ಬಿಗ್ ಬಾಸ್ ಮನೆಯ ಕ್ಯೂಟ್ ಗರ್ಲ್ ದಿವ್ಯಾ ಉರುಡುಗ ಅವರ ರಿಯಲ್ ಲೈಫ್ ಹೇಗಿದೆ ನೋಡಿ..

Entertainment

ಸ್ನೇಹಿತರೇ, ಈ ಸಲದ ಬಿಗ್ ಬಾಸ್ 8ರ ಸ್ಪರ್ಧಿಗಳಲ್ಲಿ ನಟಿ ದಿವ್ಯಾ ಉರುಡುಗ ಕೂಡ ಒಬ್ಬರು. ತನ್ನ ತಂದೆ ಕೊಟ್ಟಿದ್ದ ಉಂಗುರವನ್ನ ಬೈಕರ್ ಅರವಿಂದ್ ಅವರ ಕೈಗೆ ತೊಡಿಸಿ ಸಾಕಷ್ಟು ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದಾರೆ. ಬಿಗ್ ಬಾಸ್ ನ ಲವ್ ಬರ್ಡ್ಸ್ ಆಗಿರುವ ಇವರಿಬ್ಬರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ದಿವ್ಯಾ ಉರುಡುಗ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳಬೇಕಾದರೆ..ಮೂಲತಃ ಶಿವಮೊಗ್ಗದವರಾದ ದಿವ್ಯಾ ಉರುಡುಗ ೧೬ ಜನವರಿ ೧೯೯೦ರಂದು ಅವರಿಗೀಗ ೩೧ ವರ್ಷ ವಯಸ್ಸು.

ಕೆಲ ಸಿನಿಮಾಗಳಲ್ಲಿ ನಟಿಸಿರುವ ದಿವ್ಯಾ ಉರುಡುಗ ಅವರಿಗೆ ಅಷ್ಟಾಗಿ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿಲ್ಲ. ತಂದೆ ತಾಯಿಯ ಮುದ್ದಿನ ಮಗಳಾಗಿರುವ ದಿವ್ಯಾ ಉರುಡುಗ ಅವರಿಗೆ ಒಬ್ಬ ಸಹೋದರ ಕೂಡ ಇದ್ದಾನೆ. ಇನ್ನು ದಿವ್ಯಾ ಅವರು ಬಿಗ್ ಬಾಸ್ ಗೆ ಬರಲು ಕಾರಣ ಇದೆಯಂತೆ. ಹೌದು, ಕಲಾವಿದೆಯಾಗಿದ್ದರು ಕಿರುತೆರೆ, ಬೆಳ್ಳಿತೆರೆಯಲಿ ಅಷ್ಟಾಗಿ ಅವಕಾಶಗಳು ಸಿಗದ ಕಾರಣ ಬಿಗ್ ಬಾಸ್ ಗೆ ಬಂದಿದ್ದರಂತೆ ದಿವ್ಯಾ. ಬಿಗ್ ಬಾಸ್ ಗೆ ಬಂದು ಹೋದ ಮೇಲೆ ಎಷ್ಟೋ ಕಲಾವಿದರಿಗೆ ಸಿನಿಮಾ ರಂಗದಲ್ಲಿ ಅವಕಾಶಗಳು ಹುಡುಕಿಕೊಂಡು ಬಂದಿವೆ. ಹಾಗಾಗಿ ತಮಗೂ ಕೂಡ ಬಿಗ್ ಬಾಸ್ ನಿಂದ ಹೊರಗೆ ಹೋದ ಮೇಲೆ ಅವಕಾಶಗಳು ಸಿಗಬಹುದು ಎಂಬುದು ಅವರ ಅನಿಸಿಕೆಯಂತೆ.

ಇನ್ನು ಈ ಸಲದ ಬಿಗ್ ಬಾಸ್ ನ ಲವ್ ಬರ್ಡ್ಸ್ ಜೋಡಿಗಳಲ್ಲಿ ದಿವ್ಯಾ ಉರುಡುಗ ಮತ್ತು ಕೆಪಿ. ಅರವಿಂದ್ ಜೋಡಿ ಕೂಡ ಒಂದು. ನೀವು ನೋಡಿದಂತೆ ಇವರಿಬ್ಬರು ಒಬ್ಬರೊನ್ನೊಬ್ಬರು ಬಿಗ್ ಬಾಸ್ ಮನೆಯಲಿ ಬಿಟ್ಟಿರುವುದು ತುಂಬಾ ಕಡಿಮೆ. ಇನ್ನು ನೀವು ನೋಡಿದಂತೆ ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್ ಮನೆಯಲ್ಲಿ ತನ್ನ ತಂದೆ ಕೊಟ್ಟಿದ್ದ ಉಂಗುರವನ್ನ ಕೆಪಿ.ಅರವಿಂದ್ ಅವರಿಗೆ ತೊಡಿಸಿ ನನ್ನ ಲೈಫ್ ಪೂರ್ತಿ ನೀನು ನನ್ನ ಜೊತೆಗಿರಬೇಕು ಎಂದು ದಿವ್ಯಾ ಉರುಡುಗ ಅರವಿಂದ್ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಇದನ್ನ ನೋಡಿದ ಪ್ರೇಕ್ಷಕರು ಇವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಮದುವೆಯಾಗುವುದು ಖಂಡಿತ ನೆಡು ಹೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲಿ ಪ್ರೇಮಿಗಳಾಗಿರುವ ಇವರು ಹೊರಗಡೆ ಬಂದ ಮೇಲೆ ಮದುವೆಯಾಗುತ್ತಾರಾ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.