ಬೋಟ್ ಗೆ ಚಾಲೆಂಜ್ ಹಾಕಿದ ಡಾಲ್ಫಿನ್ಸ್ ! ಬೋಟ್ ವರ್ಸಸ್ ಡಾಲ್ಫಿನ್ಸ್ ಜುಗಲ್ ಬಂಧಿ ನೋಡಿದ್ರೆ ಅಚ್ಚರಿ ಪಡ್ತೀರಾ..

Advertisements

ಡಾಲ್ಫಿನ್, ಅವುಗಳ ಈಜಾಟ, ಅಂದ ನೋಡೋಕೆ ಎಷ್ಟೊಂದು ಚೆಂದ ಅಲ್ವಾ..? ಸಮುದ್ರದಲ್ಲಿ ಅವುಗಳ ಹಾರಾಟ ನೋಡ್ತಾ ಇದ್ರೆ, ಒಂದು ಕ್ಷಣ ನಮ್ಮನ್ನೇ ನಾವು ಮೈ ಮರೆತು ಬಿಡ್ತೇವೆ. ಡಾಲ್ಫಿನ್ ಗಳನ್ನ ನೋಡಲೆಂದೇ ಅನೇಕ ಪ್ರವಾಸಿಗಳು ಸಮುದ್ರಯಾನ ಕೈಗೊಳ್ತಾರೆ. ಹೀಗೆ, ಕ್ಯಾಲಿಫೋರ್ನಿಯಾದ ನ್ಯೂ ಫೋಟ್೯ ಬೀಚ್ ಸಮೀಪದಲ್ಲಿ ಪ್ರಾವಾಸಿಗರ ಬೋಟ್ ಜೊತೆಗೆ ಅಂದಾಜು 400 ಡಾಲ್ಫಿನ್ ಗಳ ಹಿಂಡು ಸ್ಪರ್ಧೆಗೆ ಇಳಿದು ಬಿಟ್ಟಿವೆ. ಬೋಟ್ ಚಲಿಸುವ ದಿಕ್ಕಿನಲ್ಲೇ ಡಾಲ್ಫಿನ್ ಗಳ ಹಿಂಡು ಈಜಲಾರಂಭಿಸಿದ್ದು, ಈ ದೃಶ್ಯ ಎಂತವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕ್ಯಾಲಿಫೋರ್ನಿಯಾದ ನ್ಯೂ ಫೋಟ್೯ ಬೀಚ್ ಸಮೀಪದಲ್ಲಿ ಈ ದೃಶ್ಯ ಸೆರೆ ಹಿಡಿಯಲಾಗಿದ್ದು, ಅಲ್ಲಿಗೆ ಹೋದ ಪ್ರವಾಸಿಗರಿಗೆ ತಿಮಿಂಗಿಲಗಳನ್ನು ತೋರಿಸುವ ಪ್ರವಾಸಿ ಸಂಸ್ಥೆ ವೇಲ್ಸ್ ಈ ವಿಡಿಯೋವನ್ಬು ಮೊದಲು ಪೋಸ್ಟ್ ಮಾಡಿದೆ.

[widget id=”custom_html-4″]

