ನನ್ನ ಮಗನ ಹೆಸರಿನಲ್ಲಿ ಎಲೆಕ್ಷನ್ ಗೆ ನಿಂತ್ರೆ ನಾನು ಸುಮ್ಮನಿರೋದಿಲ್ಲ ! ಸೊಸೆಯ ಮೇಲೆ ಕಿಡಿಕಾರಿದ DK ರವಿ ಅವರ ತಾಯಿ..

News
Advertisements

ರಾಜರಾಜೇಶ್ವರಿ ನಗರದ ಉಪಚುನಾವಣೆ (ಬೈ ಎಲೆಕ್ಷನ್) ಸಮರ ಕಾವೇರಿದ್ದು ಕೋಲಾರ ಜಿಲ್ಲೆಯ ಖಡಕ್ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಚುನಾವಣೆ ಕಣಕ್ಕಳಿಯಲಿದ್ದಾರೆ. ಇನ್ನು ಅವರಿಗೆ ಕಾಂಗ್ರೆಸ್ ಪಕ್ಷದ ಕಡೆಯಿಂದ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಆದರೆ ಇದೆ ವೇಳೆ DK ರವಿ ಅವರ ತಾಯಿ ಹಾಗೂ ಅವರ ಕುಟುಂಬದಿಂದ ಇದಕ್ಕೆ ಬಾರಿ ವಿರೋಧ ವ್ಯಕ್ತವಾಗಿದೆ.

Advertisements

ಹೌದು, ಕೋಲಾರ ಜಿಲ್ಲೆಯ ನಿಷ್ಠಾವಂತ ಹಾಗೂ ಖಡಕ್ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದವರು ಡಿಕೆ.ರವಿ. ಕೋಲಾರದ ಜನ ಎಂದೆಂದಿಗೂ ಡಿಕೆ ರವಿಯವರ ಹೆಸರು ಮರೆಯುವುದಿಲ್ಲವೇನೋ ಎಂಬಷ್ಟರ ಮಟ್ಟಿಗೆ ಜನರ ಪ್ರೀತಿ ಗಳಿಸಿದ್ದ ಅಧಿಕಾರಿ ಇವರು. ಇನ್ನು ಇದೇ ಹೆಸರಿನ ಆಧಾರದ ಮೇಲೆ ಅವರ ಪತ್ನಿ ಕುಸುಮಾ ಆರ್.ಆರ್.ನಗರದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾತಿದೆ.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಡಿಕೆ ರವಿಯವರ ತಾಯಿ ಗೌರಮ್ಮನವರು ನನ್ನ ಮಗನ ಹೆಸರನ್ನ ಬಳಸಿಕೊಂಡು ಚುನಾವಣೆಗೆ ಸ್ಪರ್ಧಿಸಲು ನಾವು ಬಿಡುವುದಿಲ್ಲ. ನನ್ನ ಮಗನ ಜೊತೆಯೇ ಆಕೆಯೂ ಹೋಗಿಬಿಟ್ಟಿದ್ದಾಳೆ ಎಂದು ನಾವು ಅಂದುಕೊಂಡಿದ್ದೇವೆ. ನನ್ನ ಸೊಸೆ ಕುಸುಮಾ ನನ್ನ ಮಗನ ಹಣದಲ್ಲಿ ನನ್ನ ಕಷ್ಟಕ್ಕೆ ಒಂದು ರೂಪಾಯಿ ಸಹ ಕೊಡಲಿಲ್ಲ. ನನ್ನ ಮಗನ ಅಂತಿಮ ಸಂಸ್ಕಾರ ನಡೆದ ದಿನ ಮಣ್ಣಲ್ಲಿ ಹಾಕಿ ಹೋದವಳು ಇವತ್ತಿನವರೆಗೂ ಇತ್ತ ಕಡೆ ತಿರುಗಿ ಸಹ ನೋಡಿಲ್ಲ. ಹಾಗಾಗಿ ನನ್ನ ಮಗ ಡಿಕೆ.ರವಿ ಹೆಸರು ಹೇಳಿಕೊಂಡು ಎಲೆಕ್ಷನ್ ಗೆ ಸ್ಪರ್ಧಿಸಿದಲ್ಲಿ ನಾವು ಸುಮ್ಮನಿರುವುದಿಲ್ಲ ಎಂದು ಸೊಸೆ ಕುಸುಮಾ ಮೇಲೆ ಕಿಡಿಕಾರಿದ್ದಾರೆ.