ಅದ್ದೂರಿಯಾಗಿ ನೆರವೇರಿದ ಡಿಕೆ ಶಿವಕುಮಾರ್ ಮಗಳ ಹಳದಿ ಶಾಸ್ತ್ರ..ಇಲ್ಲಿದೆ ನೋಡಿ ಫೋಟೋಸ್..

Kannada News

ಪ್ರೇಮಿಗಳ ದಿನವಾದ ಫೆಬ್ರುವರಿ ೧೪ರಂದು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಅವರ ಮೊಮ್ಮಗನಾಗಿರುವ ಅಮರ್ತ್ಯ ಹೆಗ್ಡೆ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹೌದು, ಈಗಾಗಲೇ ಎರಡು ಕುಟುಂಬಗಳಲ್ಲಿ ವಿವಾಹ ಸಿದ್ದತೆಗಳು ಸಂಭ್ರಮದಿಂದ ನಡೆಯುತ್ತಿವೆ. ಇನ್ನು ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಮನೆಯಲ್ಲಿ ಹಳದಿ ಶಾಸ್ತ್ರದ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಕಾಫಿಕಿಂಗ್ ಸಿದ್ದಾರ್ಥ ಅವರ ಪುತ್ರನಾಗಿರುವ ಅಮರ್ತ್ಯ ಹೆಗ್ಡೆ ಹಾಗೂ ಐಶ್ವರ್ಯ ಅವರ ಮದುವೆ ಫೆಬ್ರುವರಿ ೧೪ರಂದು ಬೆಂಗಳೂರಿನ ಹೋಟೆಲ್ ಶೆರಟಾನ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇನ್ನು ಇಂದು ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಐಶ್ವರ್ಯಾ ಅವರ ಹಳದಿ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಡಿಕೆ ಸುರೇಶ್ ಅವರ ಕುಟುಂಬದವರು ಕೂಡ ಪಾಲ್ಗೊಂಡು ಶಾಸ್ತ್ರಗಳನ್ನ ನೆರವೇರಿಸಿದ್ದಾರೆ.

ಇನ್ನು ನಾಳೆ ಫೆಬ್ರುವರಿ ಹನ್ನೆರಡರಂದು ಸದಾಶಿವನಗರದ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಮೆಹಂದಿ ಶಾಸ್ತ್ರದ ಕಾರ್ಯಕ್ರಮ ನಡೆಯಲಿದೆ. ಬಳಿಕ ಎಣ್ಣೆ ಶಾಸ್ತ್ರದ ಕಾರ್ಯಕ್ರಮ ಫೆಬ್ರುವರಿ ೧೩ರಂದು ನಡೆಯಲಿದೆ. ಇನ್ನು ಪ್ರೆಸ್ಟೀಜ್ ಗಾಲ್ಫ್ ಶೈರ್ ನಲ್ಲಿ ಇದೆ ಫೆಬ್ರುವರಿ ೧೭ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಇದೆಲ್ಲದರ ಬಳಿಕ ಪ್ಯಾಲೇಸ್ ಗ್ರೌಂಡ್ ನಲ್ಲಿ ಫೆಬ್ರುವರಿ ೨೦ರಂದು ಬೀಗರ ಔತಣ ಕೂಟ ನಡೆಯಲಿದೆ ಎಂದು ಹೇಳಲಾಗಿದೆ.