ಸಾಮಾನ್ಯ ಮಹಿಳೆಯಂತೆ ಮಧ್ಯರಾತ್ರಿಯಲ್ಲಿ ಬಸ್ ಸ್ಟಾಂಡ್ ನಲ್ಲಿ ನಿಂತ ಮಹಿಳಾ ಡಿಸಿಪಿ ! ಆಗ ಅಲ್ಲಿಗೆ ಬಂದ ಮೂವರು ಹುಡುಗರು ಮಾಡಿದ್ದೇನು ಗೊತ್ತಾ ?

Inspire

ಸ್ನೇಹಿತರೇ, ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹೇಳಿದ್ದರು..ಎಂದು ಒಬ್ಬ ಸಾಮಾನ್ಯ ಮಹಿಳೆ ಮಧ್ಯ ರಾತ್ರಿಯಲ್ಲಿ ಯಾರ ಭಯವಿಲ್ಲದೆ ಏಕಾಂಗಿಯಾಗಿ ಓಡಾಡುತ್ತಾಳೋ, ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದ ಹಾಗೆ ಎಂದು ಹೇಳಿದ್ದರು. ಆದರೆ ಮಹಿಳೆಯೊಬ್ಬಳು ಯಾರ ಭಯವಿಲ್ಲದೆ ಒಂಟಿಯಾಗಿ ಓಡಾಡುವುದೇ ಎಂದರೆ ಅದು ಅಸಾಧ್ಯವಾದ ಮಾತು ಎನ್ನುವುದೇ ಬೇಸರ. ಆದರೆ ನಾವೆಲ್ಲಾ ಒಪ್ಪಿಕೊಳ್ಳಲೇಬೇಕಾದ ಸತ್ಯ ಇದು. ಏಕೆಂದರೆ ಈಗಿನ ಸಮಾಜ ಅಂತಹ ಪರಿಸ್ಥಿತಿಯಲ್ಲಿದೆ. ಇದೆ ಕಾರಣದಿಂದಲೇ ಮಹಿಳಾ ಪೊಲೀಸ್ ಆಧಿಕಾರಿ ಒಬ್ಬರು ನಡು ರಾತ್ರಿಯಲ್ಲಿ ಏಕಾಂಗಿಯಾಗಿ ನಗರದಾದ್ಯಂತ ಓಡಾಡಿದ್ದಾರೆ. ಹಾಗಾದ್ರೆ ಈ ವೇಳೆ ಆಗಿದ್ದೆ ಬೇರೆ. ಅದೇನೆಂದು ನೋಡೋಣ ಬನ್ನಿ..

ಇನ್ನು ಈ ರೀತಿ ನಾಡು ರಾತ್ರಿ ಓಡಾಡಿದ ಮಹಿಳಾ ಡಿಸಿಪಿಯ ಹೆಸರು ಮೇರಿ ಜೋಸೆಫ್ ಅವರು. ಇನ್ನು ಈ ಘಟನೆ ನಡೆದಿರುವುದು ಪಕ್ಕದ ರಾಜ್ಯದ ಕೇರಳದಲ್ಲಿ. ಅಲ್ಲಿನ ಕ್ಯಾಲಿಕಟ್ ನಗರದಲ್ಲಿ ಮಹಿಳೆಯರು ರಾತ್ರಿಯ ಸಮಯದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಂ’ಪ್ಲೇಂಟ್ ಗಳು ಬಂದಿದ್ದು, ಇದರ ಬಗ್ಗೆ ತಾವೇ ಖುದ್ದಾಗಿ ತಿಳಿದುಕೊಳ್ಳಬೇಕು ಎಂದು ಡಿಸಿಪಿ ಮೇರಿ ಜೋಸೆಫ್ ಅವರು ತಮ್ಮ ಕೆಲ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆ ಸೇರಿ ಮಧ್ಯರಾತ್ರಿಯ ಸಮಯದಲ್ಲಿ ಸಾಮಾನ್ಯ ಮಹಿಳೆಯರಂತೆ ಕ್ಯಾಲಿಕಟ್ ನಗರದ ರಸ್ತೆಗಳಲ್ಲಿ ಸುತ್ತಾಡುತ್ತಾರೆ. ಡಿಸಿಪಿ ಮೇರಿ ಜೋಸೆಫ್ ಅವರ ಜೊತೆಗಿದ್ದ ಮತ್ತಿಬ್ಬರು ಮಹಿಳಾ ಅಧಿಕಾರಿಗಳು ಸಾಮಾನ್ಯ ಮಹಿಳೆಯರಂತೆ ಸುತ್ತಾಡುತ್ತಿದ್ದ ವೇಳೆ ಅಲ್ಲಿಗೆ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಆ ಮಹಿಳೆಯರನ್ನ ಕೆಟ್ಟ ರೀತಿ ನೋಡುತ್ತಾ ಬರುತ್ತೀರಾ ಅಂತ ಕೇಳಿದ್ದಾರೆ. ಇನ್ನು ಸುಮಾರು ರಾತ್ರಿ ೧೧ಗಂಟೆಯ ವೇಳೆ ಪೊಲೀಸ್ ಅಧಿಕಾರಿ DCP ಮೇರಿ ಜೋಸೆಫ್ ಅವರು ಸಾಮಾನ್ಯ ಮಹಿಳೆಯಂತೆ ಬಸ್ ಸ್ಟಾಪ್ ಒಂದರ ಬಳಿ ನಿಂತಿದ್ದರು.

