ಇದ್ದಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರಹೋದ ದಿವ್ಯಾ !ಎಲ್ಲಾ ಮುಗಿತು ಎಂದು ಗಳಗಳನೆ ಅತ್ತ ಅರವಿಂದ್..ಹಾಗಿದ್ದೇನು ಗೊತ್ತಾ ?

Entertainment Uncategorized

ನಮಸ್ತೇ ಸ್ನೇಹಿತರೇ, ಲವಲವಿಕೆಯಿಂದ ಟಾಸ್ಕ್ ಮಾಡಿಕೊಂಡು ಅರವಿಂದ್ ಅವರ ಜೊತೆ ಓಡಾಡಿಕೊಂಡಿದ್ದ ಬಿಗ್ ಬಾಸ್ ೮ರ ಸ್ಪರ್ಧಿ ದಿವ್ಯಾ ಉರುಡುಗ ಅವರು ಇದ್ದಕಿದ್ದಂತೆ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್ ಮನೆಯಲ್ಲಿ ಪ್ರಬಲ ಸ್ಪರ್ಧಿ ಎನಿಸಿದ್ದ ದಿವ್ಯಾ ಉರುಡುಗ ಅವರು ಇದ್ದಕಿದ್ದಂತೆ ಬಿಗ್ ಮನೆಯಿಂದ ಆಚೆ ಬಂದಿರುವುದು ವೀಕ್ಷಕರು ಮತ್ತು ಅಲ್ಲಿನ ಸ್ಪರ್ಧಿಗಳಲ್ಲಿ ಶಾಕ್ ಗೆ ಕಾರಣವಾಗಿದೆ. ಹೌದು, ಇದ್ದಕ್ಕಿಂದಂತೆ ದಿವ್ಯಾ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು ಬಿಗ್ ಬಾಸ್ ಮನೆಯಲ್ಲಿಯೇ ವೈದ್ಯರು ಪರೀಕ್ಷೆ ನಡೆಸಿದ್ದರು. ಆದರೆ ರಾತ್ರಿಯಾದರೂ ದಿವ್ಯಾ ಅವರು ಬಿಗ್ ಬಾಸ್ ಮನೆ ಒಳಗಡೆ ಮರಳಿ ಬರಲೇ ಇಲ್ಲ. ಏನಾಯಿತು ಎಂಬ ಟೆನ್ಷನ್ ಉಳಿದ ಸ್ಪರ್ಧಿಗಳಲ್ಲಿ ಶುರುವಾಗಿದ್ದರೆ, ಸದಾ ದಿವ್ಯಾ ಅವರ ಜೊತೆಗೆ ಇರುತ್ತಿದ್ದ ಅರವಿಂದ್ ಅವರ ಮುಖವನ್ನ ನೋಡಲಿಕ್ಕೆ ಆಗುತ್ತಿರಲಿಲ್ಲ.

ಇನ್ನು ಬೆಳಿಗ್ಗೆ ಆಗುತ್ತಿದಂತೆ ದಿವ್ಯಾ ಉರುಡುಗ ಅವರ ಬಟ್ಟೆಗಳನ್ನ ತಂದು ಸ್ಟೋರ್ ರೂಮ್ ನಲ್ಲಿ ಇಡಿ ಎಂದು ಬಿಗ್ ಬಾಸ್ ನಿಂದ ಆದೇಶ ಬಂತು. ಇನ್ನು ಬಿಗ್ ಬಾಸ್ ಆದೇಶದಿಂದ ದಿವ್ಯಾ ಅವರು ಮತ್ತೆ ಬಿಗ್ ಬಾಸ್ ಮನೆಗೆ ಮರಳಿ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ. ಇನ್ನು ಕೆಪಿ.ಅರವಿಂದ್ ಅವರ ಬಗ್ಗೆ ಹೇಳುವ ಹಾಗೆ ಇಲ್ಲ. ಪುಟ್ಟ ಮಗುವಿನಂತೆ ಕಣ್ಣೀರು ಹಾಕಿದ್ದಾರೆ. ಯಾವಾಗಲು ಜೊತೆಗೆ ದಿವ್ಯಾ ಉರುಡುಗ ಈಗ ಇಲ್ಲಿಲ್ಲ. ಅವಳಿಲ್ಲದೆ ನಾನು ಇಲ್ಲಿ ಇರಲಿಕ್ಕೆ ಆಗುತ್ತಿಲ್ಲ. ಇನ್ನು ಎಲ್ಲವು ಮುಗಿತು ಎಂದು ಅರವಿಂದ ಕಣ್ಣೀರಿಟ್ಟಿದ್ದಾರೆ. ಜೊತೆಗೆ ತಾವೇ ಖುದ್ದಾಗಿ ದಿವ್ಯಾ ಅವರ ಬಟ್ಟೆ, ವಸ್ತುಗಳನ್ನೆಲ್ಲಾ ಪ್ಯಾಕ್ ಮಾಡಿ ಸ್ಟೋರ್ ರೂಮ್ ಗೆ ಇಟ್ಟು ಬಂದಿದ್ದಾರೆ.

ಇನ್ನು ಈಗಾಗಲೇ ೬೬ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬೆಂಗಳೂರಿನಲ್ಲಿ ಕೊ’ರೋನಾ ಹೆಚ್ಚಾಗಿರುವ ಕಾರಣ ಒಂದು ವೇಳೆ ದಿವ್ಯಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಕೂಡ ಕ್ವಾರಂಟೈನ್ ಆಗಲೇಬೇಕಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಕೇವಲ ಮೂರು ವಾರಗಳಷ್ಟೇ ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಕಾರಣ ಮತ್ತೆ ದಿವ್ಯಾ ಉರುಡುಗ ಅವರು ಮತ್ತೆ ಬಿಗ್ ಬಾಸ್ ಮನೆಗೆ ಮರುಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಯಾವಾಗಲು ದಿವ್ಯಾ ಅವರ ಜೊತೆಗೆ ಇರುತ್ತಿದ್ದ ಅರವಿಂದ್ ಅವರಂತೂ ಕುಗ್ಗಿ ಹೋಗಿದ್ದು ಸ್ಫರ್ಧಿಗಳು ಅವರನ್ನ ಸಮಾಧಾನ ಪಡಿಸಿದ್ದಾರೆ. ಅರವಿಂದ್ ಅವರು ಬಿಗ್ ಮನೆಯಿಂದ ಹೊರಬಂದ ಮೇಲೆ ದಿವ್ಯಾ ಉರುಡುಗ ಅವರ ಜೊತೆ ಮದುವೆಯಾಗಲಿದ್ದಾರಾ ಎಂಬುದನ್ನ ಕಾದು ನೋಡಬೇಕಾಗಿದೆ.