Advertisements

ಸುಮಾರು 31 ಸೆಕೆಂಡ್ ಗಳ ಅವಧಿಯ ಈ ವಿಡಿಯೋದಲ್ಲಿ ಸಮುದ್ರದಲ್ಲಿನ ತಿಮಿಂಗಿಲಗಳನ್ನ ನೋಡಲೇಂದೆ ಬೋಟ್ ನಲ್ಲಿ ತೆರಳಿದ ಪ್ರವಾಸಿಗರಿಗೆ ಡಾಲ್ಫಿನ್ ಗಳ ಗುಂಪೇ ದರ್ಶನ ನೀಡಿದೆ. ಇತ್ತೀಚೆಗೆ ಉದ್ಯಮಿ ಹಶ್೯ ಗೊಯೆಂಕಾ ಅವರು ಹಂಚಿಕೊಂಡ ವಿಡಿಯೋ ಇದಾಗಿದ್ದು, ಭಾರೀ ವೈರಲ್ ಆಗಿದೆ. ಸಮುದ್ರದಲ್ಲಿ ಜನರನ್ನು ತುಂಬಿಸಿಕೊಂಡ ಪ್ರವಾಸಿ ಬೋಟ್ ಗಳ ಜೊತೆ ಡಾಲ್ಫಿನ್ ಗುಂಪು ಸ್ಪರ್ಧೆಗಿಳಿದ ದೃಶ್ಯ ಅನೇಕರ ಕಣ್ಮನ ಸೆಳೆದಿದೆ. ಈ ವಿಡಿಯೋ ಬಗ್ಗೆ ಹೇಳಿಕೊಂಡಿರುವ ಉದ್ಯಮಿ ಹಶ್೯ ಗೊಯೆಂಕಾ ಅವರು, ಇದು ನಿಜವಾದ ರೇಸ್. ನಾನು ಇದರಲ್ಲಿ ಭಾಗವಹಿಸೋಕೆ ನಿಜವಾಗಿಯೂ ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು, ನಿಜಕ್ಕೂ ಇದೊಂದು ಮೈ ನವಿರೇಳಿಸುವ ದೃಶ್ಯ.

[widget id=”custom_html-4″]

ಸಾಗರದಲ್ಲೇ ಹುಟ್ಟಿ ಬೆಳೆದ ಸಹಜ ಈಜುಪಟುಗಳು, ಮಾನವ ನಿರ್ಮಿತ ಬೋಟ್ ಗೆ ಸವಾಲೊಡ್ಡುವ ವಿಡಿಯೋವನ್ನ ನೋಡುವುದಕ್ಕೆ ಎರಡು ಕಣ್ಣು ಸಾಲದು. ಎಷ್ಟೇ ಒತ್ತಡಗಳಿದ್ದರೂ ಈ ವಿಡಿಯೋ ನೋಡಿದರೆ, ಮನಸ್ಸು ಹಗುರಾಗುತ್ತದೆ ಎಂತೆಲ್ಲಾ ಹೇಳಿಕೊಂಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ಸಮಯ ಕಳೆಯುವುದಕ್ಕೆ,‌ ಮನಸ್ಸನ್ನು ಹಗುರಾಗಿಸುವುದಕ್ಕೆ ಸಹಾಯ ಮಾಡುತ್ತವೆ. ಹೆಮ್ಮಾರಿ ಕೊರೊನಾ ಸಮಯದಲ್ಲೂ ಸದಾ ಚಿಂತೆ, ಭಯ ಆವರಿಸಿಕೊಂಡೇ ಇರುವುದರಿಂದ ಮನಸ್ಸನ್ನು ಹಗುರಗೊಳಿಸುವ ವಿಚಾರಗಳ ಅಗತ್ಯ ಹೆಚ್ಚಿದೆ. ಅದರಲ್ಲೂ ಪ್ರಕೃತಿ, ಪ್ರಾಣಿ, ಪಕ್ಷಿ, ಚಿಕ್ಕಮಕ್ಕಳ ವಿಡಿಯೋಗಳು ಮನಸ್ಸಿಗೆ ಹಿತವೆನಿಸುತ್ತವೆ. ವಕ್೯ ಫ್ರಂ ಹೋಮ್ ಸಮಯದಲ್ಲೂ ಆಗಾಗ ಇಂತಹ ವಿಡಿಯೋಗಳತ್ತ ಕಣ್ಣು ಹಾಯಿಸುತ್ತಿದ್ದರೆ, ಒತ್ತಡವೂ ಕಡಿಮೆಯಾಗುತ್ತದೆ. ಏನಂತೀರಾ..?