ನಿಜಕ್ಕೂ ರಾಜಣ್ಣ ಎಷ್ಟು ಸರಳತೆಯಿಂದ ಇರುತ್ತಿದ್ದರು ಗೊತ್ತೇ.! ಕೋಟಿ ವೀಕ್ಷಣೆ ಪಡೆದ ಈ ವಿಡಿಯೋ ನೀವೂ ನೋಡಿ..

Cinema

ಸ್ನೇಹಿತರೆ ವರ ನಟ ಡಾಕ್ಟರ್ ರಾಜಕುಮಾರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮುಂಬರುವ ಪೀಳಿಗೆಗೂ ಕೂಡ ಅಣ್ಣಾವ್ರು ಅವರು ಯಾರು ಎಂಬುದು ತಿಳಿಯುವಂತೆ ಅವರ ಕಾರ್ಯಸಾಧನೆ ಇಡೀ ಜಗತ್ತಿಗೇ ಪಸರಿಸಿದೆ. ಹಾಗೆ ಸಿನಿಮಾರಂಗದಲ್ಲಿ ಅವರ ಕೊಡುಗೆ ತುಂಬಾನೇ ಇದೆ. ರಾಜ್ ಕುಮಾರ್ ಅವರ ಫ್ಯಾಮಿಲಿ ಅಂದ್ರೆ ಒಂದು ಗೌರವ, ಅವರ ಮನೆತನದ ಬಗ್ಗೆ ಎಲ್ಲಿಲ್ಲದ ಪ್ರೀತಿ, ಎಲ್ಲವೂ ಕೂಡ ಅಭಿಮಾನಿಗಳು ಅವರಿಗೆ ನೀಡಿದ್ದಾರೆ. ಹೌದು ಡಾಕ್ಟರ್ ರಾಜ್ ಕುಮಾರ್ ಕೂಡ ಜೀವನದಲ್ಲಿ ತುಂಬಾ ಸರಳತೆ ವ್ಯಕ್ತಿತ್ವವನ್ನ ಹೊಂದಿದವರು. ರಾಜ್ ಕುಮಾರ್ ಅವರ ಬಗ್ಗೆ ಹೇಳಲು ಪದಗಳೇ ಇಲ್ಲ. ಅಷ್ಟು ಒಳ್ಳೆಯತನದಿಂದ ಜೀವನ ಸಾಗಿಸಿದವರು.

