ನನ್ನ ತಂದೆ ಅನ್ನಕ್ಕೆ ವಿ’ಷ ಬೆರಸಿ ಕೊಟ್ಟಿದ್ದರು ಎಂದು ಕಣ್ಣೀರಿಟ್ಟ ಬಿಗ್ ಬಾಸ್ ಸ್ಪರ್ಧಿ!

Entertainment

ಪ್ರತೀ ಬಿಗ್ ಬಾಸ್ ಸೀಸನ್ ನಲ್ಲೂ ಸ್ಪರ್ಧಿಗಳಿಗೆ ಒಂದು ಅವಕಾಶ ನೀಡಲಾಗುತ್ತದೆ. ಅದು ಸ್ಪರ್ಧಿಗಳು ಯಾರಿಗಾದರೂ ಧನ್ಯವಾದ ತಿಳಿಸುವುದಾಗಲಿ ಇಲ್ಲವೇ ತಮ್ಮ ಜೀವನದ ನಡೆದ ಯಾರಿಗೂ ಹೇಳಿಕೊಳ್ಳದೆ ಇರುವ ಘ’ಟನೆಗಳ ಬಗ್ಗೆ ಹೇಳಿಕೊಳ್ಳುವ ಸಲುವಾಗಿ ವೇದಿಕೆಯನ್ನ ಬಿಗ್ ಬಾಸ್ ನೀಡುತ್ತದೆ. ಅದರಂತೆ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳಿಗೂ ಕೂಡ ಅವಕಾಶ ನೀಡಲಾಗಿತ್ತು. ಅದರಂತೆ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದಿರುವ ಸಿಹಿ ಕಹಿ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ.

ಅದರಂತೆ ಸ್ಪರ್ಧಿ ದಿವ್ಯ ಸುರೇಶ್ ಕೂಡ ತಮ್ಮ ಜೀವನದಲ್ಲಿ ನಡೆದಿರುವ ಕ’ಹಿ ಘ’ಟನೆಯೊಂದರ ಬಗ್ಗೆ ಮೆಲುಕು ಹಾಕಿದ್ದಾರೆ. ತನ್ನ ಹೆತ್ತಪ್ಪನೇ ಊಟದಲ್ಲಿ ವಿ’ಷ ಬೆರೆಸಿದ್ದರು ಎಂಬ ವಿಷಯವನ್ನ ಬಹಿರಂಗ ಮಾಡಿದ್ದಾರೆ. ಹೌದು, ತಮ್ಮ ಜೀವನದ ಕಹಿ ಘಟನೆಯೊಂದನ್ನ ಹಂಚಿಕೊಳ್ಳುವ ವೇಳೆ ಈ ಶಾಕಿಂಗ್ ವಿಚಾರವನ್ನ ಬಿಚ್ಚಿಟ್ಟಿರುವ ದಿವ್ಯಾ ಸುರೇಶ್, ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನನ್ನಪ್ಪ ಯಾವತ್ತು ನನಗೆ ಊಟ ಕಲಿಸಿಕೊಡುತ್ತಿರಲಿಲ್ಲ. ಆದರೆ ಅದೊಂದು ದಿನ ಕಂಠಪೂರ್ತಿ ಕು’ಡಿದುಬಂದಿದ್ದು ಊಟ ಕಲಿಸಿ ತಂದಿದ್ದರು.

ಮೊದಲು ನನ್ನ ಅಣ್ಣನಿಗೆ ಕೊಟ್ಟು ಬಳಿಕ ಅವರೂ ತಿಂದರು. ಊಟ ಮಾಡುತ್ತಿದಂತೆ ನನ್ನ ತಂದೆ ವಾಂ’ತಿ ಮಾಡಲು ಶುರು ಮಾಡಿದ್ರು. ಬಳಿಕ ನನ್ನ ಅಣ್ಣ ಕೂಡ ವಾಂ’ತಿ ಮಾಡಿದ. ನನ್ನಪ್ಪ ಕಲಿಸಿ ತಂದಿದ್ದ ಊಟವನ್ನ ನಾನು ತಿಂದಿದ್ದ ಕಾರಣ ನನಗೂ ಕೂಡ ವಾಂ’ತಿಯಾಯಿತು. ನಾವು ಮೂರೂ ಜನ ಬ’ದುಕಬಾರದೆಂಬ ಕಾರಣಕ್ಕೆ ನನ್ನ ತಂದೆ ಈ ರೀತಿ ಮಾಡಿದ್ದರು ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ ದಿವ್ಯ ಸುರೇಶ್. ಇನ್ನು ದಿವ್ಯ ಅವರ ಜೀವನದ ಕಹಿ ಘಟನೆಯನ್ನ ಕೇಳಿ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದ್ದಾರೆ.