ಕಳೆದ ವಾರ ತಾನೇ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಮೈಸೂರು ಮೂಲದ ವೈದ್ಯಯಾದ ಉಮಾ ಮಧುಸೂದನ್ ಅವರಿಗೆ ಅಮೇರಿಕಾದಲ್ಲಿ, ಡ್ರೈವ್ ಆಫ್ ಹಾನರ್ ಗೌರವ ನೀಡಲಾಗಿತ್ತು. ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತದವರು ಸೇರಿದಂತೆ, ಅಗ್ನಿಶಾಮಕ ಸಿಬ್ಬಂದಿ, ಅಂಬುಲೆನ್ಸ್ ಸಿಬ್ಬಂದಿ ಹೀಗೆ ನೂರಾರು ವಾಹನಗಳಲ್ಲಿ ಡಾ.ಉಮಾ ಅವರ ಮನೆ ಮುಂದೆ ಬಂದ ಜನರು ಇವರ ಸೇವೆಗಾಗಿ ಧನ್ಯವಾದ ತಿಳಿಸಿದ್ದರು.

ಈಗ ಮತ್ತೆ ಇದೆ ಗೌರವ ಕರ್ನಾಟಕ ಮೂಲದ ಮತ್ತೊಬ್ಬ ವೈದ್ಯರಾದ ಶ್ರೀನಿವಾಸ್ ಎಂಬುವವರನ್ನ ಡ್ರೈವ್ ಆಫ್ ಹಾನರ್ ಮೂಲಕ ಗೌರವಿಸಿದ್ದಾರೆ. ಅದರಲ್ಲೂ ಕೊರೋನಾ ವೈರಸ್ ಹಾಟ್ ಸ್ಪಾಟ್ ಎಂದೆನಿಸಿಕೊಂಡಿರುವ ನ್ಯೂಯಾರ್ಕ್ ನಲ್ಲೇ ಈ ಗೌರವ ಸಲ್ಲಿಕೆಯಾಗಿರುವುದು ವಿಶೇಷವಾಗಿದೆ.

ಡಾ.ಶ್ರೀನಿವಾಸ್ ಅವರು ನ್ಯೂಯಾರ್ಕ್ ನಲ್ಲಿ ನೆಲಸಿದ್ದು, ಅಲ್ಲಿಗೆ ನೂರಾರು ಕಾರುಗಳಲ್ಲಿ ಆಗಮಿಸಿದಾ ಸ್ಥಳೀಯ ಜನರು ಜನ ‘ಡ್ರೈವ್ ಆಫ್ ಹಾನರ್’ ಮೂಲಕ ಗೌರವ ಸಲ್ಲಿಸಿದ್ದಾರೆ. ಇನ್ನು ವೈದ್ಯ ಶ್ರೀನಿವಾಸ್ ರವರು ಕೂಡ ಅವರತ್ತ ಕೈಬೀಸಿ ವಂದನೆ ಸಲ್ಲಿಸಿದ್ದಾರೆ. ನ್ಯೂಯಾರ್ಕ್ನಲ್ಲಿರುವ ಮೌಂಟ್ ಸಿನಾಯ್ ಎಂಬ ಹಾಸ್ಪಿಟಲ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ರವರು ಕಲ್ಬುರ್ಗಿಯಲ್ಲಿ MBBS ಓದಿದ್ದು, ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ MD ಪದವಿಯನ್ನ ಮಾಡಿದ್ದಾರೆ.
