ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿಯ ಆಲಯದಲ್ಲಿ ನಂದಾ ದೀಪ ಆರಿದೆಯೆಂಬ ವದಂತಿ..ರಾತ್ರೋ ರಾತ್ರಿ ಜನ ಮಾಡಿದ್ದೇನು ಗೊತ್ತಾ.?

Advertisements

ಕೊರೋನಾ ಸೋಂಕು ಹರಡುವ ಹಿನ್ನಲೆಯಲ್ಲಿ ಹೀಗಾಗಲೇ ಇಡೀ ಭಾರತ ದೇಶವನ್ನ ಲಾಕ್ ಡೌನ್ ಮಾಡಲಾಗಿದೆ. ಪೊಲೀಸರು ಸೇರಿದಂತೆ ಸೆಲೆಬ್ರೆಟಿಗಳು ಸೇರಿ ಬೇಕಾಬಿಟ್ಟಿಯಾಗಿ ಮನೆಯಿಂದ ಹೊರಬರದಂತೆ ಸಾರ್ವಜನಿಕರಲ್ಲಿ ಮನವರಿಕೆ ಮಾಡುತ್ತಿದ್ದಾರೆ. ಇನ್ನು ಭಾರತ ಲಾಕ್ ಡೌನ್ ಹಿನ್ನಲೆಯಲ್ಲಿ ಜನರು ದೇವಸ್ಥಾನಗಳಿಗೆ ಹೋಗದಂತೆ ದೇವಾಲಯಗಳನ್ನು ಕೂಡ ಲಾಕ್ ಡೌನ್ ಮಾಡಲಾಗಿದೆ.

Advertisements

ಇನ್ನು ಈ ಕೊರೋನಾ ವೈರಸ್ ಜನರಲ್ಲಿ ಭಯ ಸೃಷ್ಟಿಸಿರುವ ಹಿನ್ನಲೆಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದು ಸಖತ್ ವೈರಲ್ ಆಗಿದ್ದು, ಜನರು ಕೂಡ ಭಯ ಭೀತರಾಗಿದ್ದಾರೆ. ಹಾಗಾದ್ರೆ ಏನದು ಸುದ್ದಿ.?ನೀವೂ ಕೂಡ ವಾಟ್ಸಾಪ್ ನಲ್ಲಿ ಈ ವದಂತಿಯನ್ನ ನೋಡಿರಬಹುದು?ಮುಂದೆ ಓದಿ..ಹೌದು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಂದಾ ದೀಪ ಆರಿದ್ದು, ಇದರಿಂದ ರಾಜ್ಯಕ್ಕೆ ಕಂಟಕ, ಎಂಬ ಪೋಸ್ಟ್ ಒಂದು ಹರಿದಾಡಿದೆ.

ಇನ್ನು ಈ ಕಂಟಕದಿಂದ ಪಾರಾಗಲು ಮನೆಯ ಬಾಗಿಲಿನಲ್ಲಿ ದೀಪ ಹಚ್ಚಬೇಕೆಂಬ ಎಂಬ ವದಂತಿಯ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಇನ್ನು ಇದರಿಂದ ದಾವಣೆಗೆರೆ ಸೇರಿದಂತೆ ಕೆಲವೊಂದು ಜಿಲ್ಲೆಗಳ ಜನರು ರಾತ್ರೋ ರಾತ್ರಿ ೩ಗಂಟೆಗೆ, ೫ಗಂಟೆಗೆ ಎದ್ದು ಮನೆಯ ಬಾಗಿಲಿನ ಮುಂದೆ ದೀಪ ಹಚ್ಚಿದ್ದಾರೆ.

ಇನ್ನು ಈ ವದಂತಿಗಳಿಂದ ಮಧ್ಯರಾತ್ರಿಯೇ ಎದ್ದು ಸ್ನಾನ ಮಾಡಿ, ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ ದೀಪ ಹಚ್ಚಿದ್ದಾರೆ. ಜೊತೆಗೆ ತಮ್ಮ ಸಂಬಂದಿಕರು, ಸ್ನೇಹಿತರಿಗೂ ಕರೆ ಮಾಡಿ, ಮಧ್ಯರಾತ್ರಿಯೇ ಸ್ನಾನ ಮಾಡಿ, ಮನೆಯ ಅಂಗಳ ಕ್ಲೀನ್ ಮಾಡಿ, ರಂಗೋಲಿ ಹಾಕಿ, ದೀಪ ಹಚ್ಚುವಂತೆ ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ನಸುಕಿನ ಜಾವದಲ್ಲೇ ಎದ್ದು ದೀಪ ಹಚ್ಚೋದ್ರಲ್ಲಿ ಏನೂ ತೊಂದರೆಯಿಲ್ಲ. ಆದರೆ ಜನರು ಸುಳ್ಳು ವದಂತಿಗಳಿಗೆ ಕಿವಿ ಕೊಟ್ಟು ಭಯ ಭೀತರಾಗುವುದು ಸರಿಯಿಲ್ಲ ಎಂಬುದು ನನ್ನ ಅನಿಸಿಕೆ. ಕೊರೋನಾ ಭಯ ಹುಟ್ಟಿಸಿರುವ ಇಂತಹ ಸಮಯದಲ್ಲಿ ಮನೆಯಿಂದ ಹೊರಹೋಗದಂತೆ ತಮ್ಮ ಸ್ನೇಹಿತರಿಗೂ, ಸಂಬಂಧಿಕರಿಗೂ ಮನವರಿಕೆ ಮಾಡಿಕೊಡುವುದು ಎಲ್ಲದಕ್ಕಿಂತ ಮುಖ್ಯವಾಗಿದೆ. ಇನ್ನು ಈ ತರಹದ ಸುಳ್ಳು ಸುದ್ದಿಗಳು ಹರಡದಂತೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ತಿಳಿಸಿ, ಜೊತೆಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ..