ಟಿವಿಯಲ್ಲಿ ಮೊಟ್ಟ ಮೊದಲು ಪ್ರಸಾರವಾದ ಕನ್ನಡ ಸಿನಿಮಾ ಯಾವುದು ಗೊತ್ತಾ? ಆ ದಿನ ಕನ್ನಡಿಗರ ಸಂಭ್ರಮ ಹೇಗಿತ್ತು ಗೊತ್ತಾ ?

Cinema

ಸ್ನೇಹಿತರೇ, ಇಂದು ತಂತ್ರಜ್ನ್ಯಾನ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ನಲ್ಲಿಯೇ ಯಾವ ಸಿನಿಮಾ ಬೇಕೋ ನೋಡಬಹುದಾಗಿದೆ. ನೂರಾರು ಟಿವಿ ಚಾನೆಲ್ ಗಳಿವೆ. ಆದರೆ ಭಾರತದಲ್ಲಿ ಟಿವಿ ಆರಂಭವಾದಾಗ ಇದ್ದದ್ದು ಮಾತ್ರ ಒಂದೇ ಚಾನೆಲ್. ಅದುವೇ ದೂರದರ್ಶನ. ಡಿಡಿ ನ್ಯಾಷನಲ್ ಚಾನೆಲ್ ಎಂದೂ ಕೂಡ ಕರೆಯಲಾಗುತಿತ್ತು. ಇನ್ನು ಈ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದದ್ದು ಮಾತ್ರ ಹಿಂದಿ ಭಾಷೆಯ ನ್ಯೂಸ್ ಗಳು ಹಾಗೂ ಕಾರ್ಯಕ್ರಮಗಳು ಮಾತ್ರ. ಇನ್ನು ಭಾರತದಲ್ಲಿ ೧೯೫೯ರಲ್ಲಿ ಪ್ರಯೋಗಾತ್ಮಕವಾಗಿ ದೂರದರ್ಶನ ಪ್ರಸಾರ ಮಾಡಲಿತ್ತಾದರೂ, ಇದು ಪರಿಣಾಮಕಾರಿಯಾಗಿ ಪ್ರಸಾರವಾಗಿದ್ದು ಮಾತ್ರ ೧೯೭೦ರ ನಂತರದ ವರ್ಷಗಳಲ್ಲೇ..

ಹಿಂದಿ ಬಿಟ್ಟು ಬೇರೆ ಭಾಷೆಯ ಸುದ್ದಿ, ಕಾರ್ಯುಕ್ರಮಗಳು ಪ್ರಸಾರವಾಗುತ್ತಿದ್ದದ್ದು ಮಾತ್ರ ಅಪರೂಪದಲ್ಲಿ ಬಹಳ ಅಪರೂಪ. ಇನ್ನು ಭಾರತದಲ್ಲಿ ಟಿವಿ ಆರಂಭವಾದಾಗ ಟಿವಿಯಲ್ಲಿ ಪ್ರಸಾರವಾದ ಮೊಟ್ಟ ಮೊದಲ ಕನ್ನಡ ಸಿನಿಮಾ ಹಾಗೂ ಟಿವಿಯಲ್ಲಿ ಕನ್ನಡಿಗರು ಮೊಟ್ಟ ಮೊದಲು ನೋಡಿದ ಸಿನಿಮಾ ಯಾವುದು ಗೊತ್ತಾ.. ಹೌದು, ಈ ಕುತೂಹಲ ನಮ್ಮ ನಿಮ್ಮಲ್ಲಿ ಇದ್ದೆ ಇದೆ. ಹೌದು, ಟಿವಿಯಲ್ಲಿ ಮೊಟ್ಟ ಮೊದಲು ಕನ್ನಡಿಗರು ಕಣ್ಣುತುಂಬಿಕೊಂಡ ಮೊಟ್ಟ ಮೊದಲ ಕನ್ನಡ ಸಿನಿಮಾ ಡಾ. ರಾಜ್ ಕುಮಾರ್ ಅವರ ಸಿನಿಮಾ. 1981ರಲ್ಲಿ ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ರಾಜಣ್ಣ ಅವರು ನಟಿಸಿದ್ದ ಶಂಕರ್ ಗುರು ಚಿತ್ರವನ್ನ ಮೊತ್ತ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಇನ್ನು ಆ ಕಾಲಕ್ಕೆ ಮನೆಗಳಲ್ಲಿ ಟಿವಿಗಳು ಇದ್ದದ್ದು ಬಹಳ ಅಪರೂಪ.

