ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಹೆಚ್ಚಾಗುತ್ತಲೇ ಇದೆ. ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಕೊರೋನಾಗೆ ವ್ಯಾಕ್ಸಿನ್ ಕಂಡುಹಿಡಿಯುವ ಸಲುವಾಗಿ ಸಂಶೋಧನೆಗಳನ್ನ ಮಾಡಲಾಗುತ್ತಿದೆ. ಇನ್ನು ನಮ್ಮ ಕರ್ನಾಟಕದ ಆಯುರ್ವೇದ ತಜ್ಞರಾದ ಡಾ.ಗಿರಿಧರ್ ಕಜೆ ಅವರು ಕಂಡುಹಿಡಿದಿರುವ ಕೊರೋನಾ ವಿರುದ್ದದ ಆಯುರ್ವೇದ ಔಷಧಿಯನ್ನ ಈಗಾಗಲೇ ವಿಕ್ಟೊರಿಯಾ ಆಸ್ಪತ್ರೆಯಲ್ಲಿರುವ 10 ಜನ ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದ್ದು ಯಶಸ್ವಿ ಸಹ ಆಗಿದೆ.

ಆದರೆ ಇದೆ ಔಷಧಿಯನ್ನ ತಯಾರು ಮಾಡಿ ಸೋಂಕಿತರಿಗೆ ಕೊಡುವಲ್ಲಿ ನಿಧಾನವಾಗುತ್ತಿರುವುದೇಕೆ ಎಂಬುದೇ ಈಗ ಹಲವರ ಪ್ರಶ್ನೆಯಾಗಿದೆ. ಆದರೆ ಇದರ ನಡುವೆಯೇ ಡಾ ಕಜೆ ಅವರು ಮತ್ತೊಂದು ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ. ಹೌದು, ಸೋಂಕು ಶುರುವಾದ ಮೇಲೆ ಕೆಲವೊಂದು ಟೆಸ್ಟ್ ಗಳು, ಚಿಕಿತ್ಸೆ ಎಂದು ಜನರು ಕಷ್ಟಪಡುವುದನ್ನ ನಾವು ನೋಡಿರುತ್ತೇವೆ. ಆದರೆ ಖಾಯಿಲೆಯೇ ಬರದಂತೆ ತಡೆದುಬಿಟ್ಟರೆ. ಹೌದು, ಸೋಂಕು ಹರಡದಂತೆ ತಡೆಯಲು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಲುವಾಗಿ ರಾಜ್ಯದ ಪ್ರತೀ ಮನೆ ಮನೆಗೂ ಫ್ರೀ ಆಗಿ ಆಯುರ್ವೇದದ ಕಿಟ್ ನೀಡಲು ನಿರ್ಧಾರ ಮಾಡಿದ್ದಾರೆ ಡಾ.ಕಜೆಯವರು.
ಇನ್ನು ಆಯುರ್ವೇದದ ಕಿಟ್ ನಲ್ಲಿ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಶಕ್ತಿ ವರ್ಧಕ ಮಾತ್ರೆಗಳಿದ್ದು ಸೋಂಕು ಬರದಂತಯೇ ತಡೆಯಲು ಸಹಕಾರಿಯಾಗಿದೆ ಎಂದು ಹೇಳಲಾಗಿದೆ. ಇನ್ನ್ನು ಇದನ್ನ ಮೊದಲನೇ ಹಂತವಾಗಿ ಶಿವಮೊಗ್ಗ ಜಿಲ್ಲೆಯಿಂದ ಚಾಲನೆ ಮಾಡಲಾಗುತ್ತಿದ್ದು ಜುಲೈ 29 ರಂದು ಜಿಲ್ಲೆಯಾದ್ಯಂತ ಜನರಿಗೆ ಉಚಿತವಾಗಿ ಆಯುರ್ವೇದ ಕಿಟ್ ನ್ನ ವಿತರಿಸಲಿದ್ದಾರೆ. ಇನ್ನು ಈ ಆಯುರ್ವೇದದ ಕಿಟ್ ನ್ನ ಪಡೆದುಕೊಳ್ಳುವವರು ಆಧಾರ್ ಕಾರ್ಡ್ ಜೆರಾಕ್ಸ್ ನ್ನ ನೀಡಬೇಕಾಗಿದ್ದು ಶಿವಮೊಗ್ಗ ಜಿಲ್ಲೆಯಾದ್ಯಂತ ವಿತರಣೆಗೆ ಮಹಾನಗರ ಪಾಲಿಕೆ ಸದಸ್ಯರು ಸಹಕರಿಸಲಿದ್ದಾರೆ ಎಂದು ಸ್ವತಃ ಕೆಎಸ್.ಈಶ್ವರಪ್ಪನವರು ಹೇಳಿದ್ದಾರೆ.