ಇನ್ನು ಆ ಸಮಯದಲ್ಲಿ ಯಾರೊಬ್ಬ ಮಹಿಳೆಯರು ಕೂಡ ಇರಲಿಲ್ಲ. ಹಗಲಿನ ಹೊತ್ತಿನಲ್ಲಿ ಜನರೇ ತುಂಬಿ ತುಳುಕುತ್ತಿದ್ದ ಆ ಜಾಗದಲ್ಲಿ ಮೇರಿ ಜೋಸೆಫ್ ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ ವಾಹನಗಳಲ್ಲಿ ಹೋಗುತ್ತಿದ್ದವರು ತಮ್ಮ ವಾಹನವನ್ನ ನಿಧಾನ ಮಾಡಿ ಡಿಸಿಪಿ ಮೇರಿ ಜೋಸೆಫ್ ಅವರನ್ನೇ ದಿಟ್ಟಿಸಿ ಬೇರೆ ರೀತಿಯಲ್ಲೇ ನೋಡುತ್ತಿದ್ದರು. ಇನ್ನು ಬಸ್ ಸ್ಟಾಂಡ್ ನಲ್ಲಿ ನಿಂತಿದ್ದ ಕೆಲವರು ಮೇರಿ ಜೋಸೆಫ್ ಅವರ ಬಗ್ಗೆ ಕೆ’ಟ್ಟದಾಗಿ ಮಾತನಾಡುತ್ತಾ ರೇಗಿಸುತ್ತಾರೆ. ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡುತ್ತಾ ಬೀಚ್ ಗಳ ಬಳಿ ಇರೋ ರಸ್ತೆಗಳ ಬಳಿ ಸುತ್ತಾಡುತ್ತಾರೆ. ಆದರೆ ಆ ಸ್ಥಳಗಳಲ್ಲಿ ಮೇರಿ ಜೋಸೆಫ್ ಅವರಿಗೆ ಕೆಟ್ಟ ರೀತಿಯಾದ ಅನುಭವಗಳು ಆಗುತ್ತವೆ. ಮಹಿಳೆಯೊಬ್ಬಳು ಮಧ್ಯರಾತ್ರಿ ಸಮಯದಲ್ಲಿ ಒಂಟಿಯಾಗಿ ಕಾಣಿಸಿಕೊಂಡಾಗ ಆ ಮಹಿಳೆ ಯಾರು ? ಇಂತಹ ಸಮಯದಲ್ಲಿ ಕೆ’ಟ್ಟದಾಗಿ ನೋಡಿದರೋ ಹೊರತು ಇಲ್ಲೇನು ಮಾಡುತ್ತಿದ್ದಾಳೆ ಯಾರೂ ಕೇಳಿದವರಿಲ್ಲ.

ಆದರೆ ನಗರದ ಸ್ಥಳವೊಂದರಲ್ಲಿ ಮೇರಿ ಜೋಸೆಫ್ ಅವರು ಕುಳಿತಿದ್ದ ವೇಳೆ ಅಲ್ಲಿಗೆ ಬಂದ ನೈಟ್ ಪೊಲೀಸ್ ಒಬ್ಬರು ಮಹಿಳಾ ಅಧಿಕಾರಿ ಮೇರಿ ಜೋಸೆಫ್ ಅವರನ್ನ ಯಾರ್ ನೀವು?ಈ ರಾತ್ರಿಯಲ್ಲಿ ಇಲ್ಲೇನು ಮಾಡುತ್ತಿದ್ದೀರಿ. ನಮ್ಮಿಂದ ಏನಾದ್ರು ಸಹಾಯ ಬೇಕಾ ಎಂದು ವಿಚಾರಿಸಿದ್ದಾರೆ. ಆದರೆ ಇದೆ ವೇಳೆ ಆ ಮಹಿಳೆ ಮಹಿಳಾ ಡಿಸಿಪಿ ಎಂಬುದು ಗೊತ್ತಾಗಿಲ್ಲ. ಇನ್ನು ಮಧ್ಯರಾತ್ರಿಯಲ್ಲಿ ತಮಗಾದ ಅನುಭವವನ್ನ ಅರಿತ ಮೇರಿ ಜೋಸೆಫ್ ಅವರು ರಾತ್ರಿ ವೇಳೆ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಅರಿತು ಆ ಸ್ಥಳಗಳ್ಲಲಿ ನೈಟ್ ಬೀಟ್ ಪೊಲೀಸರನ್ನ ನೇಮಿಸುವುದರ ಜೊತೆಗೆ ಆ ರಸ್ತೆಗಳಲ್ಲಿ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸಿದ ಕಾರಣ ಅದನ್ನೆಲ್ಲಾ ಸರಿಪಡಿಸುವಂತೆ ಮಾಡುತ್ತಾರೆ. ಒಟ್ಟಿನಲ್ಲಿ ಮಹಿಳಾ ಡಿಸಿಪಿ ಮೇರಿ ಜೋಸೆಫ್ ಮಾಡಿರುವ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆಗಳನ್ನ ವ್ಯಕ್ತಪಡಿಸಿದ್ದಾರೆ.