಪೊಲೀಸರಲ್ಲಿ ಆಗ್ರಹ ಮಾಡಿದರು, ಅಲ್ಲದೆ ತಾನು ಓರ್ವ ಜಿಲ್ಲಾಧಿಕಾರಿ ತಾಯಿ ಎಂದು ಹೇಳಿದರು. ಪೊಲೀಸರು ಇದನ್ನು ನಂಬಲಿಲ್ಲ. ಆಗ ವೈಎಸ್ಆರ್ ಪಕ್ಷದ ಕಾರ್ಯಕರ್ತನೊಬ್ಬ ಬಂದು ಅವರು ನಿಜವಾಗಿಯೂ ಜಿಲ್ಲಾಧಿಕಾರಿಯ ತಾಯಿ ಎಂದು ತಿಳಿಸಿದರು.

[widget id=”custom_html-4″]

Advertisements

ಆ ಮಹಿಳೆ ಬೇರೆ ಯಾರೂ ಅಲ್ಲ ರೋಹಿಣಿ ಸಿಂಧೂರಿ ಅವರ ತಾಯಿ ಲಕ್ಷ್ಮೀ ರೆಡ್ಡಿ. ನಂತರ ಪೊಲೀಸರು ರೋಹಿಣಿಯವರಿಗೆ ಕರೆ ಮಾಡಿ ಮಹಿಳೆ ಹೇಳುತ್ತಿರುವುದು ನಿಜವೇ ಎಂದು ವಿಚಾರಿಸಿದರು. ಆಗ ರೋಹಿಣಿ ಸಿಂಧೂರಿ, ಹೌದು ಅವರು ನನ್ನ ತಾಯಿ ಅವರಿಗೆ ಸ್ವಲ್ಪ ರಾಜಕೀಯದ ಹುಚ್ಚು. ಅವರು ಏನಾದರೂ ತಪ್ಪು ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ. ಅವರನ್ನು ಬಿಡುಗಡೆ ಮಾಡುವುದು ಅಥವಾ ಮುಂದಿನ ಕ್ರಮ ಕೈಗೊಳ್ಳುವುದು ನಿಮಗೆ ಬಿಟ್ಟ ವಿಚಾರ. ನೀವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಇದರಲ್ಲಿ ನನ್ನ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಹೇಳಿದರು. ಈ ವಿಚಾರವನ್ನು ಸಿಂಧೂರಿಯವರ ತಾಯಿ ಲಕ್ಷ್ಮೀ ರೆಡ್ಡಿ ಅವರೇ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ರೋಹಿಣಿ ಯವರು ತುಂಬಾ ಪ್ರಾಮಾಣಿಕ ಅಧಿಕಾರಿ ಎಂದು ಹೆಮ್ಮೆ ಪಟ್ಟಿದ್ದಾರೆ. ಲಕ್ಷ್ಮೀ ರೆಡ್ಡಿಯವರು ಯಾವಾಗಲೂ ರಾಮಕೃಷ್ಣ ಮಠಕ್ಕೆ ಭೇಟಿ ನೀಡಿ ಪ್ರವಚನ ಕೇಳುತ್ತಿದ್ದರಂತೆ.

[widget id=”custom_html-4″]

