ತಂದೆಯ ಮನೆಯಲ್ಲಿ ಸಿಹಿ ಸುದ್ದಿ ಹಂಚಿಕೊಂಡ ಪ್ರೇರಣಾ ಸರ್ಜಾ..ಏನದು ಗೊತ್ತಾ ?

Cinema

ಖರಾಬು ಹಾಡಿನಿಂದಲೇ ಸಖತ್ ಹವಾ ಕ್ರಿಯೇಟ್ ಮಾಡಿದಾ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಸಖತ್ ಹಿಟ್ ಆಗಿತ್ತು. ಇನ್ನು ಅಂದಾಜು ೫೦ ಕೋಟಿವರೆಗೆ ಈ ಚಿತ್ರ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಇನ್ನು ಸಿನಿಮಾ ಪ್ರಮೋಷನ್ ಅಂತ ಬ್ಯುಸಿಯಾಗಿದ್ದ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಜೊತೆ ಗೋವಾ ಸೇರಿದಂತೆ ಹಲವು ಕಡೆ ಸುತ್ತಾಡಿಕೊಂಡು ಬಂದಿದ್ದಾರೆ. ಪ್ರವಾಸದಿಂದ ಮರಳಿದ ಬಳಿಕ ತಂದೆಮನೆಗೆ ಹೋಗಿರುವ ಪ್ರೇರಣಾ ಸರ್ಜಾ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಿಹಿ ಸುದ್ದಿಯನ್ನ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಹಾಗಾದ್ರೆ ಏನದು ಸಿಹಿ ಸುದ್ದಿ ಅನ್ನೋದನ್ನ ನೋಡೋಣ ಬನ್ನಿ..

ಪೊಗರು ಸಿನಿಮಾ ಬಳಿಕ ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಅವರು ಜಾಲಿ ಟ್ರಿಪ್ ಮುಗಿಸಿಕೊಂಡು ಬಂದಿದ್ದು, ಈಗ ಧ್ರುವ ಅವರು ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಧ್ರುವ ಅವರ ಮುಂದಿನ ಚಿತ್ರ ‘ದುಬಾರಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತಮ್ಮ ಪೋಷಕರ ಮನೆಯಲ್ಲಿರುವ ಪ್ರೇರಣಾ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಈಗ ತನ್ನ ಅಪ್ಪನ ಜೊತೆಗಿರುವ ಫೋಟೋವೊಂದನ್ನ ಹಂಚಿಕೊಂಡಿರುವ ಪ್ರೇರಣಾ ‘ಹುಟ್ಟಿದ ಹಬ್ಬದ ಶುಭಾಶಯಗಳು ಪಪ್ಪಾ’ ಎಂದು ಬರೆದುಕೊಂಡು ವಿಶ್ ಮಾಡಿದ್ದಾರೆ.

ಇನ್ನು ತನ್ನ ಪ್ರೀತಿಯ ಮಾವನಿಗೆ ನಟ ಧ್ರುವ ಸರ್ಜಾ ಕೂಡ ಹುಟ್ಟಿದ ಹಬ್ಬದ ಶುಭಾಶಯಗಳನ್ನ ಹೇಳಿದ್ದು, ಬರ್ತ್ ಡೇ ಸರ್ಪ್ರೈಸ್ ಕೂಡಾ ಕೊಟ್ಟಿದ್ದಾರೆ. ಪ್ರೇರಣಾ ಸರ್ಜಾ ಅವರು ಇಂದು ನನಗೆ ವಿಶೇಷವಾದ ದಿನವಾಗಿದ್ದು, ನಮ್ಮ ಮನೆಯ ದೊಡ್ಡ ಬಾಸ್ ಆಗಿರುವ ಪ್ರೀತಿಯ ತಂದೆಯವರ ಹುಟ್ಟು ಹಬ್ಬ. ಇದು ನನ್ನ ಜೀವನದ ಸ್ಪೆಷಲ್ ಡೇ ಗಳಲ್ಲಿ ಒಂದು ಎಂದು ಪ್ರೇರಣಾ ಸರ್ಜಾ ಅವರು ತನ್ನ ತಂದೆಯ ಬಗ್ಗೆ ಇರುವ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.