ಇನ್ನು ಅಂತಹ ಕಾಲದಲ್ಲಿ ಹಳ್ಳಿ, ಪಟ್ಟಣಗಳಲ್ಲಿ ಟಿವಿಗಳಿದ್ದವರು ಟಿವಿಗಳನ್ನ ಹೊರಗಿಟ್ಟು ಅಣ್ಣಾವ್ರ ಸಿನಿಮಾವನ್ನ ಮೊದಲ ಬಾರಿಗೆ ಟಿವಿಗಳಲ್ಲಿ ನೋಡಿ ಸಂಭ್ರಮ ಪಟ್ಟರು..ರಾಜಣ್ಣ ನಮ್ಮ ಊರಿಗೆ ಬಂದು ಬಿಟ್ಟಿದ್ದಾರೆ ಎಂಬಷ್ಟರ ಮಟ್ಟಿಗೆ, ಟಿವಿಗಳಿಗೆ ಹಾರ ಹಾಕಿ, ಆರತಿ ಮಾಡಿ ಸಂಭ್ರಮಪಟ್ಟಿದ್ದರು. ದೂರದರ್ಶನ ಬಂದ ಬಳಿಕ 15 ಆಗಸ್ಟ್ 1991ರಂದು ಕನ್ನಡಿಗರಿಗಾಗಿ ಡಿಡಿ ಚಂದನ ಚಾನೆಲ್ ನ್ನ ಪ್ರಾರಂಭ ಮಾಡಲಾಯಿತು. ಬಳಿಕ ವಾರಕ್ಕೊಮ್ಮೆ ಅಂದರೆ ಪ್ರತಿ ಭಾನುವಾರದಂದು ಸಂಜೆ ೪ ಗಂಟೆಗೆ ಕನ್ನಡ ಸಿನಿಮಾಗಳು ಪ್ರಸಾರವಾಗಲು ಶುರುವಾಯಿತು. ಅಣ್ಣಾವ್ರ ಸಿನಿಮಾಗಳು ಸೇರಿದಂತೆ ಆಗಿನ ಸ್ಟಾರ್ ನಟರ ಸಿನಿಮಾಗಳು ವಾರೊಕ್ಕಮ್ಮೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದವು. 80 ಹಾಗೂ 90ರ ನಡುವೆ ಹುಟ್ಟಿದವರಿಗೆ ಗೊತ್ತು ವಾರೊಕ್ಕೊಮ್ಮೆ ಪ್ರಸಾರವಾಗುತ್ತಿದೆ ಸಿನಿಮಾದ ಮಜಾ.

ಇನ್ನು ವಾರ ಪೂರ್ತಿ ಕನ್ನಡದ ಸುದ್ದಿಗಳು ಸೇರಿದಂತೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳು ಡಿಡಿ ಚಂದನ ಟಿವಿಯಲ್ಲಿ ಪ್ರಸಾರವಾದವು. ಇನ್ನು ಹಳ್ಳಿಯಿಂದ ಪಟ್ಟಣದವರೆಗೆ ಡಿಡಿ ಚಂದನ ಬಹುಬೇಗ ಫೇಮಸ್ ಆಗಲು ಜನರಿಗೆ ತಲುಪಲು ಪ್ರಮುಖ ಕಾರಣ ಅಣ್ಣಾವ್ರ ಅವರು ನಟಿಸಿದ ಸಿನಿಮಾಗಳು. ಬಳಿಕ ಕಾಲ ಬದಲಾದಂತೆ ನೂರಾರು ಚಾನೆಲ್ ಗಳು ಬಂದಿವೆ. ಆದರೆ ಒಂದೇ ಚಾನೆಲ್ ಇದ್ದರೂ ಸಿಗುತ್ತಿದ್ದ ಮಜಾ ಈಗ ಸಿಗುತ್ತಿಲ್ಲ..80 ಹಾಗೂ 90ರ ದಶಕದಲ್ಲಿ ಹುಟ್ಟಿರುವವರು..ಹೇಗಿತ್ತು ಆಗ ಟಿವಿಯಲ್ಲಿ ಸಿನಿಮಾ ನೋಡುತ್ತಿದ್ದ ಅನುಭವ ಕಾಮೆಂಟ್ ಮಾಡಿ ತಿಳಿಸಿ..