ಆಗ, ನೂರು ಜನ ಪುರುಷರಿಗಿಂತ ಒಬ್ಬ ಧೈರ್ಯಶಾಲಿ ಪ್ರಾಮಾಣಿಕ ಹೆಣ್ಣು ಮಗಳು ಶಕ್ತಿ ಶಾಲಿ ಎಂದು ಸ್ವಾಮೀಜಿಗಳು ಹೇಳಿದ ಮಾತು ಅವರ ಮನಸಿನ ಮೇಲೆ ತುಂಬಾ ಪ್ರಭಾವ ಬೀರಿತಂತೆ. ನಂತರ ಅವರು ತಮ್ಮ ಮೊದಲನೇ ಮಗುವಿಗೆ ಗರ್ಭಿಣಿಯಾದಾಗ ತನಗೆ ಒಬ್ಬ ಧೈರ್ಯಶಾಲಿ ಹೆಣ್ಣು ಮಗು ಜನಿಸಬೇಕು ಎಂದು ಆಸೆ ಪಟ್ಟಿದ್ದರಂತೆ. ಅವರ ಹರಕೆಯ ಫಲವಾಗಿ ರೋಹಿಣಿ ಸಿಂಧೂರಿಯವರು ಜನಿಸಿದರು. ದುರ್ಗೆಯ ಪುತ್ರಿಯಂತೆ ಧೈರ್ಯ, ಜ್ಞಾನ, ಕೀರ್ತಿ ಪಡೆದರು. ರೋಹಿಣಿ ಸಿಂಧೂರಿಯವರು ಧಕ್ಷ ಅಧಿಕಾರಿಯಾಗಿ ಆಡಳಿತ ನಡೆಸಿ ಲಕ್ಷಾಂತರ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ಹೋದ ಕಡೆಯಲ್ಲಿ ತುಂಬಾ ಅಭಿವೃದ್ದಿ ಆಗಿರುವುದು ನೂರಕ್ಕೆ ನೂರು ನಿಜ. ಇತ್ತ ಅವರ ಅಭಿಮಾನಿಗಳು ಅವರನ್ನು ಕೊಂಡಾಡುತಿದ್ದರೆ ಮತ್ತೊಂದೆಡೆ ಒಂದೇ ನಾಣ್ಯದ ಎರಡು ಮುಖದಂತೆ ರೋಹಿಣಿ ವಿರುದ್ಧವೇ ಬ್ರ’ಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ.

[widget id=”custom_html-4″]

ಅವರು ಬಹುತೇಕ ಟೆಂಡರ್ ಗಳನ್ನು ಆಂಧ್ರ ಮೂಲದವರಿಗೆ ನೀಡುತ್ತಾರೆ ಆ ಮೂಲಕ ತಾವೂ ಕೂಡ ಲಾಭ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಅಲ್ಲದೆ ಅವರು ಜನ ಪ್ರತಿನಿಧಿಗಳ ಮಾತನ್ನು ಪರಿಗಣಿಸುವುದಿಲ್ಲ, ಕಿರಿಯ ಅಧಿಕಾರಿಗಳಿಗೆ ಗೌರವ ನೀಡುವುದಿಲ್ಲ , ಅಹಂಕಾರಿ ಹೆಣ್ಣು ಎಂಬ ಅಸಮಾಧಾನಗಳು ಆಗಾಗ ಕೇಳಿ ಬರುತ್ತವೆ. ಅದೇನೇ ಇದ್ದರೂ ಐಎಎಸ್ ಕೆಎಎಸ್ ಕನಸು ಕಾಣುವವರಿಗೆ ರೋಹಿಣಿ ರೋಲ್ ಮಾಡೆಲ್ ಆಗಿದ್ದಾರೆ. ತಮ್ಮ ಮಕ್ಕಳೂ ಅವರಂತೆ ಆಗಲಿ ಎಂದು ಎಷ್ಟೋ ಪೋಷಕರೂ ಕೂಡ ತಮ್ಮ ಮಕ್ಕಳ ಬಗ್ಗೆ ಕನಸು ಕಾಣುತ್ತಾರೆ. ಅವರ ಧೈರ್ಯ ನಡೆ ನೇರ ನುಡಿ ಯಿಂದ ಎಲ್ಲರಿಗೂ ಅಚ್ಚುಮೆಚ್ಚಾಗಿರುವ ಇವರು ಕೆಲ ರಾಜ ಕಾರಣಿಗಳಿಗಳ ಪಾಲಿಗೆ ಮಾತ್ರ ಸಿಂಹಿಣಿಯಾಗಿದ್ದಾರೆ.