ನಟ ರಾಜ್ ಕುಮಾರ್ ಅವರು ಕನ್ನಡ ಸಿನಿಮಾರಂಗಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ. 205 ಚಿತ್ರಗಳಲ್ಲಿ ಅಭಿನಯಿಸಿ ತುಂಬಾನೇ ದೊಡ್ಡದಾದ ಅಭಿಮಾನಿಯ ಬಳಗ ಗಳಿಸಿಕೊಂಡಿದ್ದವರು. ರಾಜಕುಮಾರ್ ಅವರಿಗೆ ಐದು ಮಕ್ಕಳಿದ್ದು ಶಿವಣ್ಣ, ರಾಘಣ್ಣ, ಅಪ್ಪು, ಲಕ್ಷ್ಮಿ ಹಾಗೂ ಪೂರ್ಣಿಮಾ. ಹೌದು ರಾಜ್ ಕುಮಾರ್ ಅವರು ಹುಟ್ಟಿದ್ದು 1929 ಏಪ್ರಿಲ್ 24ರಂದು. ಜನಿಸಿದ್ದು ಗಾಜನೂರಿನಲ್ಲಿ. ಇವರ ಮೊದಲ ಹೆಸರು ಸಿಂಗನಲ್ಲೂರ್ ಪುಟ್ಟಸ್ವಾಮಯ್ಯ ಮುತ್ತುರಾಜ್. ರಾಜಣ್ಣ ಎಂಟನೇ ವರ್ಷದವರಿದ್ದಾಗಲೇ ಶಾಲೆ ಬಿಟ್ಟು ನಟನೆ ಮಾಡಲು ಶುರುಮಾಡುತ್ತಾರೆ. 25 ವರ್ಷದವರೆಗೆ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದಾದ ನಂತರ ರಾಜಕುಮಾರ್ ಅವರು ತಿರುಗಿ ಮತ್ತೆ ನೋಡುವುದೇ ಇಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಾರೆ. ಹೌದು ಡಾಕ್ಟರ್ ರಾಜ್ ಕುಮಾರ್ ಅವರು ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೇ, ಇಡೀ ಸಮಾಜಕ್ಕೆ ಕನ್ನಡ ಜನತೆಗೆ ಏನೆಲ್ಲ ಕೊಡುಗೆ ಅವರಿಂದ ನೀಡಬಹುದಿತ್ತು ಅದನ್ನೆಲ್ಲ ಕೊಟ್ಟು ಹೋಗಿದ್ದಾರೆ. ಕನ್ನಡ ಸಿನಿಮಾರಂಗದ ಅಭಿಮಾನಿಗಳ ಜೊತೆ ಸರಳತೆಯಿಂದ ಇರುತ್ತಿದ್ದ ನಮ್ಮ ರಾಜಣ್ಣ ಅವರು ಒಂದು ಬಾರಿ ಬೆಂಗಳೂರಿನ ಏರ್ಪೋರ್ಟಿಗೆ ಬಂದಿದ್ದರು. ಆಗ ಅವರ ಅಭಿಮಾನಿಗಳು ರಾಜಣ್ಣ ಅವರನ್ನು ಕಂಡು ಮಾತನಾಡಿಸಲು ಬಂದಿದ್ದರಂತೆ. ಆಗ ರಾಜಣ್ಣ ಎಷ್ಟು ಸರಳತೆಯಿಂದ ಅಭಿಮಾನಿಗಳ ಜೊತೆ ಮಾತನಾಡಿದ್ದರು ಎಂದು ಇದೀಗ ಇಲ್ಲೊಂದು ವಿಡಿಯೋ ಮೂಲಕ ಕಂಡು ಬಂದಿದೆ.

ಹೌದು ರಾಜಣ್ಣ ಅವರ ಈ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದ್ದು ಕೋಟಿ ವೀಕ್ಷಣೆಯ ಪಡೆದಿದೆ ಎಂದು ಕೇಳಿ ಬಂದಿದೆ. ಹೌದು ರಾಜಣ್ಣ ಅವರು 2006ರಲ್ಲಿ ನಿಧನರಾಗುತ್ತಾರೆ. ಹೌದು ಇತ್ತೀಚಿಗೆ ಪುನೀತ್ ಅವರು ಅಗಲಿಬಿಡುತ್ತಾರೆ. ಅಪ್ಪು ಅವರು ಇಷ್ಟು ಬೇಗನೆ ಎಲ್ಲರಿಂದ ದೂರ ಆಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಆದರೆ ನಾವಂದುಕೊಂಡಂತೆ ಇಲ್ಲ, ಜೀವನ.. ವಿಧಿ ಆಟವೇ ಬೇರೆಯಾಗಿತ್ತು. ಏನೇ ಆಗಲಿ ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ಆ ದೇವರು ನೋವ ತಡೆದುಕೊಳ್ಳುವ ಶಕ್ತಿ ನೀಡಲಿ. ಅವರು ಮಾಡುತ್ತಿದ್ದ ಸಮಾಜಮುಖಿ ಕೆಳಸಗಳನ್ನ ಮುಂದುವರಿಸಿಕೊಂಡು ಹೋಗುವಂತೆ ಆಗಲಿ.. ಇನ್ನು ರಾಜಣ್ಣ ಅವರು ಎಷ್ಟು ಸರಳತೆಯಿಂದ ಇರುತ್ತಿದ್ದರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..